ಗುಳೇಗುಡ್ಡ

ಕ್ಷೇತ್ರದಲ್ಲಿ ಜೆಡಿಎಸ್ ಪ್ರಬಲ ಪಕ್ಷ: ಮಾವಿನಮರದ

ಕ್ಷೇತ್ರದಲ್ಲಿ ಜೆಡಿಎಸ್ ಪ್ರಬಲ ಪಕ್ಷ: ಮಾವಿನಮರದ

ಗುಳೇದಗುಡ್ಡ 15: ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿನ ಅಸಮಾನತೆ ಹಾಗೂ ಕಾರ್ಯಕರ್ತರ ಕಡೆಗಣನೆಗೆ ಬೇಸತ್ತು ಅನೇಕ ಗ್ರಾಮಗಳ ಮುಖಂಡರು, ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಬರುತ್ತಿದ್ದಾರೆ. ಇದರಿಂದ ಜೆಡಿಎಸ್ ಪಕ್ಷದ ಬಲ ಹೆಚ್ಚಾಗುತ್ತಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಹೇಳಿದರು. 

ಅವರು ಸೋಮವಾರ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿ, ತಾಲೂಕಿನ ಕಟಗಿನಹಳ್ಳಿ ಗ್ರಾಮದ ಬಿಜೆಪಿ, ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರೆ​‍್ಡಗೊಂಡ ಮುಖಂಡರಿಗೆ ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು. 

ಜೆಡಿಎಸ್ ಕಾರ್ಯ ಸಾಧನೆ, ಜನಪರ ಯೋಜನೆ ಹಾಗೂ ಪಕ್ಷದಲ್ಲಿನ ಶಿಸ್ತು, ತತ್ವಸಿದ್ದಾಂತಗಳನ್ನು ಮೆಚ್ಚಿ ಮತಕ್ಷೇತ್ರದಲ್ಲಿನ ಅನೇಕ ಗ್ರಾಮಗಳ ಬಿಜೆಪಿ, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರೆ​‍್ಡಯಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತಕ್ಷೇತ್ರದಲ್ಲಿ ಜೆಡಿಎಸ್ ಪ್ರಬಲ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ವಿಶ್ವಾಸ ವ್ಯಕ್ತಪಡಿಸಿದರು. 

ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಅವರ ಸಮ್ಮುಖದಲ್ಲಿ ಕಟಗಿನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಬಿಜೆಪಿ ಪಕ್ಷದ ಹಿರಿಯ ಮುಖಂಡ ಆಂಥೋನಿ ನಡಕಟ್ಟಿನ ಹಾಗೂ ಅವರೊಂದಿಗೆ ಕಟಗಿನಹಳ್ಳಿ ಗ್ರಾಮದ ಮುಖಂಡರಾದ ಸಾಲ್ಮೋನ್ ನಡಕಟ್ಟಿನ, ಪರುಶರಾಮ ಮಲ್ಲಾರ, ಇಸ್ರೆಲ್ ಗೌಡರ, ಚಂದಪ್ಪ ಹಿರೇಕುರಬರ, ಚರವಪ್ಪ ಚಂದನ್ನವರ, ಆರೋಗ್ಯಪ್ಪ ತುಂಬರಕೊಪ್ಪ, ಶೇಖಪ್ಪ ಹಾದಿಮನಿ, ನವೀನ ಗೌಡರ, ಹನಮಂತ ಕಂಬಾರ, ಆಸಂಗೆಪ್ಪ ಗೌಡರ,  ಬಾಲಪ್ಪ ಭಜಂತ್ರಿ, ಹನಮಂತ ಭಜಂತ್ರಿ, ಮರೆನ್‌ಕುಮಾರ ಗೌಡರ, ಮರಿಯಪ್ಪ ಗೌಡರ, ಲಕ್ಷ್ಮಣ ಮಾದರ, ಸಿದ್ದಪ್ಪ ಡೊಳ್ಳಿನ ಹೀಗೆ ಅನೇಕ ಮುಖಂಡರು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷ ಸೇರೆ​‍್ಡಯಾದರು. 

ಮುಖಂಡರಾದ ಮಹೇಶ ಬಿಜಾಪೂರ, ಬಾಲು ಹುನಗುಂಡಿ, ಸಂತೋಷ ನಾಯನೇಗಲಿ, ಆರೋಗ್ಯ ಗೌಡರ, ಶೇಖರ​‍್ಪ ಗೌಡರ, ಮಹಾಂತೇಶ ಅಚನೂರ, ಸಂತೋಷ ತಿಪ್ಪಾ, ಯಮನೂರ​‍್ಪ ಮಾದರ ಸೇರಿದಂತೆ ಇನ್ನೂ ಅನೇಕರು  ಇದ್ದರು. 


ಸುದ್ದಿ ಓದಿ