ಜೆ.ಎಸ್.ಎಸ್ ಐ.ಟಿ.ಐ ನೂರಕ್ಕೆ ನೂರು ಫಲಿತಾಂಶ


ಧಾರವಾಡ, 17: ಎನ್.ಸಿ.ವ್ಹಿ.ಟಿ ನವದೆಹಲಿಯಿಂದ ಅಗಷ್ಟ-2024 ರಲ್ಲಿ ಜರುಗಿದ ಐ.ಟಿ.ಐ ನ ವಾರ್ಷಿಕ ಪರೀಕ್ಷೆಯಲ್ಲಿ ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಮಂಜುನಾಥೇಶ್ವರ ಐ.ಟಿ.ಐ ಕಾಲೇಜಿನ ಇಲೆಕ್ಟ್ರೀಶಿಯನ್, ಫಿಟ್ಟರ್, ಮೆಕ್ಯಾನಿಕ್ ಡಿಸೈಲ್ ಮತ್ತು ವೆಲ್ಟರ್ ವಿಭಾಗದ ಎಲ್ಲ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿ ಕಾಲೇಜಿನ ಫಲಿತಾಂಶ ನೂರಕ್ಕೆ ನೂರರಷ್ಟಾಗಿದೆ.
ಮೆಕ್ಯಾನಿಕ್ ಡಿಸೈಲ್ ವಿಭಾಗದಲ್ಲಿ ಸೈಫ್ಅಕ್ತರ್ ಮುಜಾವರ 89.33ಅ, ವೆಲ್ಡರ್ ವಿಭಾಗದಲ್ಲಿ ಜೀಶಾನ್ ಪಠೇಲ್ 84.33ಅ, ಇಲೆಕ್ಟ್ರೀಶಿಯನ್ ವಿಭಾಗದಲ್ಲಿ ಕಿಶೋರ ಅರಳಿ 79.17ಅ ಮತ್ತು ಫಿಟ್ಟರ್ ವಿಭಾಗದಲ್ಲಿ ರವಿ ದಳವಾಯಿ 77.67ಅ ಅಂಕಗಳನ್ನು ಅಂಕಗಳಿಸಿ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ. ಸಾಧನೆಗೈದ ಎಲ್ಲ ವಿದ್ಯಾರ್ಥಿಗಳನ್ನು ಶಿಕ್ಷಕ ವೃಂದದವರನ್ನು ಸಂಸ್ಥೆಯ ಅಧ್ಯಕ್ಷ ಪೂಜ್ಯ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು, ಕಾರ್ಯಾಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಕಾರ್ಯದರ್ಶಿ ಡಾ. ಅಜಿತ ಪ್ರಸಾದರವರು ಹಾಗೂ ಪ್ರಾಚಾರ್ಯ ಮಹಾವೀರ ಉಪಾದ್ಯೆಯವರು ಅಭಿನಂದಿಸಿದ್ದಾರೆ.