'ಭೂತ್ ಪೊಲೀಸ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಜಾಕ್ವೆಲಿನ್-ಯಾಮಿ
ಮುಂಬೈ, ಸೆಪ್ಟೆಂಬರ್ 4: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಯಾಮಿ ಗೌತಮ್ ಮುಂಬರುವ ಚಿತ್ರ 'ಭೂತ್ ಪೊಲೀಸ್' ನಲ್ಲಿ ಸೈಫ್ ಅಲಿ ಖಾನ್ ಮತ್ತು ಅರ್ಜುನ್ ಕಪೂರ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.
ಸೈಫ್ ಅಲಿ ಖಾನ್ ಮತ್ತು ಅರ್ಜುನ್ ಕಪೂರ್ ಈಗಾಗಲೇ 'ಭೂತ್ ಪೊಲೀಸ್' ಚಿತ್ರಕ್ಕೆ ಸಿದ್ಧತೆ ನಡೆಸಿದ್ದಾರೆ. ಅದೇ ಸಮಯದಲ್ಲಿ ಚಿತ್ರದ ನಟಿಯರ ಹೆಸರೂ ಬಹಿರಂಗಗೊಂಡಿದೆ. ಈ ಚಿತ್ರದಲ್ಲಿ ಯಾಮಿ ಗೌತಮ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿದೆ. 'ಭೂತ್ ಪೊಲೀಸ್' ಚಿತ್ರದ ನಿರ್ದೇಶಕ ಪವನ್ ಕೃಪಲಾನಿ.
ಹಿಮಾಚಲ ಪ್ರದೇಶದ ಧರ್ಮಶಾಲಾ, ಡಾಲ್ಹೌಸಿ ಮತ್ತು ಪಾಲಂಪುರದಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗುತ್ತಿದೆ. ದಂಗಲ್ ಹುಡುಗಿ ಫಾತಿಮಾ ಸನಾ ಶೇಖ್ ಮತ್ತು ಅಲಿ ಫಜಲ್ ಕೂಡ ಈ ಎಲ್ಲ ತಾರೆಯರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.