ಧಾರವಾಡ - ಹುಬ್ಬಳ್ಳಿ

ನಾಳೆ ಐಟಿಐ ವಿದ್ಯಾರ್ಥಿಗಳಿಗಾಗಿ ಉದ್ಯೋಗ ಮೇಳ

ನಾಳೆ ಐಟಿಐ ವಿದ್ಯಾರ್ಥಿಗಳಿಗಾಗಿ ಉದ್ಯೋಗ ಮೇಳ

ಧಾರವಾಡ 12: ಇಲ್ಲಿನ ವಿದ್ಯಾಗಿರಿಯ ಜೆ.ಎಸ್‌.ಎಸ್ ಮಂಜುನಾಥೇಶ್ವರ ಐ.ಟಿ.ಐ ಕಾಲೇಜು ಜೆ.ಎಸ್‌.ಎಸ್ ಆವರಣದಲ್ಲಿ ದಿ. 14ರಂದು ರವಿವಾರ ಬೆಳಿಗ್ಗೆ 9.30ಕ್ಕೆ ಯಾವುದೇ ವಿಭಾಗದಲ್ಲಿ ಐ.ಟಿ.ಐ ಪಾಸಾದ ಅಥವಾ ಐ.ಟಿ.ಐ ಕೊನೆಯ ವರ್ಷದ ಪರೀಕ್ಷೆಗೆ ಹಾಜರಾಗುತ್ತಿರುವ ಅಭ್ಯರ್ಥಿಗಳಿಗೆ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.  

ಈ ಉದ್ಯೋಗ ಮೇಳದಲ್ಲಿ ಯಾವುದೇ ಕಾಲೇಜಿನ ಅಭ್ಯರ್ಥಿಗಳು ಭಾಗವಹಿಸಬಹುದು. ಈ ಮೇಳದಲ್ಲಿ 11 ಕಂಪನಿಗಳು 1500 ವಿವಿಧ ಹುದ್ದೆಗಳಿಗಾಗಿ ಸಂದರ್ಶನ ನಡೆಸಲಿವೆ.  

ಹುಬ್ಬಳ್ಳಿ-ಧಾರವಾಡ, ಬೆಂಗಳೂರು, ಮಂಗಳೂರು, ಶಿರಸಿ, ಶಿವಮೊಗ್ಗ, ಹೊನ್ನಾವರ ಸೇರಿದಂತೆ ಇನ್ನೂ ಅನೇಕ ಕಡೆಗಳಲ್ಲಿ ಉದ್ಯೋಗಾವಕಾಶಗಳಿವೆ. ಆಸಕ್ತರು 0836-2462202ಗೆ ಕರೆ ಮಾಡಿ ತಮ್ಮ ಹೆಸರುಗಳನ್ನು ನೋಂದಾಯಿಸಬಹುದು ಹಾಗೂ ಮಾಹಿತಿಯನ್ನು ಪಡೆಯಬಹುದಾಗಿದೆ.  

ಅಭ್ಯರ್ಥಿಗಳು ಬರುವಾಗ ಬಯೋಡೆಟಾ, ಪಾಸ್‌ಪೋರ್ಟ ಸೈಜ್ ಪೋಟೋ, ಅಂಕಪಟ್ಟಿಗಳ ನಕಲು ಪ್ರತಿಗಳು, ಆಧಾರ ಕಾರ್ಡ ನಕಲು ಪ್ರತಿ ತರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 


ಸುದ್ದಿ ಓದಿ