ರಾಣೆಬೆನ್ನೂರ

ಹೋಳಿಸ್ವಯಂ ಸೇವಕರಾಗಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ

ಹೋಳಿಸ್ವಯಂ ಸೇವಕರಾಗಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ

ರಾಣೇಬೆನ್ನೂರು 24:  27ಕ್ಕೆ ನಗರದಲ್ಲಿ  ಹೋಳಿಸ್ವಯಂ ಸೇವಕರಾಗಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಡಿವೈಎಸ್ಪಿ ಗೀರೀಶ ಬೋಜಣ್ಣನವರ ಹೇಳಿದರು. ಅವರು ನಗರದಲ್ಲಿ ಹೋಳಿಹಬ್ಬದ ನಿಮಿತ್ಯ ಆಯೋಜಿಸಿದ್ದ, ಸಭಾಭವನದಲ್ಲಿ ಆಯೋಜಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ದೇಶದ ಹಬ್ಬಗಳಿಗೆ ಐತಿಹಾಸಿಕ, ಪೌರಾಣಿಕ ಹಿನ್ನಲೆ ಇದೆ. ಹಬ್ಬಗಳನ್ನು ಅನ್ಯ ಧರ್ಮೀಯರಿಗೆ ನೋವಾಗದಂತೆ ಆಚರಿಸಬೇಕು. ಅಹಿತಕರ ಘಟನೆಗೆ ಕಡಿವಾಣ ಹಾಕಿ ಸಾಮಾಜಿಕ ಜವಾಬ್ಧಾರಿಯುತವಾಗಿ ನಡೆದುಕೊಳ್ಳಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಧರ್ಮ. ಸಾಲು-ಸಾಲು ಹಬ್ಬಗಳಿರುವುದರಿಂದ ಪೊಲೀಸ್‌ರು ಅಲ್ಲಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಆದ್ದರಿಂದ ಶಾಂತಿ ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬರ ಹೊಣೆಯಾಗಿದೆ ಎಂದರು.         

ತಹಶೀಲದಾರ ಸುರೇಶ ಮಾತನಾಡಿ, ರಾಣೇಬೆನ್ನೂರು ತಾಲೂಕು ಶಾಂತಿ ಸುವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಎಲ್ಲ ಧರ್ಮದವರೂ ಸಹೋದರತ್ವ ಗುಣದಿಂದ ಬದುಕುತ್ತಿರುವದು ಶ್ಲಾಘನೀಯ. ಚುನಾವಣೆ ಘೋಷಣೆಯಾಗಿದ್ದು ನೀತಿ ಸಂಹಿತೆ ಜಾರಿಯಲ್ಲಿದೆ. ಜೊತೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಪ್ರಾರಂಭವಾಗುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಶಾಂತಿ ಇಂದ ಹಬ್ಬ ಆಚರಿಸಲು ಮುಂದಾಗಬೇಕು ಎಂದರು. ಇದೇ ಸಮಯದಲ್ಲಿ ನಗರದಲ್ಲಿ ನೀರಿನ ವ್ಯತ್ಯಯ ಇರುವುದರಿಂದ ನಗರಸಭೆಗೆ ನೀರು ಪೂರೈಸುವುದು ಸವಾಲಿನ ಕೆಲಸವಾಗಿದೆ ಆದಷ್ಟು ನಗರದ ಜನತೆ ನೀರನ್ನು ಹಿತ-ಮಿತವಾಗಿ ಬಳಸಲು ಜಾಗೃತೆ ವಹಿಸಬೇಕು ಎಂದು ಕರೆ ನೀಡಿದರು.         

ನಗರಸಭೆ ಸದಸ್ಯ ಪ್ರಕಾಶ ಪೂಜಾರ ಮಾತನಾಡಿ, ಹರಳಯ್ಯ ನಗರದಿಂದ ಬೆಂಕಿ ಕೊಡುವ ಪದ್ದತಿಯು ಅನೇಕ ತಲೆಮಾರಿನಿಂದ ನಡೆದುಕೊಂಡ ಬಂದ ಪದ್ದತಿಯಾಗಿದೆ. ಯಾವುದೇ ಕಹಿ ಘಟನೆಗಳು ಆಗದಂತೆ ಶಾಂತಿಯುತವಾಗಿ ಹಬ್ಬ ಆಚರಣೆಯಾಗಲಿ. ಪುರಷರು ಮಹಿಳಾ ಪೋಷಾಕು ಧರಿಸಿ ಅಸಭ್ಯ ವರ್ತನೆ ಮಾಡುವುದು ಸಿೊಥಯರಿಗೆ ಮಾಡುವ ಅವಮಾನ ಅದನ್ನು ನಿಲ್ಲಿಸಿ. ವಾರ್ನಿಸ್, ಕೆಮಿಕಲ್‌ಯುಕ್ತ ಬಣ್ಣ ಉಪಯೋಗಿಸುವುದು ಬೇಡ, ಯಾವುದೇ ಜಾತಿ-ಬೇಧಭಾವ ಇಲ್ಲದೇ ಕೋಮು ಸೌಹಾರ್ಧತೆಯಿಂದ ಒಗ್ಗೂಡಿ ಹಬ್ಬ ಆಚರಿಸೋಣ ಎಂದರು. 

ಶಹರ ಪೊಲೀಸ್ ಠಾಣೆಯ ಪಿಎಸ್‌ಐ ಗಡ್ಡೆಪ್ಪ ಗುಂಜಟಗಿ, ಸಿಪಿಐ ಶಂಕರ್, ನಗರಸಭೆ ಸಹಾಯಕ ಇಂಜನೀಯರ್ ಮಹೇಶ, ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಮಲ್ಲಿಕಾರ್ಜುನ ಅಂಗಡಿ, ಕೆಎಂಪಿ ಮಣಿ, ಮಲ್ಲಿಕಾರ್ಜುನ ರೊಡ್ಡನವರ ಮಾತನಾಡಿದರು. ನಗರಸಭೆ ಸದಸ್ಯ ಶಶಿಧರ ಬಸೇನಾಯ್ಕರ್, ಶೇರುಖಾನ ಕಾಬೂಲಿ, ರಮೇಶ ಮಾಕನೂರ, ಪ್ರಕಾಶ ಮಣೇಗಾರ, ರಾಯಣ್ಣ ಮಾಕನೂರ, ಮಲ್ಲಿಕಾರ್ಜುನ ತೆಗ್ಗಿನ, ಹನುಮಂತಪ್ಪ ಕಬ್ಬಾರ ಸೇರಿದಂತೆ ಪೊಲೀಸ್ ಸಿಬ್ಬಂಧಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ