ವಿವಿಧ ಕ್ಷೇತ್ರಗಳಲ್ಲಿ ವಕೀಲರ ಪಾತ್ರ ಪ್ರಮುಖ ನ್ಯಾಯಾಧೀಶೆ ಪುಷ್ಪಾಂಜಲಿ ದೇವಿ
ಸಿರುಗುಪ್ಪ11: ಸಾಮಾಜಿಕ ರಾಜಕೀಯ ಆಥರ್ಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಕೀಲರ ವೃತ್ತಿಯು ಮಹತ್ವದ್ದಾಗಿದೆ ಎಂದು ಬಳ್ಳಾರಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಎಸ್ ಹೆಚ್ ಪುಷ್ಪಾಂಜಲಿ ದೇವಿ ಹೇಳಿದರು ನಗರದ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯದ ವಕೀಲರ ಸಂಘದ ಆವರಣದಲ್ಲಿ ಜರುಗಿದ ವಕೀಲರ ದಿನಾಚರಣೆ ಮತ್ತು ಹಿರಿಯ ವಕೀಲರಿಗೆ ಗೌರವಿಸಿ ಸನ್ಮಾನ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ಸ್ವತಂತ್ರ ಪೂರ್ವದಿಂದ ಇಲ್ಲಿಯವರೆಗೂ ವಕೀಲರ ಪಾತ್ರ ಪ್ರಮುಖವಾಗಿ ಮಹತ್ವ ವಹಿಸಿದೆ ಹಿರಿಯರ ಮಾರ್ಗದಲ್ಲಿ ಕಿರಿಯ ವಕೀಲರು ತತ್ವ ಸಿದ್ಧಾಂತದ ಮೂಲಕ ನಡೆದರೆ ಉತ್ತಮ ವಕೀಲರಾಗಲು ನೆರವಾಗುತ್ತದೆ ಅನೇಕ ಸಮಸ್ಯೆಗಳನ್ನು ವಕೀಲರ ಮೂಲಕ ಪರಿಹರಿಸಿಕೊಳ್ಳಬಹುದು ಎಂದು ಅವರು ಹೇಳಿದರು. ಸಿರುಗುಪ್ಪ ನ್ಯಾಯಾಲಯದಲ್ಲಿ 25 ವರ್ಷಕ್ಕೂ ಹೆಚ್ಚು ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ವಕೀಲರಾದ ಹೆಚ್ ಕೆ ಮಲ್ಲಿಕಾಜರ್ುನಯ್ಯ ಸ್ವಾಮಿ, ಜಿಬಿ ಗುಂಡಳ್ಳಿ, ಹನುಮೇಶ ಶೆಟ್ಟಿ, ಎಚ್ ಎಮ್ ಗುರು ಸಿದ್ದಯ್ಯ ಸ್ವಾಮಿ, ಕೆ ಪ್ರಕಾಶ್, ಕೆ ಮೊಹಮ್ಮದ್ ರಫೀಕ್, ಜಿಬಿ ಚೌದರಿ, ಜಿ ವೀರಪ್ಪ, ಸಿದ್ದಲಿಂಗಯ್ಯ ಹಿರೇಮಠ ,ವೀರಣ್ಣ ಬಿ ಪತ್ತಾರ್, ಎಚ್ ಕೆ ವೆಂಕಟೇಶ ಆಚಾರ್ ,ಎ ಶಿವರುದ್ರ ಗೌಡ, ಎನ್ ಅಬ್ದುಲ್ ಸಾಹೇಬ್ ರಾರಾವಿ, ಅಯ್ಯನಗೌಡ, ಹೆಚ್ ಎಸ್ ನಾಗನಗೌಡ, ಬಿ ಉದಯ ಶಂಕರ್, ಕೆ ವೀರೇಶ ಗೌಡ, ಅಮರೇಶ, ಮಲ್ಲಿಕಾಜರ್ುನ, ಸುರೇಶ ನಾಯಕ, ಕೆ ಮಂಜುನಾಥ, ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಬಳ್ಳಾರಿ ಜಿಲ್ಲಾ ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ ಡಿ ಪವಿತ್ರ, ಸಿರುಗುಪ್ಪ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಧೀಶ ಹಾಜಿ ಸೈಯದ್ ಮೊಹಮ್ಮದ್ ಹುಸೇನ್ ಸಾಬ್ ಯಾದವಾಡ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಯೆರೇಗೌಡ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್ ಮಂಜುನಾಥಗೌಡ, ಜಿಲ್ಲಾ ಸಾಕ್ಷರತಾ ಅಬ್ದುಲ್ ನಬಿ, ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಶಾದ್ ಅಲಿ ಮೊದಲಾದವರಿದ್ದರು.