ಸಿದ್ಧಾರೂಢ ಮಠಕ್ಕೆ ಸೇವಾರ್ಥಿಗಳ ಪ್ರಯಾಣ
ರಾಣಿಬೆನ್ನೂರ 18: ತಾಲೂಕಾ ಸಿದ್ಧಾರೂಢ ಸೇವಾ ಸಮಿತಿ ವತಿಯಿಂದ ಸಿದ್ಧಾರೂಢ ಅಜ್ಜನವರ ಪರಮ ಶಿಷ್ಯರಾದ ಮೌನಯೋಗಿ, ಸ್ಥಿಥಪ್ರಜ್ಞ ಗುರುನಾಥಾರೂಢರ ಪುಣ್ಯ ತಿಥಿಯ ಅಂಗವಾಗಿ, ದಾಸೋಹಕ್ಕಾಗಿ ಅಂದಾಜು 250 ಕ್ವಿಂಟಲ್ ದವಸ ಧಾನ್ಯಗಳನ್ನು 6 ಟಾಟಾ ಎಸಿ ಮತ್ತು 2 ಲಾರಿಗಳ ಮೂಲಕ ಇಲ್ಲಿನ ಚನ್ನಪ್ಪಜ್ಜನ ಮಠದಿಂದ ಶುಕ್ರವಾರ ಹುಬ್ಬಳ್ಳಿ ಸಿದ್ಧಾರೂಢ ಮಠಕ್ಕೆ ಸೇವಾರ್ಥಿಗಳು ಪ್ರಯಾಣ ಬೆಳೆಸಿದರು.
ತಾಲೂಕಾ ಸಿದ್ಧಾರೂಢ ಸೇವಾ ಸಮಿತಿಯ ಮುಖ್ಯ ಸೇವಾರ್ಥಿ ಶ್ರೀಧರ ಅಗಸಿಬಾಗಿಲ, ಸೇವಾರ್ಥಿಗಳಾದ ಕರಬಸಪ್ಪ ಮಾಕನೂರ, ರಾಮಚಂದ್ರ್ಪ ಚವಡಣ್ಣನವರ, ಸಿದ್ದಪ್ಪ ಅಂಸಿ, ಮಹದೇವಪ್ಪ ಮಲ್ಲಾಡದ, ಡಾಽ ಕಾಂತೇಶರಡ್ಡಿ ಗೋಡಿಹಾಳ, ಹೊನ್ನಪ್ಪ ಪುಟ್ಟಕ್ಕನವರ, ಶಿವಾನಂದ ಡೊಡ್ಡನವರ ಮತ್ತು ಮಹಿಳೆಯರು ಹಾಗೂ ಮಕ್ಕಳು ಪ್ರಯಾಣದಲ್ಲಿ ಇದ್ದರು.