ರಾಣೆಬೆನ್ನೂರ

ಚೆನ್ನೇಶ್ವರ ಮಠದಲ್ಲಿ ಜ್ಞಾನ ವಾಹಿನಿ: ಸಂಸ್ಕೃತಿ ಬಿಂಬಿಸಿದ ಸಂಗೀತ ಸೌರಭ

ಚೆನ್ನೇಶ್ವರ ಮಠದಲ್ಲಿ ಜ್ಞಾನ ವಾಹಿನಿ: ಸಂಸ್ಕೃತಿ ಬಿಂಬಿಸಿದ ಸಂಗೀತ ಸೌರಭ

ರಾಣೇಬೆನ್ನೂರು 27:  ಕಲೆ ಸಾಹಿತ್ಯ ಮತ್ತು ಸಂಗೀತ ಮಾನವನ ವಿಕಾಸತೆಗೆ ತುಂಬಾ ಸಹಕಾರಿಯಾಗಿದೆ. ಸಂಗೀತಕ್ಕೆ ಮನುಷ್ಯನ ಮನಸ್ಸನ್ನು ಪ್ರಫುಲ್ಲ ಗೊಳಿಸುವ ದೈವಿಕ ಶಕ್ತಿ ಇದೆ ಎಂದು ಹೊನ್ನಾಳಿ ಹಿರೇಕಲ್ನಠ ಡಾ. ಒಡೆಯರ್ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು. ಅವರು ಸೋಮವಾರ ರಾತ್ರಿ, ಮೃತ್ಯುಂಜಯ ನಗರದ, ಚೆನ್ನೇಶ್ವರ ಮಠದ  ಸಂಸ್ಕೃತಿ ಪ್ರಸಾರ ಪರಿಷತ್ತು ಆಯೋಜಿಸಿದ್ದ, 274ನೇ ಹೋಳಿ ಹುಣ್ಣಿಮೆ  ಜ್ಞಾನವಾಹಿನಿ ಮಾಸಿಕ ಧರ್ಮಸಭೆ ಹಾಗೂ ಸಂಗೀತ ಸೌರಭ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.        

ಸಂಸ್ಕೃತಿ ಸಂಸ್ಕಾರ ಪ್ರತಿಯೊಬ್ಬ ಮಾನವನ ಅವಿಭಾಜ್ಯ ಅಂಗವಾಗಿರಬೇಕು. ಇದರಿಂದಲೇ  ಸಂಗೀತ ಸಂಸ್ಕೃತಿ ಜೊತೆಗೆ ಧಾರ್ಮಿಕ ಸಂಸ್ಕೃತಿ ಪುನರುತ್ಥಾನವಾಗಲಿದೆ ಎಂದು ನುಡಿದ ಶ್ರೀಗಳು ಸಂಗೀತ ಎಲ್ಲರಿಗೂ ಒಲಿಯುವುದಿಲ್ಲ ಇದು ಗಂಧರ್ವ ವಿದ್ಯೆ, ವಿದ್ಯೆಯನ್ನು ವಲಿಸಿಕೊಂಡವರು, ಪ್ರಭುದ್ಧಮಾನವಾಗಿ ಬೆಳೆದು ಸಂಸ್ಕೃತಿ ಮತ್ತು ಸಂಗೀತ ಸಂಸ್ಕಾರ  ಪ್ರಸಾರದ ಮೂಲಕ  ನಾಡಿನ ಅಭಿವೃದ್ಧಿಗೆ ಶ್ರಮಿಸಬೇಕಾದ ಇಂದಿನ ಅಗತ್ಯವಿದೆ ಎಂದರು. ಹೋಳಿ ಹುಣ್ಣಿಮೆ ಪ್ರಕೃತಿಯಲ್ಲಿ ಹೊಸ ಚೈತನ್ಯವನ್ನು ತರುವ ರಂಗು ರಂಗಿನ ಬಣ್ಣದ ಹಬ್ಬ. ಹಳೆಯದನ್ನು ಕಳೆದು ಹೊಸತನ್ನು  ಸ್ವಾಗತಿಸುವ ಬಹು ಮುಖ್ಯ ಹಬ್ಬವಾಗಿದೆ ಪಾಶ್ಚಿಮಾತ್ಯ ಸಂಸ್ಕೃತಿ ಭರಾಟೆಯ ಮಧ್ಯೆ ಮರೆಯಾಗುತ್ತಿರುವ ನಮ್ಮ ನೈಜ ಸಂಸ್ಕೃತಿ ಜೀವಂತವಾಗಿರುವುದು ನಮ್ಮ ನಾಡು ಮತ್ತು  ದೇಶದ ಪರಂಪರೆಯಾಗಿದೆ. ಮಠ ಮಂದಿರಗಳು ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿ, ಕಲೆ ಪ್ರೋತ್ಸಾಹಿಸಲು, ಆಶ್ರಯ ತಾಣಗಳಾಗಬೇಕಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ, ಕೆ ಎಲ್ ಎ ಶಿಕ್ಷಣ ಸಂಸ್ಥೆಯ, ಸ್ಥಳೀಯ ಆಡಳಿತ ಮಂಡಳಿ ಸದಸ್ಯ ಸುಜಿತ್ ಜಂಬಿಗಿ, ಅವರು ಸಮಾಜದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಗೊಳ್ಳಾಗಬೇಕಾದರೆ ಇಂತಹ ಧರ್ಮ ಜಾಗೃತಿಯ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯವಿದೆ. ಇಂತಹ ಧಾರ್ಮಿಕ ಸಂಸ್ಕಾರ ದೀಕ್ಷೆ ಪ್ರತಿಯೊಬ್ಬರು ಅಳವಡಿಸಿಕೊಂಡು ಧರ್ಮಾಭಿಮಾನಿಗಳಾಗಿ ಬದುಕನ್ನು ಸಾರ್ಥಕತೆ ಪಡಿಸಿಕೊಳ್ಳಲು ಮುಂದಾಗಬೇಕು ಎಂದರು.  

ಚೆನ್ನೇಶ್ವರ ಮಠದ ಉಪಾಧ್ಯಕ್ಷ ಬಸವರಾಜಪ್ಪ ಪಟ್ಟಣಶೆಟ್ಟಿ, ಕಾರ್ಯದರ್ಶಿ ಅಮೃತ ಗೌಡ  ಹಿರೇಮಠ, ಶಿಕ್ಷಕರಾದ ಜಗದೀಶ್ ಮಳಿಮಠ, ಬಿದ್ದಾಡಪ್ಪ ಚಕ್ರಸಾಲಿ, ವಿ.ಎಂ. ಕರ್ಜಗಿ, ಮೃತುಂಜಯ ಪಾಟೀಲ ಸೇರಿದಂತೆ  ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸುಧೀರ್ಘವಾಗಿ ನಡೆದ ಸಂಗೀತ ಸೌರಭ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಕಲಾವಿದರಾದ, ಅಮರೇಶ್ ಗವಾಯಿಗಳು, ಪಂಚಾಕ್ಷರಿ, ಗಣಪ್ಪ ಕುಲಕರ್ಣಿ, ಮಂಜುನಾಥ ಚಿಕ್ಕಮಠ,  ಅನುಸೂಯ ರಾಠೋಡ,  ವೀಣಾ ಬೋಸಲೆ,  ಗುಡ್ಡಪ್ಪ ಹಿಂದಿನಮನಿ, ಕಾಂತರಾಜ,  ಮೌನೇಶ ತ್ರಾಸದ, ರಜನಿ ಕರಿಗಾರ, ಮಂಜುಳಾ ಮಾಜಿಗೌಡರ  ಸೇರಿ ಬಾಲ ಕಲಾವಿದರಾದ ಯುವರಾಜ ಸೋ. ಹಿರೇಮಠ  ಗಗನ ತುಪ್ಪದ ಮೊದಲಾದವರು ಸಾಗರಪಡಿಸಿದ ವೈವಿಧ್ಯಮಯ ಸಂಗೀತ ಕಾರ್ಯಕ್ರಮವು ಸಾರ್ವಜನಿಕರ ಗಮನ ಸೆಳೆಯಿತು.  

ಪ್ರಸಾದ ಸೇವಾಕರ್ತರಾದ  ವಾಗೀಶ  ಗುತ್ತಲಮಠ , ಗೌರಿಶಂಕರ ನೆಗಳೂರು ಮಠ, ಲೀಲಾ  ಶಿ. ಗುತ್ತಲ ಮಠ, ಈರಣ್ಣ ಬಸವಣ್ಣೆಪ್ಪ ಎಲಿ ಶೋಭಾ ಜಂಬಿಗಿ,  ಶಶಿಕಲಾ ರು. ಹಳ್ಳಳ್ಳಿ ವಿರೂಪಾಕ್ಷಪ್ಪ ವಿ. ಹಳ್ಳಳ್ಳಿ, ಮೊದಲಾದವರನ್ನು ಶ್ರೀಗಳು  ಗುರುರಕ್ಷೆಯನ್ನು  ನೀಡಿ ಗೌರವಿಸಿದರು ತಾಲೂಕಾ  ವೀರಶೈವ ಜಂಗಮ ಪುರೋಹಿತ ಮತ್ತು ಅರ್ಚಕರ ಸಂಘ ದಾನೇಶ್ವರಿ ಜಾಗೃತಿ ಅಕ್ಕನ ಬಳಗ ಹಾಗೂ ಕದಳಿ ವೇದಿಕೆಯ ಅಧ್ಯಕ್ಷರು ಪದಾಧಿಕಾರಿಗಳು   ಉಪಸ್ಥಿತರಿದ್ದರು.  ರಾಚಯ್ಯ ಶಾಸ್ತ್ರಿಗಳು, ಎಂ.ಕೆ. ಹಾಲಸಿದ್ದಯ್ಯಾ ಶಾಸ್ತ್ರಿಗಳು ಧಾರ್ಮಿಕ ಸೇವಾ ಕಾರ್ಯ ನೆರವೇರಿಸಿದರು. 


ಸುದ್ದಿ ಓದಿ