ವೀರಶೈವ ಸಮಾಜಕ್ಕೆ ಜಂಗಮರ ಕೊಡುಗೆ ಅಪಾರ
ಶಾಸಕ ಎಸ್.ಭೀಮಾನಾಯ್ಕ್ : ವೀರಶೈವ ಜಂಗಮ ಅರ್ಚಕ ಪುರೋಹಿತ ಸಂಘ ಉದ್ಘಾಟನೆ
ಹಗರಿಬೊಮ್ಮನಹಳ್ಳಿ 04 : ವೀರಶೈವ ಸಮಾಜಕ್ಕೆ ಜಂಗಮರ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಬೀಮಾನಾಯ್ಕ್ ಹೇಳಿದರು. ಪಟ್ಟಣದ ವೀರಶೈವ ಕಲ್ಯಾಣ ಮಂಟಪ ದಲ್ಲಿ ಶನಿವಾರ ವೀರಶೈವ ಜಂಗಮ ಆರ್ಚಕ ಮತ್ತು ಪುರೋಹಿತರ ಸಂಘವನ್ನು ಕ್ಷೇತ್ರದ ಶಾಸಕ ಎಸ್ .ಭೀಮನಾಯ್ಕ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಯಾವುದೇ ಕಾರ್ಯಕ್ರಮವನ್ನು ವೀರಶೈವ ಜಂಗಮರ. ಕೈಯಿಂದ ಪ್ರಾರಂಭ ಮಾಡಿಸಿದರೆ ಅದು ಸಂಸ್ಕಾರದಿಂದ ಕೂಡಿದ್ದು ಶ್ರೇಷ್ಠ ವಾಗಿರುತ್ತದೆ. ಅಲ್ಲದೇ ಯಾವುದೇ ಕಾರ್ಯ ಯಶಸ್ವಿಯಾಗುತ್ತದೆ. ಸಮಾಜವು ಶೈಕ್ಷಣಿಕ. ಧಾರ್ಮಿಕ ಹಾಗೂ ರಾಜಕೀಯವಾಗಿ ಮುಖ್ಯವಾಹಿನಿಗೆ ಬರಬೇಕು. ಸಮಾಜಕ್ಕೆ ಯಾವಾಗಲು ನಾನು ಬೆಂಬಲವಾಗಿ ನಿಲ್ಲುತ್ತೇನೆ. ವೀರಶೈವ ಜಂಗಮ ಸಮಾಜದ ಮುಖಂಡ. ರಾಜಕೀಯ ಮುತ್ಸದ್ದಿ ಎಂ.ಪಿ.ಪ್ರಕಾಶ್ ಅವರು ನನಗೆ ರಾಜಕೀಯ ನೆಲೆ ನಿಲ್ಲುವಂತೆ ಮಾಡಿದ್ದು ಎಂದಿಗೂ ಮರೆಯದ ವಿಷಯವಾಗಿದೆ.
ಜಂಗಮ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಹಾಗೂ 10 ಲಕ್ಷರೂ. ಅನುದಾನ ನೀಡಲಾಗುವುದು. ವೀರಶೈವ ಕಲ್ಯಾಣ ಮಂಟಪಕ್ಕೆ ಈಗಾಗಲೇ 24 ಲಕ್ಷ ನೀಡಲಾಗಿದೆ. ಇನ್ನೂ 60 ಲಕ್ಷ ಕಾಯ್ದಿರಿಸಲಾಗಿದೆ, ಮುಂದಿನ ದಿನಗಳಲ್ಲಿ ನಿಮ್ಮಗಳ ಆಶೀರ್ವಾದ ಇದ್ದರೇ ಶಾಸಕರ ಅನುದಾನದಲ್ಲಿ 1 ಕೋಟಿ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಮಾಜದಲ್ಲಿ ಜಂಗಮ ಸಮಾಜದ ಪಾತ್ರ ಕುರಿತು ವೇದ ಮೂರ್ತಿ ಬಸವರಾಜ ಶಾಸ್ತ್ರಿಗಳು ಮಾತನಾಡಿದರು. ಉದ್ಘಾಟನೆ ಮುನ್ನ ರೇಣುಕಾ ಚಾರ್ಯರ ಭಾವಚಿತ್ರವನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಮಕ್ಕಳು ಛದ್ಮವೇಶ ಧರಿಸಿ ಗಮನ ಸೆಳೆದರು.
ಂದಿಪುರದ ಡಾ.ಮಹೇಶ್ವರ ಸ್ವಾಮೀಜಿ, ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಸ್ವಾಮೀಜಿ, ಚರಂತೇಶ್ವರ ಸ್ವಾಮೀಜಿ, ಹಾಲ ಸಿದ್ದೇಶ್ವರ ಸ್ವಾಮೀಜಿ, ಬೆಣ್ಣಿಹಳ್ಳಿ ಸ್ವಾಮೀಜಿ, ಶಂಕರ ಸ್ವಾಮೀಜಿ, ಹನಸಿ ಮಠದ ಶಂಕರ ಸ್ವಾಮೀಜಿ, ನಾಗತಿ ಬಸಾಪುರದ ಗಿರಿರಾಜ ಹಾಲ ಸ್ವಾಮೀಜಿ, ಎಂಪಿ ಕೊಟ್ರೇಶ್, ಜಂಗಮ ಸಮಾಜದ ತಾಲ್ಲೂಕು ಅಧ್ಯಕ್ಷ ಒಎಂ. ಸುಭಾಷಚಂದ್ರಯ್ಯ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಪಂಚಮಸಾಲಿ ಸಮಾಜದ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ, ತಾಲ್ಲೂಕು ಅಧ್ಯಕ್ಷ ಅಕ್ಕಿ ಶಿವಕುಮಾರ್, ಸೊನ್ನದ ವೀರಭದ್ರಯ್ಯ, ಜ್ಞಾನೇಶ್ವರ ಯ್ಯ, ನಾಗಯ್ಯ, ಇತರರಿದ್ದರು. ಶಾರದ ಮಜುನಾಥ್ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಹೆಚ್‌ಎಂ. ಚೆನ್ನವೀರಯ್ಯಸ್ವಾಮಿ, ಸ್ವಾಗತಿಸಿದರು. ಬ್ಯಾಲಾಳ ಕರಿಬಸವನಗೌಡ ನಿರೂಪಿಸಿದರು.