ಕಾಗವಾಡ

ಬನಜವಾಡದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮ

ಬನಜವಾಡದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮ

ಕಾಗವಾಡ 18: ತಾಲೂಕಿನ ಬನಜವಾಡ ಗ್ರಾಮದಲ್ಲಿ ತಹಸಿಲ್ದಾರ್ ರಾಜೇಶ್ ಬುರ್ಲಿ ಇವರ ನೇತೃತ್ವದಲ್ಲಿ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ” ಕಾರ್ಯಕ್ರಮ ನೆರವೇರಿತು. 

ಶನಿವಾರ ದಂದು ಬನಿಜವಾಡ ಗ್ರಾಮದಲ್ಲಿ ತಾಲೂಕಾ ಆಡಳಿತ ಎಲ್ಲ ಇಲಾಖೆ ಅಧಿಕಾರಿಗಳ ಮುಖ್ಯ ಉಪಸ್ಥಿತಿಯಲ್ಲಿ ಗ್ರಾಮದ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಸ್ಥಳದಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಸಮಸ್ಯೆಗಳಿಗೆ ಪರಿಹಾರ ನೀಡಿದರು. 

ತಹಸಿಲ್ದಾರ್ ರಾಜೇಶ್ ಬುರ್ಲಿ ಇವರ ನೇತೃತ್ವದಲ್ಲಿ ಹಮ್ಮಿಕೊಂಡ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ” ಈ ಕಾರ್ಯಕ್ರಮದಲ್ಲಿ 18 ಸಾರ್ವಜನಿಕರು ತಮ್ಮ ಕುಂದು-ಕೊರತೆಗಳ ಅರ್ಜಿಗಳನ್ನು ಸಲ್ಲಿಸಿದರು, ಇವುಗಳಿಗೆ ಸ್ಥಳದಲ್ಲಿ ಪರೀಶೀಲಿಸಿ ಸ್ಪಂದಿಸಿದರು. ಬೇರೆ ಬೇರೆ ಪಿಂಚಣಿಗಳು ನೀಡಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಸಂಜೀವಕುಮಾರ್ ಸದಲಗೆ ಇವರಿಂದ ಹೆಣ್ಣುಮಕ್ಕಳಿಗೆ “ಸುಕನ್ಯ ಕರ್ನಾಟಕ ಯೋಜನೆಯ” ಪಾಸಬುಕ ನೀಡಿದರು. 

ಗ್ರಾಪಂ ಅಧ್ಯಕ್ಷ ಲ್‌ಗಮ್ಮಣಾ ಕಾಂಬಳೆ, ಸದ್ಯಸೆರಾದ ಚಂದ್ರಕಾಂತ ದಾನೊಳೆ, ಬುಡಾಸಾಬ ಸನದಿ, ಭಗಾಟೆ, ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ವೀರಣಗೌಡ ಎಗಣಗೌಡರ, ಲೋಕೋಪಯೋಗಿ ಇಲಾಖೆ ಆರ್‌.ಪಿ ಅವತಾಡೆ, ಇವರೊಂದಿಗೆ ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆ ಕೆಎಸ್‌ಆರ್ಟಿಸಿ ಸೇರಿದಂತೆ ಇನ್ನುಳಿದ ಇಲಾಖೆ ಅಧಿಕಾರಿಗಳು ಪಾಲ್ಗೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸಿದರು. 


ಸುದ್ದಿ ಓದಿ