ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಅತೀ ಅವಶ್ಯ: ಶಾಸಕ ನ್ಯಾಮಗೌಡ
ಲೋಕದರ್ಶನ ವರದಿ,
ಜಮಖಂಡಿ 26: ನಾಡು, ನುಡಿ, ಜಲ, ಸಂಸ್ಕೃತಿಯನ್ನು ಉಳಿಸಿ ಬೆಳಸುವುದು ಅತೀ ಅವಶ್ಯವಾಗಿದೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಬಸವ ಭವನದಲ್ಲಿ ನಡೆದ ತಾಲೂಕಾ 8ನೇ ಕನ್ನಡ ಸಾಹಿತ್ಯ ಸಮೇಳನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾಷೆ ಪರಂಪರೆ ಮತ್ತು ಸಂಸ್ಕೃತಿಯನ್ನು ತಿಳಿದುಕೊಳ್ಳುವ ಜೊತೆಗೆ ಯುವಕರಿಗೆ ತಿಳಿಸಬೇಕಾಗಿದೆ. ಕನ್ನಡ ಸಾಹಿತ್ಯ ಸಮೇಳನ ಆಯೋಜಕರಿಗೆ ಶಾಲಾ-ಕಾಲೇಜಿನ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸೂಚನೆಯನ್ನು ನೀಡಿದೆ. ಕಾಲೇಜಿನ ವಿದ್ಯಾರ್ಥಿಗಳು ಸಾಹಿತ್ಯದ ಬಗ್ಗೆ ಮತ್ತು ಜಮಖಂಡಿಯ ಇತಿಹಾಸದ ಕುರಿತು ತಿಳಿದುಕೊಳ್ಳಬೇಕಾಗಿದೆ. ಈ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ. ಮಡಿಕಲ್ ಕಾಲೇಜು, ಇಂಜಿನೀಯರಿಂಗ್ ಕಾಲೇಜುಗಳ ಸ್ಥಾಪನೆ ಆದರೆ ಶಿಕ್ಷಣವು ಉನ್ನತ ಮಟ್ಟದಲ್ಲಿ ಬೆಳೆಯುತ್ತದೆ ಎಂದರು.
ಸಾಕಷ್ಟು ಭೂಮಿಗಳು ಸವಳು-ಜವಳುಯಾಗಿವೆ. ಸವಳು-ಜವಳು ನಿವಾರಣೆಯನ್ನು ಮಾಡಲು ಸರಕಾರದ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇನೆ.100 ಬೆಡ್ಗಳ ತಾಯಿ,ಮಕ್ಕಳ ಆಸ್ಪತ್ರೆಯ ಕಟ್ಟಡ ನಿರ್ಮಾಣವಾಗಿದೆ. ಸಾವಳಗಿಯಲ್ಲಿ 2 ಕೋಟಿ ರೂ,ವೆಚ್ಚದಲ್ಲಿ ನೂತನ ಬಸ್ ನಿಲ್ದಾಣದ ಕಟ್ಟಡ ಕಾಮಗಾರಿಯು ಪ್ರಾರಂಭವಾಗಿದೆ. ಬಹು ದಿನಗಳ ಬೇಡಿಕೆಯಾದ ಜಮಖಂಡಿ ಜಿಲ್ಲೆಯಾಗಬೇಕು. ಸಾವಳಗಿ ತಾಲೂಕು ಕೇಂದ್ರವಾಗಬೇಕು ಎಂದು ಬೇಡಿಕೆ ಇದೆ. ಆದರೆ ಎಲ್ಲ ರಾಜಕೀಯ ಮುಖಂಡರು ಒಂದಾದರೆ ಮಾತ್ರ ಜಿಲ್ಲೆಯನ್ನು ಮಾಡಲು ಸಾಧ್ಯವಾಗುತ್ತದೆ. ತಂದೆಯವರಾದ ದಿ,ಸಿದ್ದು ನ್ಯಾಮಗೌಡ ಅವರ ಆಸೆಯು ಜಮಖಂಡಿಯಲ್ಲಿ ಅಖಿಲ ಭಾರತ ಸಾಹಿತ್ಯ ಸಮೇಳನ ಕಾರ್ಯಕ್ರಮ ಜರುಗಬೇಕೆಂದು ಅವರ ಆಸೆಯಾಗಿತು. ಎಲ್ಲ ಸಾಹಿತ್ಯ ಆಸಕ್ತರು ಅದನ್ನು ನಡೆಸುವ ಪ್ರಯತ್ನ ಮಾಡಬೇಕು. ಅದಕ್ಕೆ ಎಲ್ಲ ರೀತಿಯಿಂದ ಸಹಾಯ-ಸಹಕಾರವನ್ನು ನೀಡುತ್ತೇನೆ ಎಂದರು.
ಕುಡಚಿ-ಬಾಗಲಕೋಟ ರೈಲು ನಿರ್ಮಾಣದ ಕಾಮಗಾರಿಗೆ ದಿ,ಸಿದ್ದು ನ್ಯಾಮಗೌಡ ಅವರ ಪ್ರಯತ್ನ ಬಹಳವಾಗಿತ್ತು. ಮಾಜಿ ರೈಲು ಸಚಿವರಾದ ಜಾಫರ ಷರೀಫ ಅವರಿಂದ ಭೂಮಿ ಪೂಜೆಯನ್ನು ನೇರವೆರಿಸಿದರು. ರೈಲು ಕಾಮಗಾರಿಗೆ 2,80 ಕೋಟಿ ರೂ,ಅನುದಾನ ರೈತರ ಭೂಸ್ವಾಧಿನಕ್ಕೆ ಸರಕಾರ ನೀಡಿತು. ಇನ್ನು 2,5 ಕೋಟಿ ರು,ಹಣ ಬಿಡುಗಡೆಯಾಗಬೇಕಾಗಿದೆ. ಅದನ್ನು ರೈತರಿಗೆ ಪರಿಹಾರವನ್ನು ನೀಡಿ. ಕೆಲಸ ಪ್ರಾರಂಭ ಮಾಡಲಾಗುತ್ತದೆ. 27ರಂದು ಖಜಿದೋಣಿಯಿಂದ ಲೋಕಾಪೂರದವರಗೆ ರೈಲು ಇಲಾಖೆಯವರು ಹಳಿಗಳ ಜೋಡಣೆಯ ಕಾರ್ಯವನ್ನು ಪ್ರಾರಂಭಿಸಲಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಸಮೇಳನದ ಅಧ್ಯಕ್ಷ ಪ್ರೋ,ಬಸವರಾಜ ಕಡ್ಡಿ, ಅಕ್ಕಮಹದೇವಿ ಮಹಿಳಾ ವಿಶ್ವವಿದ್ಯಾಲದ ಪ್ರಾಧ್ಯಾಪಕ ಡಾ,ಓಂಕಾರ ಕಾಕಡೆ, ಪ್ರಾಸ್ತಾವಿಕವಾಗಿ ಕನ್ನಡ ಸಾಹಿತ್ಯ ಸಮೇಳ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿದರು, ಕನ್ನಡ ಸಾಹಿತ್ಯ ಸಮೇಳನದ ತಾ,ಅಧ್ಯಕ್ಷ ಸಂತೋಷ ತಳಕೇರಿ ಸ್ವಾಗತಿಸಿದರು. ಶಾಲಾ ಶಿಕ್ಷಕಿ ವೃಂದದಿಂದ ನಾಡಗೀತೆ, ರೈತ ಗೀತೆಯನ್ನು ಹಾಡಿದರು.
ಕಾರ್ಯಾಧ್ಯಕ್ಷ ಎನ್,ಎಸ್,ದೇವರವರ, ಕೋಶಾಧ್ಯಕ್ಷ ಡಾ,ಟಿ,ಪಿ,ಗಿರಡ್ಡಿ, ಡಾ, ಎಚ್,ಜಿ, ದಡ್ಡಿ, ಮಾಜಿ ವಿಪ ಸದಸ್ಯ ಜಿ,ಎಸ್,ನ್ಯಾಮಗೌಡ, ಸುಶೀಲಕುಮಾರ ಬೆಳಗಲಿ, ನಗಸಭೆ ಅಧ್ಯಕ್ಷ ದಾನೇಶ ಘಾಟಗೆ, ನಗರ ಪ್ರಾಧೀಕಾರ ಅಧ್ಯಕ್ಷ ಯಮನೂರ ಮೂಲಂಗಿ, ಕನ್ನಡ ಸಂಘದ ಅಧ್ಯಕ್ಷ ಅರುಣಕುಮಾರ ಶಹಾ, ಅರ್ಜುನ ದಳವಾಯಿ, ಸಂಗಮೇಶ ಮಟ್ಟೋಳಿ, ಪಿ,ಬಿ,ಬಾಗೇನ್ನವರ, ಸಿ,ಎಂ,ನ್ಯಾಮಗೌಡ, ಎಸ್,ಆರ್,ಕಾಡಗಿ, ದೇವಲ ದೇಸಾಯಿ, ಪಿ,ಬಿ,ಅಜ್ಜನ್ನವರ, ಡಿಎಸ್ಪಿ ಶಾಂತವೀರ, ತಾ,ಪಂ ಅಧಿಕಾರಿ ರಾಮು ಅಗ್ನಿ, ಸಿಡಿಪಿಒ ಅನುರಾಧಾ ಹಾದಿಮನಿ, ವಿಶೇಷ ಜಿಲ್ಲಾಧಿಕಾರಿ,ಭೂಸ್ವಾಧೀನಾಧಿಕಾರಿ ಸಾಜೀದಅಹ್ಮದ ಮುಲ್ಲಾ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದರು.