ಹೂವಿನ ಹಡಗಲಿ

ಇಟ್ಟಿಗಿಗೆ ಬಿ.ಹನುಮಂತಪ್ಪ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನೇಮಕ

ಇಟ್ಟಿಗಿಗೆ ಬಿ.ಹನುಮಂತಪ್ಪ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನೇಮಕ

ಹೂವಿನಹಡಗಲಿ.ಮಾ.30: ಬಳ್ಳಾರಿ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವ್ಯಾಪ್ತಿಯಲ್ಲಿ ಬರುವ ಹೂವಿನಹಡಗಲಿ ವಿಧಾನ ಸಭೆ ಕ್ಷೇತ್ರದ ಹೂವಿನಹಡಗಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷರಾಗಿ ಅಟವಾಳಗಿ ಕೊಟ್ರೇಶ ಹಾಗೂ ಇಟ್ಟಿಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಬಿ.ಹನುಮಂತಪ್ಪನವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಅವರು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ತಿಳಿಸಿದರು. 

ಪಟ್ಟಣದ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಈಚೆಗೆ ಕಾಂಗ್ರೆಸ್ ಪಕ್ಷದಲ್ಲಿ ಹೂವಿನಹಡಗಲಿ,ಇಟ್ಟಿಗಿ ಅಧ್ಯಕ್ಷರು,ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನಕ್ಕೆ ತಮ್ಮ ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡಿದ್ದು, ಇದೀಗ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮಾರ್ಗದರ್ಶನದಲ್ಲಿ, ಸ್ಥಳೀಯ ನಾಯಕರ ಸಹಯೋಗದಲ್ಲಿ ತಕ್ಷಣದಿಂದ ಪಕ್ಷ ಸಂಘಟನೆಗೆ ಮುಂದಾಗಬೇಕೆಂದರು.ಇನ್ನು ಎರಡು ಸ್ಥಾನಗಳಾದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಸೋಗಿ ಹಾಲೇಶ,ಜಿಲ್ಲಾ ಉಪಾಧ್ಯಕ್ಷ ಸ್ಥಾನ, ಎಸ್‌.ಸಿ.ಸಮಿತಿ ಯುವತ್ ಅಧ್ಯಕ್ಷರಾಗಿ ಶಿವರಾಜ ನೇಮಕವನ್ನು ಸಧ್ಯದಲ್ಲೇ ಪ್ರಕಟಿಸಲಾಗುವುದು ಎಂದು ಶಾಸಕರು ತಿಳಿಸಿದರು. 

ಪುರಸಭೆ ಅಧ್ಯಕ್ಷ ಜ್ಯೋತಿಮಲ್ಲಣ್ಣ, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಬಸವನಗೌಡ ಪಾಟೀಲ,ಚಾಂದಸಾಹೇಬ್, ಜಿ.ಪಂ.ಮಾಜಿ ಸದಸ್ಯ ವಸಂತ,ಪಕ್ಕೀರ​‍್ಪ, ಬಿ.ಎಲ್‌.ಶ್ರೀಧರ, ಸೊಪ್ಪಿನ ಮಂಜುನಾಥ, ಕೆ..ಎಸ್‌.ಶಾಂತನಗೌಡ, ಶಿವರಾಜ, ಶಫಿವುಲ್ಲಾ, ಶಿವಕುಮಾರ, ಗುರುವಿನ ರಾಜಣ್ಣ ಇದ್ದರು. 


ಸುದ್ದಿ ಓದಿ