ಹೂವಿನ ಹಡಗಲಿ

ಪತ್ರಕರ್ತರಿಗೆ ಸರ್ಕಾರದ ಸೌಲಭ್ಯ ಸಿಗಲಿ :ಡಾ.ಹಿರಿಶಾಂತವೀರ ಸ್ವಾಮೀಜಿ

ಪತ್ರಕರ್ತರಿಗೆ ಸರ್ಕಾರದ ಸೌಲಭ್ಯ ಸಿಗಲಿ :ಡಾ.ಹಿರಿಶಾಂತವೀರ ಸ್ವಾಮೀಜಿ

ಹೂವಿನ ಹಡಗಲಿ 28: ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುವ ಪತ್ರಕರ್ತರಿಗೆ ಸರ್ಕಾರ ಸೌಲಭ್ಯ ಒದಗಿಸಲು ಕ್ರಮ ವಹಿಸಬೇಕು ಎಂದು ಡಾ ಹಿರಿಶಾಂತವೀರ ಮಹಾಸ್ವಾಮಿಗಳು ಹೇಳಿದರು.ಪಟ್ಟಣದ ರಾಜೀವ ಗಾಂಧಿ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ಪ್ರೆಸ್ ಕ್ಲಬ್ ಬೆಂಗಳೂರು ಹೂವಿನ ಹಡಗಲಿ ಘಟಕ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು. 

ಸಮಾಜದ ಅಭಿವೃದ್ಧಿಗೆ ಪತ್ರಕರ್ತರ ಕೊಡುಗೆ ಅಪಾರ.ಗ್ರಾಮೀಣ ಪ್ರದೇಶ ಒಳಗೊಂಡಂತೆ ತಾಲೂಕು ಜಿಲ್ಲಾ ರಾಜ್ಯ ರಾಷ್ಟ್ರ ಮಟ್ಟದ ವರ್ತಮಾನದ ಸುದ್ದಿ ಹಂಚುವಲ್ಲಿ ಪತ್ರಿಕೆ ಪತ್ರಕರ್ತರ ಸೇವೆ ಅನನ್ಯ ಎಂದು ಬಣ್ಣಿಸಿದರು.ಪತ್ರಕರ್ತರಿಗೆ ಬಸ್ ಪಾಸ್ ಸೌಕರ್ಯ ಇನ್ನಿತರೆ ಬೇಡಿಕೆಗಳನ್ನು ಜನಪ್ರತಿನಿಧಿಗಳು ಈಡೇರಿಸಬೇಕೆಂದು ಹೇಳಿದರು.ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿ ಪತ್ರಿಕಾ ಧರ್ಮವನ್ನು ಎತ್ತಿ ಹಿಡಿಯುವ ಕೆಲಸ ಮಾಡಿರಿ ಎಂದು ಹೇಳಿದರು. 

ಮಜ್ದಾರಾ ಟ್ರಸ್ಟ್‌ ನ ಹಜರತ್ ಸುಫೀಯಾನ್ ಸಖಾಫಿ, ಫಾದರ್ ಡೆಂಜಿಲ್ ವೆಗಸ್,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ ಪಿ ಎಂ ಅಶೋಕ್,ಕರ್ನಾಟಕ ಪ್ರೆಸ್ ಕ್ಲಬ್ ನ ರಾಜ್ಯಾಧ್ಯಕ್ಷ ಬಿಚ್ಚುಗತ್ತಿ ಖಾಜಾ ಹುಸೇನ್, ಮುಖಂಡ ಎಂ ಬಿ ಬಸವರಾಜ, ಕಾ ನಿ ಪ ಸಂಘದ ಅಧ್ಯಕ್ಷ ಕೊಂಚಿಗೇರಿ ಚಂದ್ರು ವಕೀಲರಾದ ಎಸ್ ಬಸವರಾಜ ಕೋಡಿಹಳ್ಳಿ ಕೊಟ್ರೇಶ್ ಅಂಗನವಾಡಿ ಅಧ್ಯಕ್ಷೆ ಬಿ ವಿಜಯಲಕ್ಷ್ಮಿ, ಪಿ ಪ್ರಕಾಶ್, ಜೆ ಪ್ರಸನ್ನ ಕುಮಾರ್ ಇತರರು ಉಪಸ್ಥಿತರಿದ್ದರು.ಕರ್ನಾಟಕ ಪ್ರೆಸ್ ಕ್ಲಬ್‌ನ ತಾಲೂಕು ಅಧ್ಯಕ್ಷ ಹೆಚ್ ಸುಭಾಷ್ ಚಂದ್ರ ಅಧ್ಯಕ್ಷತೆ ವಹಿಸಿದ್ದರು. 

ವಿವಿಧ ಕ್ಷೇತ್ರಗಳಲ್ಲಿ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ :ಮಾಧ್ಯಮ ಸಿರಿ ಪ್ರಶಸ್ತಿ ಕೆ ಸೋಮಶೇಖರ್ ಭರಣಿ, ಎಸ್ ಎಂ ಬಸವರಾಜ ರೈತಸಿರಿ ಸೇವಾ ಪ್ರಶಸ್ತಿ :ಮೇವುಂಡಿ ಜೈರುದ್ದೀನ್ ಯೋಧರತ್ನ ಪ್ರಶಸ್ತಿ:ಡಿ ಜಗದೀಶ್ ವೈದ್ಯಕೀಯ ರತ್ನ ಪ್ರಶಸ್ತಿ:ಡಾ ಭಾರತಿ ಐ ಹಳ್ಳದ ಡಾ ಜೆ ಡಿ ಉಮೇಶ್ ಸಮಾಜ ಸೇವಾಸಿರಿ ಪ್ರಶಸ್ತಿ:ಆನಂದ್ ಡೊಳ್ಳಿನ,ಉದಯ್ ಎಲಿವಾಳ ಶಿರಾಜ್ ಅಹಮದ್ ಸಹಕಾರಿ ಸೇವಾರತ್ನ ಪ್ರಶಸ್ತಿ:ಸಂತೋಷ ಕೊಟಗಿ ವಿದ್ಯಾಭೂಷಣ ಪ್ರಶಸ್ತಿ:ಎಂ ಪಿ ಎಂ ಸುನೀತಾ ಪಿ ಪ್ರಕಾಶ್ ಜೆ ಪ್ರದೀಪ್ ಕುಮಾರ್ ಬಿ ವೀರೇಶ ಪ್ರಶಸ್ತಿ ಪ್ರದಾನ ಮಾಡಲಾಯಿತು.ಕನ್ನಡ ಕುವರ ಕುವರಿ ಪ್ರಶಸ್ತಿ: ಇದೇ ವೇಳೆ ಸರ್ಕಾರಿ ಅನುದಾನಿತ ಅನುದಾನರಹಿತ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆಗಳ 2023-24 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಥಮ ಭಾಷೆ ಕನ್ನಡ ದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಕುವರ ಕುವರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಪತ್ರಕರ್ತರಾದ ಸುರೇಶ ಹಲಗಿ ಎಂ ದಯಾನಂದ, ಕೆ ಹೆಚ್ ಎಂ ಗುರುಪ್ರಸಾದ್, ಸುರೇಶ ಅಂಗಡಿ, ಹಡಗಲಿ ಬಸವರಾಜ ನಿರ್ವಹಿಸಿದರು. 


ಸುದ್ದಿ ಓದಿ