ಗ್ರಾಮ ನಗರಗಳನ್ನು ವಿದ್ಯಾನಗರವನ್ನಾಗಿ ಮಾಡಿದ್ದು ಶ್ರೀಗಳು: ಮಾಮನಿ
ಲೋಕದರ್ಶನ ವರದಿ
ಯರಗಟ್ಟಿ: ಹನ್ನೆರಡನೆಯ ಶತಮಾನದ ಮಹಾನ ಶರಣ, ಶರಣ ತತ್ತ್ವದ ಅರಿವು ಮೂಡಿಸಿದ ಹಾನಗಲ್ ಕುಮಾರೇಶ್ವರ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಗ್ರಾಮ ನಗರಗಳನ್ನು ವಿದ್ಯಾನಗರವನ್ನಾಗಿ ಮಾಡಿದ್ದು ಈ ನಾಡಿನ ಪೂಜ್ಯ ಶ್ರೀಗಳು. ಅವರ ಕೊಡುಗೆ ಅಪಾರ ಎಂದು ಶಾಸಕ ಆನಂದ ಮಾಮನಿ ಹೇಳಿದರು.
ಮುರಗೋಡದ ಮಹಾಂತ ದುರದುಂಡೀಶ್ವರ ಮಠದ ಪೀಠಾಧಿಕಾರಿ ನೀಲಕಂಠ ಸ್ವಾಮೀಜಿ ಅವರ 75ನೇ ವರ್ಷದ ಜನ್ಮದಿನದ ಅಮೃತ ಮಹೋತ್ಸವ ಅಂಗವಾಗಿ ಯರಗಟ್ಟಿಯಲ್ಲಿ ಆಯೋಜಿಸಲಾಗಿದ್ದ ಧರ್ಮ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕಡೆ ಆಜಾದಿಕಾ ಅಮೃತ ಮಹೋತ್ಸವ ಈಕಡೆ ಪೂಜ್ಯ ಶ್ರೀಗಳ 75ನೇ ಅಮೃತ ಮಹೋತ್ಸವ ಕಾರ್ಯಕ್ರಮ ಸಂತೋಷ ತಂದಿದೆ ಪೂಜ್ಯ ಶ್ರೀಗಳಿಗೆ ನಮ್ಮ ಕುಟುಂಬದಿಂದ 5 ತುಲಾಭಾರ ಸೇವೆಯನ್ನು ಮಾಡುವುದಾಗಿ ತಿಳಿಸಿದರು. ಬಸವ ಪುರಾಣ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸುವುದಾಗಿ ಮಾಮನಿ ತಿಳಿಸಿದರು.
ಶ್ರೀಗಳನ್ನು ಸಕಲ ವಾದ್ಯವೃಂದ ಮತ್ತು ಕುಂಭಮೇಳದೊಂದಿಗೆ ಸ್ವಾಗತಿಸಲಾಯಿತು.
ನೀಲಕಂಠ ಶ್ರೀಗಳು, ಮುನವಳ್ಳಿಯ ಮುರುಘಂದ್ರ ಶ್ರೀಗಳು, ಕಟಕೋಳದ ಸಚ್ಚಿದಾನಂದ ಶ್ರೀಗಳು, ಕುಂದರಗಿಯ ಅಮರಸಿದ್ಧೇಶ್ವರ ಶ್ರೀಗಳು, ಶಿವುಕುಮಾರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಹಿರಿಯರಾದ ಅಶೋಕ ಹಾದಿಮನಿ, ಉಪನ್ಯಾಸಕರಾಗಿ ವೈ. ಎಂ. ಯಾಕೋಳ್ಳಿ, ಮಾಜಿ ಜಿ. ಪಂ. ಸದಸ್ಯರಾದ ಅಜೀತಕುಮಾರ ದೇಸಾಯಿ, ಮಾಜಿ ತಾ. ಪಂ. ವಿನಯಕುಮಾರ ದೇಸಾಯಿ, ಅಮೃತ ಮಹೋತ್ಸವ ಕಮೀಟಿ ಅಧ್ಯಕ್ಷರಾದ ಎಸ್. ಟಿ. ಪಟ್ಟಣಶೆಟ್ಟಿ, ಪರ್ವತಗೌಡ ಪಾಟೀಲ, ವಿಠ್ಠಲ ದೇವರಡ್ಡಿ, ಎ. ಕೆ. ಜಮಾದಾರ, ಶ್ರೀಮಠ ಅಧ್ಯಕ್ಷರಾದ ಮಹಾಂತೇಶ ಜಕಾತಿ, ಶ್ರೀಮಠ ಕಾರ್ಯದರ್ಶಿಯಾದ ರಾಜೇಂದ್ರ ವಾಲಿ, ಶ್ರೀಮಠ ಸಂಚಾಲಕರಾದ ಶಿವಾನಂದ ಪಟ್ಟಣಶೆಟ್ಟಿ, ವಿ. ಎಂ. ಮರಡಿ, ಕುಮಾರ ಜಕಾತಿ ಸೇರಿದಂತೆ ಅನೇಕ ಮುಖಂಡರು ಹಾಗೂ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.