ಕನ್ನಡ ಶಾಲೆಯ ಮಕ್ಕಳಿಂದ ಪೋಲಿಯೋ ಕುರಿತು ಜಾಥಾ
ಇಂಡಿ: ಫೆ.27 ರಂದು ಹಮ್ಮಿಕೊಂಡಿರುವ ರಾಷ್ಟ್ರೀಯ ಪಲ್ಸ ಪೋಲಿಯೋ ಕಾರ್ಯಕ್ರಮವನ್ನು ನಾನಾ ಇಲಾಖೆಗಳ ಸಹಕಾರ ಸಮನ್ವಯದಿಂದ ಯಶಸ್ವಿ ಗೊಳಿಸುವಂತೆ ತಾಲೂಕಾ ವೈದ್ಯಾಧಿಕಾರಿ ಅರ್ಚನಾ ಕುಲಕರ್ಣಿ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಆಡಳಿತ ಸೌದದಲ್ಲಿ ತಹಸೀಲ್ದಾರ ಅಧ್ಯಕ್ಷತೆಯ ಸಭೆಯಲ್ಲಿ ಮಾತನಾಡಿದರು.
ತಾಲೂಕಿನ 4,84,962 ಜನಸಂಖ್ಯೆಯಲ್ಲಿ 5 ವರ್ಷಕ್ಕೂ ಚಿಕ್ಕ ಮಕ್ಕಳು 62779 ಮಕ್ಕಳಿಗೆ ಪೋಲಿಯೋ ಹನಿ ನೀಡಲಾಗುವದು. 256 ಬೂಥ್ ಕೇಂದ್ರಗಳಿದ್ದು, 512 ಲಸಿಕೆ ಹಾಕುವವರು, ಸುಪರ್ ವೈಜರ್ಸ 53, ಸಾರಿಗೆ ಬೂತ್ ಗಳು 6, ಒಟ್ಟು 86361 ಮನೆಗಳಿಗೆ ಭೇಟಿ ನೀಡಲಾಗುವದು ಎಂದರು.
ಮಕ್ಕಳಲ್ಲಿ ಅಂಗವೈಫಲ್ಯ ತಪ್ಪಿಸುವ ಸಲುವಾಗಿ ತಾಲೂಕಿನಲಿ ಆಗತಾನೆ ಜನಿಸಿದ ಮಗುವಿನಿಂದ 5 ವರ್ಷದ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗುತ್ತದೆ. ಫೆ. 27 ರಂದು ಬೆಳಗ್ಗೆ 8 ರಿಂದ ಸಂಜೆ 5 ರ ವರೆಗೆ ಬೂತ್ ಗಳಲ್ಲಿ ಪಲ್ಸ ಪೋಲಿಯೋ ಹನಿ ಹಾಕಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಎರಡು ಮತ್ತು ಮೂರನೆಯ ದಿನ ಹಾಗೂ ಪಟ್ಟಣ ಪ್ರದೇಶದಲ್ಲಿ ಎರಡು, ಮೂರು ಮತ್ತು ನಾಲ್ಕನೆಯ ದಿನವೂ ಮನೆ ಮನೆ ತೆರಳಿ ಭೇಟಿ ನೀಡಿ ಲಸಿಕೆ ನೀಡಲಾಗುತ್ತಿದೆ. ಪೋಷಕರು ಈ ಸಂದರ್ಭದಲ್ಲಿ ಸಹಕರಿಸಬೇಕು. ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ಎಲ್ಲರ ನೆರವು ಪಡೆದುಕೊಳ್ಳಲಾಗುವದು.
ಶಾಲೆ, ಅಂಗನವಾಡಿಗಳಲ್ಲಿ ಗ್ರಾ.ಪಂ ಕಾರ್ಯಾಲಯಗಳಲ್ಲಿ ಪಲ್ಸ ಪೋಲಿಯೋ ಬೂತ್ ಗಳು ನಿರ್ವಹಿಸಲು ಸ್ಥಳಾವಕಾಶ ಸೇರಿದಂತೆ ಅಗತ್ಯ ನೆರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆಗಳಿಗೆ ವಿನಂತಿಸಿಕೊಳ್ಳಲಾಗಿದೆ.
ಶಾಲಾ ಪ್ರಾರ್ಥನಾ ಸಮಯದಲ್ಲಿ ಪಲ್ಸ ಪೋಲಿಯೋ ಕುರಿತು ಶಿಕ್ಷಕರು ವಿದ್ಯಾರ್ಥಿಗಳ ಮೂಲಕ ಮಾಹಿತಿ ನೀಡಬೇಕು. ಖಾಸಗಿ ಸರಕಾರಿ ಬಸ್ ನಿಲ್ದಾಣಗಳಲ್ಲಿ ಜನವಿಡಿ ಪ್ರದೇಶಗಳಲ್ಲಿ ಪಲ್ಸ ಪೋಲಿಯೋ ಹನಿ ನೀಡಲು ಬೂತ್ ಗಳನ್ನು ತೆರೆಯಲಾಗಿದೆ.
ವಿದ್ಯುತ್ ಕಡಿತ ಬೇಡ: ಪಲ್ಸ ಪೋಲಿಯೋ ಕಾರ್ಯಕ್ರಮಕ್ಕೆ ವಿದ್ಯುತ್ ಅವಶ್ಯಕತೆ ಪ್ರಮುಖವಾಗಿತ್ತು. ಫೆ. 27 ರಿಂದ ಮಾ.2 ರ ವರೆಗೆ ನಿರಂತರವಾಗಿ 24 ಗಂಟೆಗಳ ಕಾಲವು ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಪೂರೈಸಬೇಕು ಎಂದು ವಿನಂತಿ ಮಾಡಿದರು.
ತಾ.ಪಂ ಇಓ ಸುನೀಲ ಮದ್ದಿನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುಮಂಗಲಾ ಹಿರೇಮನಿ, ಡಿ.ಎಸ್.ಕರ್ಜಗಿ, ಸುನಂದಾ ಅಂಬಲಗಿ, ಪುರಸಭೆಯ ಅಧಿಕ್ಷಕ ಸೋನಾರ, ಹುಚ್ಚಪ್ಪ ಶಿವಶರಣ, ವಿಶ್ವನಾಥ ತೆನೆಹಳ್ಳಿ, ಆಶಾ ಮುಖ್ಯಸ್ಥೆ ಭುವನೇಶ್ವರಿ ಸೇರಿದಂತೆ ಆಶಾಕಾರ್ಯಕರ್ತೆಯರು ಇದ್ದರು.