ರಾಣೆಬೆನ್ನೂರ

28ರಂದು ವಾಲ್ಮೀಕಿ ಜಯಂತೋತ್ಸವ: ಪ್ರತಿಭಾ ಪುರಸ್ಕಾರ

28ರಂದು ವಾಲ್ಮೀಕಿ ಜಯಂತೋತ್ಸವ: ಪ್ರತಿಭಾ ಪುರಸ್ಕಾರ

ರಾಣೇಬೆನ್ನೂರು 26:  ತಾಲೂಕಾ ಆಡಳಿತ, ತಾಲೂಕು ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ  ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ವತಿಯಿಂದ ಇದೆ ಅಕ್ಟೋಬರ್ 28ರಂದು ಶನಿವಾರ  ಇಲ್ಲಿನ ತಾಲೂಕು ಪಂಚಾಯತ ಸಭಾ ಭವನದಲ್ಲಿ ಶ್ರೀ ಮಹಷರ್ಿ ವಾಲ್ಮೀಕಿ ಜಯಂತೋತ್ಸವ ಹಾಗೂ ಶೈಕ್ಷಣಿಕ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ಸಮಾರಂಭವು ಆಯೋಜಿಸಲಾಗಿದೆ ಎಂದು  ಸಮಾಜದ ತಾಲೂಕು ಅಧ್ಯಕ್ಷ ಚಂದ್ರಣ್ಣ ಬೇಡರ ಹೇಳಿದರು.           

ಗುರುವಾರ ಪ್ರವಾಸಿ ಮಂದಿರದಲ್ಲಿ ನಡೆದ ಮಾಧ್ಯಮಗೋಸ್ತಿಯಲ್ಲಿ ಇ ಕುರಿತು ಮಾತನಾಡಿದರು. ಅಂದು ಬೆಳಿಗ್ಗೆ ನಗರದ ತಳವಾರ ಗಲ್ಲಿಯ ಚೌಡೇಶ್ವರಿ ದೇವಸ್ಥಾನದಿಂದ ಮಹಷರ್ಿ ವಾಲ್ಮೀಕಿ ಶ್ರೀಗಳವರ ಭಾವಚಿತ್ರದ ಮೆರವಣಿಗೆ ಮೂಲಕ ಪ್ರಾರಂಭವಾಗಿ, ಎಂಜಿ ರಸ್ತೆ ಮೂಲಕ, ಪ್ರಧಾನ ಅಂಚೆ ಕರೆ ಧಾವಿಸಿ, ತಾಲೂಕು ಪಂಚಾಯತ ಸಭಾಭವನದಲ್ಲಿ  ಸಮಾರಂಭ ನಡೆಯುವುದು.   ಶಾಸಕ ಪ್ರಕಾಶ ಕೋಳಿವಾಡ ಉದ್ಘಾಟಿಸುವರು. ತಹಸೀಲ್ದಾರ ಹನುಮಂತಪ್ಪ ಶಿರಹಟ್ಟಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳುವರು. 

ಕೋವಿಡ್ ಕಾರಣದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ, ವಾಲ್ಮೀಕಿ ಶ್ರೀಗಳ ಜಯಂತಿಯ ಅತ್ಯಂತ ಸರಳವಾಗಿ ಆಚರಿಸುತ್ತೇವೆ ಅದೇ ರೀತಿ ಈ ಬಾರಿಯೂ ಸಹ ಸರಳವಾಗಿ ಆಚರಿಸಲಾಗುತ್ತಿದೆ.ವಾಲ್ಮೀಕಿ ಸಮಾಜದ ಶೈಕ್ಷಣಿಕ  ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ನಿವೃತ್ತ ನೌಕರರಿಗೆ, ಕ್ರೀಡಾ ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನ ಸನ್ಮಾನ ನಡೆಯಲಿದೆ. ಕಾರ್ಯಕ್ರಮಕ್ಕೆ ತಾಲೂಕಿನ ವಾಲ್ಮೀಕಿ ಸಮಾಜದ ಮುಖಂಡರು, ಯುವಕರು ಹಾಗೂ ನೌಕರರ ವರ್ಗದವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು  ಚಂದ್ರಪ್ಪ ಬೇಡರ ಅವರು ಕೋರಿದರು. ಮಾಧ್ಯಮಗೋಷ್ಠಿಯಲ್ಲಿ  ಸಮಾಜದ ಮುಖಂಡರಾದ ಶಶಿಧರ ಬಸೇನಾಯ್ಕರ, ರವಿಂದ್ರಗೌಡ ಪಾಟೀಲ, ಕರಬಸಪ್ಪ ಕೂಲೇರ, ನಾಗಪ್ಪ ಸಣ್ಣಮನಿ, ಬಸವರಾಜ ತಳವಾರ, ರವಿ ತಳವಾರ, ರಮೇಶ ಗೋಣಗೇರಿ, ಸುಭಾಶ ಬನ್ನಿಕೋಡ, ಶಿವಕುಮಾರ ಓಲೇಕಾರ, ಚಂದ್ರು ಬನ್ನಿಹಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು 

ಸುದ್ದಿ ಓದಿ