ಇಟಗಿ ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ, ರಾಜ್ಯಮಟ್ಟಕ್ಕೆ ಆಯ್ಕೆ
ರಾಣೇಬೆನ್ನೂರು 30:ಹಾವೇರಿ ಜಿಲ್ಲಾ ಮಟ್ಟದ ಕ್ರೀಡಾಕೂಟವು ಇತ್ತೀಚಿಗೆ . ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟದಲ್ಲಿ ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಓರ್ವ ವಿದ್ಯಾರ್ಥಿನಿ, ಹಾಗೂ ಓರ್ವ ವಿಶೇಷಚೇತನ ವಿದ್ಯಾರ್ಥಿ ಸ್ಪರ್ಧಾತ್ಮಕವಾಗಿ ನಡೆದ ಕ್ರೀಡಾ ಕೋಟದಲ್ಲಿ, ಪಾಲ್ಗೊಂಡು ತಮ್ಮ ಕ್ರೀಡಾ ಸಾಧನೆ ಮೆರೆದಿದ್ದಾರೆ.ವಿಕಲಚೇತನ ವಿಭಾಗದಲ್ಲಿ ರೇವಣಸಿದ್ದಪ್ಪ ಹರಪನಹಳ್ಳಿ ಈತನು ( ಗುಂಡು - ಹಾಗೂ ಬರ್ಚೆ - ಎಸೆತ) ಸ್ಪರ್ಧಿಸಿ, ಪ್ರಥಮ ಸ್ಥಾನ ಗಳಿಸಿದ್ದರೇ, ಹಾಗೂ ಇದೇ ಶಾಲೆಯ ವಿದ್ಯಾರ್ಥಿನಿ ಪ್ರಿಯಾಂಕ ಚೌಡಕಿ ಅಥ್ಲೆಟಿಕ್ಸ್ ನಲ್ಲಿ ಪ್ರತಿನಿಧಿಸಿ, ದ್ವಿತೀಯ ಸ್ಥಾನ ಪಡೆದು, ಇವರಿಬ್ಬರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯೋಪಾಧ್ಯಾಯರು, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು,ಸದಸ್ಯರು, ಅಧ್ಯಾಪಕರು, ದೈಹಿಕ ಶಿಕ್ಷಕರು, ಶಾಲೆಯ ವಿದ್ಯಾಥರ್ಿಗಳು ಮತ್ತು ಗ್ರಾಮದ ಕ್ರೀಡಾ ಸಂಘ ಮುಖಂಡರು, ಇಟಗಿ ಗ್ರಾಮಸ್ಥರು ಹಾರ್ಧಿಕವಾಗಿ ಅಭಿನಂದಿಸಿದ್ದಾರೆ