ಬೈಲಹೊಂಗಲ

ಅಂಬೇಡ್ಕರ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಜಯಂತಿ

ಅಂಬೇಡ್ಕರ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಜಯಂತಿ


 ಸೈದಾಪೂರ್ ಸಮೀರ್ವಾಡಿ:  ಸಮೀಪದ ಮಹಾಲಿಂಗಪುರ: ಡಾ. ಬಿ. ಆರ್‌. ಅಂಬೇಡ್ಕರ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಸ್ಥಳೀಯ ಕೆಂಗೇರಿಮಡ್ಡಿಯ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ನೇಕಾರ ಮುಖಂಡ ಮನೋಹರ ಶಿರೋಳ, ಉಪನ್ಯಾಸಕ ಶಿವಲಿಂಗ ಸಿದ್ನಾಳ, ಪತ್ರಕರ್ತ ಲಕ್ಷ್ಮಣ ಕಿಶೋರಿ ಅಂಬೇಡ್ಕರ್ ಅವರ ಜೀವನಾದರ್ಶಗಳು ಮತ್ತು ಸಾಧನೆ ಬಗ್ಗೆ ಮಾತನಾಡಿದರು. 

ಸಂಸ್ಥೆಯ ಅಧ್ಯಕ್ಷ ಶ್ರೀಶೈಲ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು.ಪುರಸಭಾ ಅಧ್ಯಕ್ಷೆ ಗೋದಾವರಿ ಬಾಟ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಪಿಕೆಪಿಎಸ್ ನಿರ್ದೇಶಕ ಈರ​‍್ಪ ದಿನ್ನಿಮನಿ, ಪುರಸಭಾ ಸದಸ್ಯ ಶೇಖರ ಅಂಗಡಿ, ಕಾನಿಪ ಅಧ್ಯಕ್ಷ ಮಹೇಶ ಆರಿ, ಕಾರ್ಯದರ್ಶಿ ಮೀರಾ ತಟಗಾರ, ಮುಖಂಡರಾದ ಭೀಮಶೀ ಗೌಂಡಿ,ಪರಶುರಾಮ ಮೇತ್ರಿ, ಚನ್ನಪ್ಪ ರಾಮೋಜಿ,ಅರ್ಜುನ ಬಂಡಿವಡ್ಡರ,ಬಂದೇನವಾಜ ಪಕಾಲಿ, ಮಹಾಲಿಂಗ ಪಾತ್ರೋಟ,ಡಾ. ಶಂಕರ ಹುಕ್ಕೇರಿ,ತಿಪ್ಪಣ್ಣ ಬಂಡಿವಡ್ಡರ,ಶಿರಾಜ್ ಪಾಂಡು, ಮಹಾಲಿಂಗಪ್ಪ ವಲ್ಲೆಪ್ಪಗೋಳ, ದೀಪು ಮೇತ್ರಿ, ಪತ್ರಕರ್ತರಾದ ಮಹೇಶ ಮಣ್ಣಯ್ಯನವರಮಠ, ನಾರನಗೌಡ ಉತ್ತಂಗಿ, ಶಿವಶಂಕರ ಕಡಬಲ್ಲವರ ಹಣಮಂತ ನಾವಿ,ಪರಶುರಾಮ.ಲಮಾಣಿಅಂದ್ದೆಪ್ಪಣ್ಣವರ,ಯೂನಸ್ ಪಠಾಣ್,ಇತರರು ಇದ್ದರು.ಸಂಸ್ಥೆಯ ವತಿಯಿಂದ ಗಣ್ಯರು ಮತ್ತು ಪತ್ರಕರ್ತರನ್ನು ಸನ್ಮಾನಿಸಿ,ಅಂಬೇಡ್ಕರ್ ಭಾವಚಿತ್ರ ನೀಡಿ ಗೌರವಿಸಲಾಯಿತು.ರವಿ ಹಲಸಪ್ಪಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು,ಶಿವಾನಂದ ನೇಗಿನಾಳ ನಿರೂಪಿಸಿ, ವಂದಿಸಿದರು. 


ಸುದ್ದಿ ಓದಿ