ಧಾರವಾಡ - ಹುಬ್ಬಳ್ಳಿ

ಜಾತ್ರಾ ಮಹೋತ್ಸವಗಳು ಕಲೆ, ಸಾಹಿತ್ಯ, ಸಂಸ್ಕೃತಿ ಅಭಿವೃದ್ದಿಯಾಗಲು ಸಹಕಾರಿ : ಅನಿತಾ ಚಳಗೇರಿ

ಜಾತ್ರಾ ಮಹೋತ್ಸವಗಳು ಕಲೆ, ಸಾಹಿತ್ಯ, ಸಂಸ್ಕೃತಿ ಅಭಿವೃದ್ದಿಯಾಗಲು ಸಹಕಾರಿ : ಅನಿತಾ ಚಳಗೇರಿ

ಧಾರವಾಡ 22; ಇಂಥಹ ಜಾತ್ರಾ ಮಹೋತ್ಸವಗಳನ್ನು ಆಯೋಜಿಸುವುದರ ಮೂಲಕ ನಾವು ನಮ್ಮ ಪರಂಪರೆ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಜೀವಂತವಾಗಿಡಲು ಸಹಕಾರಿಯಾಗಿದೆ.  ಇದರಿಂದ ನಮ್ಮ ಮನಸ್ಸು ಉಲ್ಲಾಸ ಹೊಂದುತ್ತದೆ. ಮಹಾನಗರ ಪಾಲಿಕೆ ಸದಸ್ಯೆ ಅನಿತಾ ನಾರಾಯಣ ಚಳಗೇರಿ ಹೇಳಿದರು.   

ದಿನಾಂಕ: 21.10.2024 ರಂದು ಕುಮಾರೇಶ್ವರನಗರದ ಕರಿಯಮ್ಮ ದೇವಿ ದೇವಸ್ಥಾನ ನಿರ್ವಹಣಾ ಸಂಘವು ಶ್ರೀ ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಏರಿ​‍್ಡಸಿದ್ದ ಸಂಗೀತ ನೃತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಅನಿತಾ ಚಳಗೇರಿಯವರು ಮಾತನಾಡುತ್ತ ಜಾತ್ರಾ ಮಹೋತ್ಸವಗಳಿಂದ ನಾವು ಸಾಮಾಜದ ಜನರೊಟ್ಟಿಗೆ ಬೆರೆತು ಒಳ್ಳೆಯ ಸಾಮರಸ್ಯ ಜೀವನ ನಡೆಸಬಹುದಾಗಿದೆ ಎಂದರು. 

 ಕರಿಯಮ್ಮ ದೇವಸ್ಥಾನ ನಿರ್ವಹಣಾ ಸಂಘದ ಅಧ್ಯಕ್ಷ ಪ್ರೊ. ಜಿ.ಎನ್‌.ವಿ. ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ದೇವಸ್ಥಾನದ ಉಗಮ, ಅಭಿವೃದ್ಧಿ ಕುರಿತು ವಿವರಿಸಿದರು.  ಮುಖ್ಯ ಅತಿಥಿಗಳಾಗಿ ಬಸವರಾಜ ಕೊಂಗವಾಡ, ಎಸ್‌.ಎಸ್‌.ನಿಗದಿ, ಎ.ವಿ.ಗೊಬ್ಬಣ್ಣವರ, ಜೆ.ವೈ.ತೋಟದ, ಪುಷ್ಪಾವತಿ ಚೌವ್ಹಾಣ, ಎಸ್‌.ಎಸ್‌.ಹೊಳೆಯಣ್ಣವರ ಉಪಸ್ಥಿತರಿದ್ದರು. ಆಶಾ ನಾಯಕ ಪ್ರಾರ್ಥಿಸಿದರು, ಪ್ರಕಾಶ ಬಾಳಿಕಾಯಿ ಸ್ವಾಗತಿಸಿದರು, ಶಂಕರ ಗಸ್ತಿ ನಿರೂಪಿಸಿದರು, ನಂದಾ ಗುಳೇದಗುಡ್ಡ ವಂದಿಸಿದರು.   

ನಂತರ ಜರುಗಿದ ಸಂಗೀತ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ಆನಂದಪ್ಪ ಜ್ಯೋಗಿ ಅವರ ಜಾನಪದ ಗಾಯನ, ಡಾ.ಗುರುಬಸವ ಮಹಾಮನೆ ಹಾಗೂ ಮಾ.ಸಾತ್ವಿಕ ಮಹಾಮನೆ ಅವರ ವಯೋಲಿನ್ ಜುಗಲಬಂಧಿಯಲ್ಲಿ ಭಜನ್‌ಗಳನ್ನು ಪ್ರಸ್ತುತ ಪಡಿಸಿದರು.  ವಿದುಷಿ ಭಾರ್ಗವಿ ಕುಲಕರ್ಣಿ, ಬಸವರಾಜ ಹೂಗಾರ, ಖುಶಿ ಡವಳಿ ಅವರ ಭಕ್ತಿ ಸಂಗೀತ ಕಾರ್ಯಕ್ರಮಕ್ಕೆ ತಬಲಾದಲ್ಲಿ ಮಳೆಮಲ್ಲೇಶ ಹೂಗಾರ, ಹಾರ್ಮೊನಿಯಂದಲ್ಲಿ ವಿನೋದ ಪಾಟೀಲ ಸಮರ್ಥ ಸಾಥ್ ನೀಡಿದರು.  ದರ್ಬಾರ್ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾಯನ ಜರುಗಿತು, ಲಯ ಫೌಂಡೇಶನ್‌ದ ಹರ್ಷಿಕಾ ಮತ್ತು ವೇದಿಕಾ ಅವರಿಂದ ನೃತ್ಯ ಕಾರ್ಯಕ್ರಮ ಜರುಗಿದವು.   

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಜಿ.ಎಮ್‌.ಹುಲ್ಲೂರ, ಪ್ರಭು ಹಿರೇಮಠ, ಡಾ.ಸಂಗಮೇಶ ಸವದತ್ತಿಮಠ, ಬಿ.ಎ.ಹಿರೇಮಠ, ಸಚಿನ ಉಂಡಾಳೆ, ಎನ್‌.ಜಿ.ವಾರಿ, ಎಮ್‌.ಎಸ್‌.ರಾಣೆ, ರಾಜು ಚಂದನಕರ, ಎನ್‌.ಜಿ.ಅಮೋಗಿಮಠ ಹೊಸಮನಿ, ಆತ್ಮಾನಂದ ಕಬ್ಬೂರ, ಗುರುರಾಜ ಅಕ್ಕಿ, ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ