ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಗೆ ಜೆ.ಎಸ್.ಎಸ್ ವಿದ್ಯಾರ್ಥಿಗಳು ಆಯ್ಕೆ
ಧಾರವಾಡ 23:ಜೆ.ಎಸ್.ಎಸ್ ಶ್ರೀಮಂಜುನಾಥೇಶ್ವರ ಸೆಂಟ್ರಲ್ ಶಾಲೆಯ ಗ-17 ಬಾಲಕಿಯರ ಕಬಡ್ಡಿ ತಂಡವು ದಾವಣಗೆರೆಯ ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಿ.ಬಿ.ಎಸ್.ಸಿ ಕ್ಲಸ್ಟರ್ 8ರ ಕಬಡ್ಡಿ ಚಾಂಪಿಯನ್ಶಿಪ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸಿರುತ್ತಾರೆ.
ತನ್ಮೂಲಕ ಹರಿಯಾಣದ ಗ್ರೀನ್ ಲ್ಯಾಂಡ್ ಪಬ್ಲಿಕ್ ಶಾಲೆಯಲ್ಲಿ ಅಕ್ಟೋಬರ್ 17 ರಿಂದ 20ನೇ ತಾರೀಕಿನವರೆಗೆ ನಡೆಯಲಿರುವ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾಗಿರುತ್ತಾರೆ. ಸಾಧನೆಗೈದ ವಿದ್ಯಾರ್ಥಿಗಳನ್ನು ತಂಡದ ತರಬೇತುದಾರರಾದ ಮೀನಾಕ್ಷಿ ಹೊಸಮನಿ ಹಾಗೂ ಗೀರೀಶ್ ಹಾವನೂರು ಇವರನ್ನು ಜೆ.ಎಸ್.ಎಸ್ನ ಕಾರ್ಯದರ್ಶಿಗಳಾದ ಡಾಽಽ ಅಜಿತ ಪ್ರಸಾದರವರು, ಪ್ರಾಚಾರ್ಯೆ ಸಾಧನಾ ಎಸ್, ಮಹಾವೀರ ಉಪಾದ್ಯಾಯ ಹಾಗೂ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.