ಇಂಡಿ

ಅಲ್ಪಸಂಖ್ಯಾತರ ಹಿತಕಾಯುವ ಪಕ್ಷ ಜೆಡಿಎಸ್ : ಬಿ.ಡಿ.ಪಾಟೀಲ

ಅಲ್ಪಸಂಖ್ಯಾತರ ಹಿತಕಾಯುವ ಪಕ್ಷ ಜೆಡಿಎಸ್ : ಬಿ.ಡಿ.ಪಾಟೀಲ

ಇಂಡಿ ಇಡಿ 01: ಮಾಜಿ ಪ್ರಧಾನಿ ದೇವೇಗೌಡರು ಅಧಿಕಾರದಲ್ಲಿದ್ದಾಗ ವಿಜಯಪೂರ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಿ, ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳನ್ನು ಕಾರ‌್ಯಗತಗೊಳಿಸಿದರು ಎಂದು ಇಂಡಿ ಮತಕ್ಷೇತ್ರದ ಜೆಡಿಎಸ್ ಘೋಷಿತ ಅಭ್ಯರ್ಥಿ ಬಿ.ಡಿ. ಪಾಟೀಲ ಹೇಳಿದರು.  

ಶುಕ್ರವಾರ ತಾಲ್ಲೂಕಿನ ತೆನಿಹಳ್ಳಿ ಗ್ರಾಮದಲ್ಲಿ ಪಕ್ಷ ಆಯೋಜಿಸಿದ್ದ ಕಾರ‌್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜೆಡಿಎಸ್ ಕಾರ‌್ಯಕರ್ತ ಅಕ್ತಾರ ಪಟೇಲ ಮಾತನಾಡಿ, ಜೆಡಿಎಸ್ ಪಕ್ಷವು ಅಲ್ಪಸಂಖ್ಯಾತರ ಹಿತಕಾಯುವ ಪಕ್ಷವಾಗಿದ್ದು, ಮುಂಬರುವ ರಾಜ್ಯ ವಿಧಾನಸಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬೆಂಬಲಿಸಿ, ಬಿ.ಡಿ. ಪಾಟೀಲರನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿಕೊಂಡರು. 

ಇದೇ ಸಂದರ್ಭದಲ್ಲಿ ಕೆಲವು ಸುಮಾರು ಒಂದು ಸಾವಿರ ಯುವಕರು ಜೆಡಿಎಸ್ ಪಕ್ಷಕ್ಕೆ ಸೇರೆ​‍್ಡಗೊಂಡರು.  ಅಯೂಬ ನಾಟೀಕಾರ, ಸುದ್ದು ಡಂಗಾ, ಟಿ.ಎಸ್‌. ಪೂಜಾರಿ, ಮೈಬೂಬ ಬೇವನೂರ, ನಿಯಾಜ್ ಅಗರಖೇಡ, ಅಜೀಜ ಜಾಗೀರದಾರ, ಚಂದು ಜಮಾದಾರ, ಅಮ್ಜದ ಖೂರೇಶಿ, ಇಮಾಮ ಬೇಪಾರಿ, ಸಿದ್ದಪ್ಪ ಆಳೂರ, ಶ್ರೀಶೈಲ ಹಿರೇಮಠ, ಡಿ.ಕೆ. ಪೂಜಾರಿ ದೌವಲ್ ಸೌದಾಗರ ಇದ್ದರು. 


ಸುದ್ದಿ ಓದಿ