ಜಂಬಗಿಯ ಚಿಕ್ಕ ಸೇತುವೆ ಜಲಾವೃತ: ಯುವಕರು ಹರಿಯುವ ನೀರಿನಲ್ಲಿ ಹುಚ್ಚಾಟ
ಜಮಖಂಡಿ 31: ತಾಲೂಕಿನ ಜಂಬಗಿಯಿಂದ ಸಾವಳಗಿ ಮಾರ್ಗವಾಗಿ ಸಂಚರಿಸುವ ರಸ್ತೆಯು ಕೃಷ್ಣಾ ನದಿಯು ಉಕ್ಕಿ ಹರಿಯುವ ಹನ್ನೀರಿನಿಂದ ಸಂಪೂರ್ಣ ಜಲಾವೃತ್ತವಾಗಿದ್ದು, ಬೈಕ್ ಸವಾರರು ಹಾಗೂ ಯುವಕರು ಹರಿಯುವ ನೀರಿನಲ್ಲಿ ಹುಚ್ಚಾಟ ಮೆರೆಯುತ್ತಿರುವ ಯುವಕರಿಗೆ ಸಿಪಿಐ ಮಲ್ಲಪ್ಪ ಮಡ್ಡಿ ಲಾಠಿ ರುಚಿ ತೋರಿಸಿದರು.
ಜಮಖಂಡಿಯಿಂದ ಸಾವಳಗಿ ಮಾರ್ಗವಾಗಿ ನೂರಾರು ವಾಹನಗಳು ಹಾಗೂ ಬಸ್ ಸಂಚಾರಗಳು ಪ್ರತಿನಿತ್ಯವಾಗಿ ಸಂಚರಿಸುತ್ತಿರುವ ಮಾರ್ಗ ಸಂಪೂರ್ಣ ಜಲಾವೃತ್ತಗೊಂಡಿದೆ. ಕೃಷ್ಣೆ ತನ್ನ ಒಡ್ಡಲನ್ನು ತುಂಬಿಕೊಂಡು ಉಕ್ಕಿ ಹರಿಯುತ್ತಿದ್ದಾಳೆ. ಮಹಾರಾಷ್ಟ್ರದಲ್ಲಿ ದಾರಕಾರ ಸುರಿಯುತ್ತಿರುವ ಮಳೆಯಿಂದಾಗಿ ಹಿಪ್ಪರಗಿ ಜಲಾಶಯದಿಂದ ನೀರನ್ನು ಹೊರಬಿಡಲಾಗಿದ್ದು. ಜಂಬಗಿ ಗ್ರಾಮದ ಬಳಿ ಚಿಕ್ಕದಾದ ಬ್ಯಾರೇಜು ತುಂಬಿ ರಸ್ತೆಯ ಮೇಲೆ ನೀರು ಹರಿಯುತ್ತಿದ್ದೆ. ಕೆಲವು ಹೊಲಗದ್ದೆಗಳು ಸಂಪೂರ್ಣವಾಗಿ ಜಲಾವೃತ್ತಗೊಂಡಿದ್ದು. ಸಾವಳಗಿ ಕಡೆಯಿಂದ ಜಮಖಂಡಿಗೆ ಬರುವ ವಾಹನ ಸವಾರರು ತುಂಬಿ ಹರಿಯುವ ನೀರಲ್ಲಿ ಹುಚ್ಚಾಟ್ಟ ಮೆರೆಯುತ್ತಿರುವ ಬೈಕ್ ಸವಾರರಿಗೆ ಸಿಪಿಐ ಮಲ್ಲಪ್ಪ ಮಡ್ಡಿ ಲಾಠಿ ರುಚಿಯನ್ನು ತೋರಿಸಿದ್ದಾರೆ.
ಸಿಪಿಐ ಮಲ್ಲಪ್ಪ ಮಡ್ಡಿ ಮಾತನಾಡಿ, ತಾಲೂಕಿನಲ್ಲಿ ಎರಡು ಗ್ರಾಮದಲ್ಲಿ ಒಂದು ಪುಟ್ಟ ಬಾಲಕಿ ಹಾಗೂ ವಯೋವೃದ್ದ ನದಿಯ ನೀರಿನಲ್ಲಿ ಮುಳಗಿ ಸಾವನ್ನಪ್ಪಿದಾರೆ. ಸಾರ್ವಜನಿಕರಿಗೆ ಎಷ್ಟು ತಿಳಿಸಿ ಹೇಳಿದರು ಸಹ ಜನ ಕೇಳುತ್ತಿಲ್ಲ. ತುಂಬಿ ಹರಿಯುವ ನೀರಿನಲ್ಲಿ ಬೈಕ್ಗಳನ್ನು ಹಾಗೂ ಕಾರಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ತುಂಬಿ ಹರಿಯುವ ನದಿಯ ನೀರಿನಲ್ಲಿ ರಬಸದಲ್ಲಿ ಸಿಲುಕಿದರೆ ಕುಟುಂಬಸ್ಥರಿಗೆ ತೊಂದರೆಯಾಗುತ್ತದೆ ಎಂಬುವದು ಅರಿವು ಜನರಲ್ಲಿ ಇಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು. ಯಾರು ಈ ಮಾರ್ಗವಾಗಿ ಸಂಚರಿಸಬಾರದೆಂದು ಕೆಲವು ಪೋಲಿಸ ಸಿಬ್ಬಂದಿಗಳು ರಾತ್ರಿಯ ಸಮಯಲ್ಲಿ ಕರ್ತವ್ಯಕ್ಕೆ ನಿಯೋಜಿಸಿದರು. ರಸ್ತೆಯಲ್ಲಿ ಯಾರು ಸಂಚರಿಸಬಾರದೆಂದು ತಾವಾಗಿಯೇ ಮುಳ್ಳು ಕಂಟಿಯನ್ನು ಎಳೆದುಕೊಂಡು ಬಂದು ರಸ್ತೆ ಸಂಚಾರವನ್ನು ಬಂದ ಮಾಡಿದ್ದರು.