ಕಾಗವಾಡ

ಜಂಬಗಿ: ಧ. ಗ್ರಾಮಾಭಿವೃಧ್ಧಿ ಯೋಜನೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ

ಜಂಬಗಿ: ಧ. ಗ್ರಾಮಾಭಿವೃಧ್ಧಿ ಯೋಜನೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ

ಜಂಬಗಿ: ಧ. ಗ್ರಾಮಾಭಿವೃಧ್ಧಿ ಯೋಜನೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ  

ಕಾಗವಾಡ 23: ವಲಯದ ಜಂಬಗಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್‌ ಕಾಗವಾಡ ತಾಲೂಕಾ ವಲಯದಿಂದ ಸಂಬರಗಿಯ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು.  


ಡಾ. ವಿರೇಂದ್ರ ಹೆಗ್ಗಡೆ ಹಾಗೂ ಡಾ. ಹೇಮಾವತಿ ಹೆಗ್ಗಡೆಯವರ ಶುಭಾಶಿರ್ವಾದಗಳೊಂದಿಗೆ ಸಂಬರಗಿ ವಲಯದ ಜಂಬಗಿಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ಪೂಜಾ ಕಾರ್ಯಕ್ರಮದಲ್ಲಿ ಮದಭಾವಿ ವಲಯ ಮೇಲ್ವಿಚಾರಕ ಸಂತೋಷ ಗಣ್ಯರನ್ನು ಸ್ವಾಗತಿಸಿದರು. ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ವೇದಿಕೆ ಮೇಲೆ ಉಪಸ್ಥಿತರಿದ್ದ ಗಣ್ಯರು ದೀಪ ಬೆಳಗಿಸಿ, ಚಾಲನೆ ನೀಡಿದರು.  


ಯೋಜನಾಧಿಕಾರಿಗಳು, ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಾಗಾವಾಡ ಯೋಜನಾ ಕಛೇರಿಯ ಪರಿಚಯ ಹಾಗೂ ಸಾಧನಾ ವರದಿಯನ್ನು ಮಂಡಿಸಿದರು. ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಗ್ಗೆ ಮತ್ತು ಬ್ಯಾಂಕ್ ಮತ್ತು ಸಂಘದ ನಡುವೆ ಬಿಸಿ ಆಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಸದಸ್ಯರಿಗೆ ಸಂಘಗಳಲ್ಲಿ ಅರ್ಥಿಕ ಶಿಸ್ತು, ಗುಣಮಟ್ಟದ ನಿರ್ವಹಣೆಯ ಜೊತೆಗೆ ಮಹಿಳೆಯರು ಸ್ವಾವಲಂಬನೆಯ ಜೀವನ ನಡೆಸುವಲ್ಲಿ ಸಂಘದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. 


ಜಂಬಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ವಾಘಮೋರೆ, ಗಣ್ಯರಾದ ಯಶವಂತ ಪಾಟೀಲ, ತುಕಾರಾಮ ಮಾಳಿ, ದತ್ತಾ ಸೂರ್ಯವಂಶಿ, ಮಲ್ಲಿಕ್ ಯಾದವಾಡ, ಡಾ. ಶಶಿಧರ್ ಕುಂಬಾರ, ಶಿಕ್ಷಕ ವಿಠ್ಠಲ ಕಣ್ಣೂರ, ಕಾಗವಾಡ ತಾಲೂಕು ಯೋಜನಾಧಿಕಾರಿ ಸಂಜೀವ ಮರಾಠಿ, ಸಂಬರಗಿ ವಲಯದ ಒಕ್ಕೂಟದ ಪದಾಧಿಕಾರಿಗಳು, ಸರ್ವ ಸದಸ್ಯರು, ಸಂಬರಗಿ ಮತ್ತು ಮದಭಾವಿ ವಲಯ ಮೇಲ್ವಿಚಾರಕರು, ಸಂಬರಗಿ ವಲಯ ಸೇವಾ ಪ್ರತಿನಿಧಿಗಳು, ವಲಯ ಸಿಎಸ್‌ಸಿ ಸೇವಾದಾರರು ಉಪಸ್ಥಿತರಿದ್ದರು. 


ಸುದ್ದಿ ಓದಿ