ರಾಣೆಬೆನ್ನೂರ

ಶ್ರೀ ಹೊನ್ನಮ್ಮದೇವಿಯ ಜಾತ್ರಾ ಮಹೋತ್ಸವ

ಶ್ರೀ ಹೊನ್ನಮ್ಮದೇವಿಯ ಜಾತ್ರಾ ಮಹೋತ್ಸವ

ರಾಣೇಬೆನ್ನೂರು ಮಾ .26 ರಿಂದ ಹೊನ್ನಮ್ಮದೇವಿ ಜಾತ್ರೋತ್ಸವ. ರಾಣೆಬೆನ್ನೂರ- ಸುಕ್ಷೇತ್ರವೆಂದೇ ನಾಡಿನುದ್ದಕ್ಕೂ ಹೆಸರಾದ ತಾಲೂಕಿನ ಗುಡಿಹೊನ್ನತ್ತಿ ಗ್ರಾಮದ ಶ್ರೀ ಹೊನ್ನಮ್ಮದೇವಿಯ ಜಾತ್ರಾ ಮಹೋತ್ಸವವು ಮಾ. 26 ರಿಂದ ಮಾ.28ರವರೆಗೆ 3 ದಿನಗಳ ಕಾಲ ಬಹು ವೈಶಿಷ್ಠ್ಯಪೂರ್ಣ ಹಾಗೂ ವಿಜ್ರಂಭಣೆಯಿಂದ ನಡೆಯಲಿದೆ.                 ಮಾ. 26ರಂದು ಜಾತ್ರೋತ್ಸವಕ್ಕೆ ಚಾಲನೆ, ವಿಶೇಷ ಪೂಜೆ, ಅಭಿಷೇಕ, ರುದ್ರಾಭಿಷೇಕ,  ದೇವಿಗೆ ಉಡಿ ತುಂಬುವುದು. ಮಾ.27 ರಂದು  ಹರಕೆ ಸಲ್ಲಿಸುವುದು, ಮಂಗಳಾರತಿ ಜರುಗಲಿದೆ.       ಮಾ.28 ರಂದು ಓಕಳಿ,  ತೈಲಾಭಿಷೇಕ, ಮಹಾಮಂಗಳಾರತಿ ಸೇರಿದಂತೆ ಮತ್ತಿತರ ಪೂಜಾ/ಧಾರ್ಮಿಕ ವಿಧಾನಗಳು ಜರುಗುವವು ಎಂದು ಶ್ರೀ ಹೊನ್ನಮ್ಮದೇವಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಸುದ್ದಿ ಓದಿ