ಜಮಖಂಡಿ

ಶಾಸಕ ಗುಡಗುಂಟಿ ಗುಂಡಾವರ್ತನೆ ಖಂಡಿಸಿ ಪತ್ರಕರ್ತರ ಪ್ರತಿಭಟನೆ

ಶಾಸಕ ಗುಡಗುಂಟಿ ಗುಂಡಾವರ್ತನೆ ಖಂಡಿಸಿ ಪತ್ರಕರ್ತರ ಪ್ರತಿಭಟನೆ

ಜಮಖಂಡಿ 31: ಪತ್ರಕರ್ತರ ಮೇಲೆ ಶಾಸಕ ಜಗದೀಶ ಗುಡಗುಂಟಿ ಅಧಿಕಾರದ ದರ​‍್ ಹಾಗೂ ಗುಂಡಾವರ್ತನೆ ಮೆರೆದಿದನ್ನು ಖಂಡಿಸಿ, ಶಾಸಕರ ವಿರುದ್ಧ ಪತ್ರಕರ್ತರು ಘೋಷಣೆಯನ್ನು ಕೂಗಿ ಪ್ರತಿಭಟನೆ ನಡೆಸಿದ ಘಟನೆ ಜರುಗಿತು.  

ನಗರದ ಮಿನಿವಿಧಾನ ಸೌಧದ ಆವರಣದಲ್ಲಿ ನಡೆದ ಶಾಸಕರ ನಡುವೆ ಹಾಗೂ ಪತ್ರಕರ್ತರ ಮಧ್ಯ ಕೆಲಕಾಲ ಮಾತಿನ ಚಕುಮಕಿ ನಡೆಯಿತು. ಪ್ರತಕರ್ತರ ಮೇಲೆ ತಮ್ಮ ಅಧಿಕಾರದ ದರಿ​‍್ದಂದ ಗುಂಡಾವರ್ತನೆ ಮೆರೆದಿದ್ದಾರೆಂದು ಆರೋಪಿಸಿದರು. ಅ,15 ರಂದು ನಡೆಯುವ ಸ್ವಾತಂತ್ಯ ದಿನಾಚರಣೆಯ ಪೂರ್ವಭಾವಿ ಸಭೆಯು ತಹಶೀಲ್ದಾರ ಕಚೇರಿಯ ಸಭಾ ಭವನದಲ್ಲಿ ನಡೆದಿರುವ ಹಿನ್ನಲೆ. ಪ್ರತಿವರ್ಷದಂತೆ ಸ್ಥಳೀಯ ಪತ್ರಕರ್ತರ ಸಂಘಟನೆಗಳಿಗೆ ಸನ್ಮಾನ ಸಮಾರಂಭವನ್ನು ಕೈಗೊಳ್ಳಬೇಕೆಂದು ಸಭೆಯಲ್ಲಿ ತೀರ್ಮಾನಿಸುತ್ತಿದ್ದಂತೆ. ಶಾಸಕ ಜಗದೀಶ ಗುಡಗುಂಟಿ ಅವರು ಮಧ್ಯದಲ್ಲಿ ಮಾತನಾಡಿ, ಅಧಿಕೃತವಾಗಿ ಇರುವುದು ಒಂದೇ ಸಂಘಟನೆ. ಅದಕ್ಕೆ ಮಾತ್ರ ಆದ್ಯತೆ ನೀಡಿ ಸನ್ಮಾನಿಸಲಾಗುವುದು. ಉಳಿದ ಪತ್ರಕರ್ತರ ಸಂಘಟನೆಗಳಿಗೆ ಸನ್ಮಾನಿಸಲು ಆಗುವುದಿಲ್ಲ ಎಂದು ತಮ್ಮ ಅಧಿಕಾರದ ದರ​‍್ವನ್ನು ದರ​‍್ ಮೆರೆದು. ನಾನು ಯಾರಿಗೂ ಹೆದರುವುದಿಲ್ಲ ಎಂದು ಪತ್ರಕರ್ತರ ಮೇಲೆ ಗುಂಡಾವರ್ತನೆಯನ್ನು ಸಭೆಯಲ್ಲಿ ಮೆರೆದಿದ್ದಾರೆಂದು ಆರೋಪಿಸಿದರು. 

ಶಾಸಕ ಮತ್ತು ಪತ್ರಕರ್ತರ ಮಧ್ಯ ವಾಗ್ವಾದ : 

ಸ್ಥಳೀಯ ಪತ್ರಕರ್ತರ ಸಂಘಟನೆಗಳು ರಾಜ್ಯಮಟ್ಟದ ಸಂಘಟನೆಗಳಾಗಿದ್ದು. ಅವುಗಳು ಅನಧಿಕೃತವಾಗಿದ್ದಾವೆಂದು ಹೇಗೆ ಹೇಳುತ್ತಿರಿ, ಹಾಗಾದರೆ ಅಧಿಕೃತವಾಗಿರುವ ಸಂಘಟನೆಯು ಯಾವುದು ಎಂದು ಪತ್ರಕರ್ತರು ಶಾಸಕನ್ನನು ಪ್ರಶ್ನಿಸಿದರು. ಶಾಸಕ ತಡವರಿಸಿ ಮಾತನಾಡುತ್ತಾ, ನಾನು ಹಾಗೆ ಹೇಳಿಲ್ಲ ಎಂದು ಹಾರಿಕೆಯ ಉತ್ತರ ನೀಡುವ ಪ್ರಸಂಗ ನಡೆಯಿತು. ಪತ್ರಕರ್ತರ ನಡುವೆ ಹಾಗೂ ಶಾಸಕರ ನಡುವೆ ಕೆಲಕಾಲ ಮಾತಿನ ಚಕುಮಕಿ ನಡೆಯುತ್ತಿದಂತೆ. ಮತ್ತೇ ಪತ್ರಕರ್ತರ ಮೇಲೆ ಅಧಿಕಾರದ ದರ​‍್ ಹಾಗೂ ಗೂಂಡಾವರ್ತನೆಯನ್ನು ಮೆರೆಯುತ್ತಿರುವ ಘಟನೆ ಜರುಗಿತು. 

ಶಾಸಕರ ವಿರುದ್ಧ ಪತ್ರಿಭಟನೆ :  

ಪತ್ರಕರ್ತರ ಮೇಲೆ ಅಧಿಕಾರದ ದರ​‍್ ಹಾಗೂ ಗೂಂಡಾವರ್ತನೆಯನ್ನು ಮೆರೆದಿದನ್ನು ಖಂಡಿಸಿ, ಶಾಸಕರ ವಾಹನದ ಮುಂದೆ ಕೆಲಕಾಲ ಪತ್ರಿಭಟನೆಯನ್ನು ನಡೆಸಿ, ಘೋಷಣೆಯನ್ನು ಕೂಗಿದರು. ನಗರದ ಎ,ಜಿ,ದೇಸಾಯಿ ಸರ್ಕಲ್ ಬಳಿ ಕೆಲವು ಪತ್ರಕರ್ತರ ಸಂಘಟನೆಯ ಪತ್ರಕರ್ತರು ಸೇರಿಕೊಂಡು ಶಾಸಕರ ವಿರುದ್ದ ರಸ್ತೆ ತಡೆಯನ್ನು ನಡೆಸಿ ಪ್ರತಿಭನೆಯನ್ನು ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು. 


ಸುದ್ದಿ ಓದಿ