ಬೈಲಹೊಂಗಲ

ಉದ್ಯೋಗಮೇಳ ಸ್ವಾವಲಂಬನೆ ಜೀವನ ನಡೆಸಲು ಸಹಕಾರಿ: ಪಾಟೀಲ

ಉದ್ಯೋಗಮೇಳ ಸ್ವಾವಲಂಬನೆ ಜೀವನ ನಡೆಸಲು ಸಹಕಾರಿ: ಪಾಟೀಲ

ಲೋಕದರ್ಶನ ವರದಿ

ಬೈಲಹೊಂಗಲ 12: ಬಡ ಮತ್ತು ಮಧ್ಯಮ ವರ್ಗದ ನಿರುದ್ಯೋಗ ವಿದ್ಯಾವಂತ ಯುವಕರಿಗೆ ಉದ್ಯೋಗಮೇಳ ಸ್ವಾವಲಂಬನೆ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಕಾಡಾ ಅಧ್ಯಕ್ಷ  ಡಾ.ವಿಶ್ವನಾಥ ಪಾಟೀಲ ಹೇಳಿದರು.

    ಅವರು ಪಟ್ಟಣದ ಕೆಆರ್ಸಿಎಸ್ ಪದವಿ ಕಾಲೇಜಿನಲ್ಲಿ ಕೆಆರ್ಸಿಇಎಸ್ ಶಿಕ್ಷಣ ಸಂಸ್ಥೆ,  ಡಾ.ವಿಶ್ವನಾಥ ಪಾಟೀಲ ಅಭಿಮಾನಿ ಬಳಗದ ಸಹಯೋಗದಲ್ಲಿ ನಡೆದ ಬಹತ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ಆಧುನಿಕ ವೈಜ್ಞಾನಿಕ ಯುಗದಲ್ಲಿ ಸಾಕಷ್ಟು ಯುವಕರು ಪದವಿಗಳನ್ನು ಪಡೆದು ಇದರಲ್ಲಿ ಕೆಲವರು ಸ್ವಯಂ ಉದ್ಯೋದಲ್ಲಿ ತೊಡಗಿಸಿಕೊಂಡು ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಇನ್ನೂ ಕೆಲವರು ನೌಕರಿಗಾಗಿ ಅಲೆದಾಡುತ್ತಿದ್ದಾರೆ ಇದನ್ನು ನನ್ನ ಅಭಿಮಾನಿ ಬಳಗ ಗಮನಿಸಿ ಕೆ.ಆರ್.ಸಿ.ಸಿ.ಎಸ್. ಸಹಯೊಗದಲ್ಲಿ ಉದ್ಯೋಗಮೇಳವನ್ನು ಆಯೋಜಿಸಿ ಅವರಿಗೆ ಉದ್ಯೋಗ ನೀಡಬೇಕು ಎನ್ನುವ ಮಹಾದಾಸೆಯನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಉದ್ಯೋಗ ಮೇಳದಲ್ಲಿ ಹಲವಾರು ಕಂಪನಿಗಳು ಪಾಲ್ಗೊಂಡಿದ್ದು ಇವರೊಂದಿಗೆ ಅಗತ್ಯ ಕಾಗದ ಪತ್ರಗಳೊಂದಿಗೆ ಯುವಕರು ಸಹಕರಿಸಬೇಕು ಎಂದರು.   

      ಪ್ರಾಧ್ಯಾಪಕ ಡಾ. ಎಸ್.ಎಂ.ಲೋಕಾಪೂರ ಮಾತನಾಡಿ, ಸಂಘಟನಾತ್ಮಕವಾಗಿ ಪಟ್ಟಣದಲ್ಲಿ ಯುವಕರಿಗೆ ಮಾರ್ಗದರ್ಶನ ಮಾಡುತ್ತಿರುವ ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲರು ಅವರ ಅಭಿಮಾನಿ ಬಳಗದವರು ಉದ್ಯೋಗ ಮೇಳ ನಡೆಸಿ ಅನೇಕ ಉದ್ಯೋಗಾಕಾಂಕ್ಷಿಗಳನ್ನು  ಬದುಕಿಗೆ ದಾರಿ ಮಾಡಿಕೊಟ್ಟಿದ್ದಾರೆ. ಇನ್ನಷ್ಟು ಉದ್ಯೋಗ ಮೇಳಗಳನ್ನು ಹಮ್ಮಿಕೊಳ್ಳುವ ಮೂಲಕ ಯುವಕರಿಗೆ ಮಾರ್ಗದರ್ಶನ ಮಾಡುವಂತಾಗಬೇಕೆಂದರು.

      ಸಾನಿಧ್ಯ ವಹಿಸಿದ ಡಾ. ಮಹಾಂತಯ್ಯ ಶಾಸ್ತ್ರಿ ಮಾತನಾಡಿ, ಉದ್ಯೋಗಂ ಪುರುಷ ಲಕ್ಷಣಂ ಎಂಬ ತತ್ವದಡಿ ಯುವಕರನ್ನು ಕಾಣಲಾಗುತ್ತದೆ. ಹೀಗಾಗಿ ಯುವಕರು ಉದ್ಯೋಗ ಇಲ್ಲದೆ ಪರದಾಡುತ್ತಾರೆ. ಅಂಥವರ ಅನುಕೂಲಕ್ಕಾಗಿ ಡಾ. ವಿಶ್ವನಾಥ ಪಾಟೀಲ ಅವರು ಉದ್ಯೋಗ ಮೇಳ ನಡೆಸಿ ಯುವಕರಿಗೆ ಉದ್ಯೋಗ ಕಲ್ಪಸುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.

     ಪದವಿ ಕಾಲೇಜಿನ ಉಪ ಸಮಿತಿ ಅಧ್ಯಕ್ಷ ವಿ.ವಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಯುವ ಮುಖಂಡ ಅಮಿತ ಪಾಟೀಲ, ಸಂಘಟಕರಾದ ಸಂತೋಷ ಹರಕುಣಿ, ವಿನಯ ಪಾಟೀಲ, ಪ್ರತಾಪ ಹಡಗಿನಾಳ, ಬಿಇಡಿ ಪ್ರಾಚಾರ್ಯಾ  ಎಂ.ಬಿ.ತಲ್ಲೂರ, ಬಿಬಿಎ ಕಾಲೇಜು ಪ್ರಾಚಾರ್ಯ ಎಸ್.ಎ.ದೇಶಮುಖ, ಡಾ.ಎಂ.ಎಸ್.ಗಡೆನ್ನವರ, ಸೋಮನಾಥ ಸೊಪ್ಪಿಮಠ, ಶಾಂತಾ ಮಡ್ಡಿಕರ ಮುಂತಾದವರು ಇದ್ದರು. 

  ಸಾಕ್ಷಿ ರಜಪೂತ ಪ್ರಾಥರ್ಿಸಿದರು. ಪ್ರಾಚಾರ್ಯ ಬಿ.ಬಿ.ಬೂದಿಹಾಳ ಸ್ವಾಗತಿಸಿದರು. ಎಂ.ಜಿ.ನಾಗನೂರ ನಿರೂಪಿಸಿದರು. ಎಮ್. ಎಸ್. ಕಮ್ಮಾರ ವಂದಿಸಿದರು.

   ಬಹುಪ್ರಶಸ್ತಿ ಪುರಸ್ಕೃತ  ಪತ್ರಕರ್ತ ಸಿ.ವಾಯ್. ಮೆಣಸಿನಕಾಯಿ ಅವರನ್ನು ಸನ್ಮಾನಿಸಲಾಯಿತು. 

 ಈ ಉದ್ಯೋಗ ಮೇಳದಲ್ಲಿ 11 ನೇರ ಸಂದರ್ಶನದ ಕಂಪನಿಗಳು, 09 ವಚರ್ುವಲ್ ಸಂದರ್ಶನದ ಕಂಪನಿಗಳು ಭಾಗವಹಿಸಿದ್ದವು. ಸುಮಾರು 2500ಕ್ಕೂ ಹೆಚ್ಚು ಉದ್ಯೋಗಾಂಕ್ಷಿಗಳು ಭಾಗವಹಿಸಿದ್ದರು, 870 ಅಭ್ಯರ್ಥಿಗಳು ಶಾಟರ್್ಲಿಸ್ಟ್ ಆಗಿದ್ದಾರೆ. 500 ಕ್ಕೂ ಹೆಚ್ಚು ಅಭ್ಯಥರ್ಿಗಳು ಉದ್ಯೋಗವನ್ನು ಪಡೆದಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕ ಸಂತೋಷ ಹರಕುಣಿ, ವಿನಯ ಪಾಟೀಲ, ಪ್ರತಾಪ ಹಡಗಿನಾಳ, ರಾಹುಲ ಮಲ್ಲಾಪೂರ, ಪ್ರಕಾಶ ಹೋಟಿ ತಿಳಿಸಿದ್ದಾರೆ 

ಸುದ್ದಿ ಓದಿ