ಮನರಂಜನೆ

ಜಾನಿ ಜಾನಿ ಎಸ್‍ ಪಪ್ಪಾ ಹೇಳಿಕೊಟ್ರು ಯಥರ್ವನ ಅಪ್ಪಾ

ಜಾನಿ ಜಾನಿ ಎಸ್‍ ಪಪ್ಪಾ ಹೇಳಿಕೊಟ್ರು ಯಥರ್ವನ ಅಪ್ಪಾ

ಬೆಂಗಳೂರು, ಅ 10 : ಲಾಕ್ ಡೌನ್ ಸಮಯವನ್ನು ಸಂತಸದಿಂದ ಕಳೆದಿರುವ   ರಾಕಿಂಗ್ ಸ್ಟಾರ್ ಯಶ್ ಮುದ್ದು ಮಗ ಯಥರ್ವನಿಗೆ 'ಜಾನಿ ಜಾನಿ ಎಸ್ ಪಪ್ಪಾ' ಹೇಳಿಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ   ವಿಡಿಯೋವನ್ನು ನಟಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಯಶ್ ಮಗನಿಗೆ 'ಜಾನಿ ಜಾನಿ ಎಸ್ ಪಪ್ಪಾ' ಹೇಳಿಕೊಡುತ್ತಿದ್ದರೆ ಮಗ ಕೂಡ ಅಪ್ಪನ ಜೊತೆ ಹ ಹ್ಹ ಹಾ ಅಂತ ಹಾಡಿದ್ದಾನೆ.   ಈ   ಕ್ಯೂಟ್ ವಿಡಿಯೋ ಈಗ ವೈರಲ್ ಆಗಿದ್ದು ಅಭಿಮಾನಿಗಳಿಂದ ಭಾರಿ ಮೆಚ್ಚಿಗೆ ವ್ಯಕ್ತವಾಗುತ್ತಿದೆ. ರಾಧಿಕಾ ಪಂಡಿತ್ ಲಾಕ್ ಡೌನ್ ಡೈರಿಸ್ ಎಂದು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇತ್ತೀಚಿಗೆ ನಟ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಎಂಗೇಜ್ ಮೆಂಟ್ ಫೋಟೋ ನೋಡಿದ ಯಥರ್ವ್, ಆ ಫೋಟೋ ಬಳಿ ಹೋಗಿ ಅಪ್ಪಅಮ್ಮನನ್ನು ಗುರುತಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಯಥರ್ವ ನಿಗೆ ಅಕ್ಕ ಆಯ್ರಾ ಸಹಕರಿಸುತ್ತಿರುವ   ವಿಡಿಯೋ ಸಹ ವೈರಲ್ ಆಗಿದೆ.ಮುದ್ದು   ಯಥರ್ವನಿಗೆ ಇದೀಗ 11ತಿಂಗಳು ತುಂಬಿದ್ದು,  ಒಂದು ವರ್ಷಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಮಗನಿಗೆ ವರ್ಷ ತುಂಬಿದ ಸಂಭ್ರಮವನ್ನು ಆಚರಿಸಲು ಯಶ್ ದಂಪತಿ ತಯಾರಾಗಿದ್ದಾರೆ. ಅಂದಹಾಗೆ  ಯಶ್ ಕೆಜಿಎಫ್-2 ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. 

   

ಸುದ್ದಿ ಓದಿ