ಗೋಕಾಕ್

ಕಷ್ಟದಲ್ಲಿರುವವರಿಗೆ ಸಹಾಯ ಪ್ರತಿಯೊಬ್ಬನ ಕರ್ತವ್ಯ:ಮಂಗೇಶಜಿ

ಕಷ್ಟದಲ್ಲಿರುವವರಿಗೆ ಸಹಾಯ ಪ್ರತಿಯೊಬ್ಬನ ಕರ್ತವ್ಯ:ಮಂಗೇಶಜಿ

ಗೋಕಾಕ 12: ಕಷ್ಟ ಎನ್ನುವುದು ಹೀಗೆ ಬರುತ್ತದೆ ಎಂದು ಹೇಳಲಿಕ್ಕಾಗದು. ಮನುಷ್ಯ  ಸಾಮಾಜಿಕವಾಗಿ ಸಂಕಷ್ಟಕ್ಕೆ ಒಳಗಾದಾಗ ಅವನಿಗೆ ಸಹಾಯಹಸ್ತ ನೀಡಿ ಮತ್ತು ಮುಖ್ಯ ವಾಹಿನಿಗೆ ಕರೆತರುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಆರ್ಎಸ್ಎಸ್ನ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಅಭಿಪ್ರಾಯ ಪಟ್ಟರು. ಅವರು ಸ್ಥಳೀಯ  ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಪರಿವಾರ ಹಮ್ಮಿಕೊಂಡ ಕೊರೋಣ ಕಾರಣದಿಂದ ಸಂಕಷ್ಟದಲ್ಲಿರುವ ಕಡು ಬಡವರಿಗೆ ಆಹಾರ ಧಾನ್ಯ ಕಿಟ ವಿತರಣಾ ಕಾರ್ಯಕ್ರಮವನ್ನದ್ದೇಶಿಸಿ ಮಾತನಾಡಿದರು.

    ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ ಮಾತನಾಡಿ ಸಂಘ ಪರಿವಾರ ನಾಡಿಗೆ ಸಮಕಷ್ಟ ಬಂದೊದಗಿದಾಗ ಮುಂಚೂಣಿಯಲ್ಲಿ ನಿಂತು ಸೇವೆಗೆ ಸದಾ ಸಿದ್ಧವಾಗಿರುತ್ತದೆ  ಅದೇ ಸಂಘದ ದೈಯ ಎಂದರಲ್ಲದೆ  ಕನರ್ಾಟಕ ಉತ್ತರದಲ್ಲಿ 12667 ಕಾರ್ಯಕರ್ತರು 16 ಕೋವಿಡ್ ಸೆಂಟರಗಳು  785 ಶವ ಸಂಸ್ಕಾರ್ ,67 ರಕ್ತದಾನ ಶಿಬಿರ ,404123 ಬೋಜನ ಪಾಕೀಟ,182 ವೈದ್ಯರು ಇಲ್ಲಿಯವರೆಗೆ 1121  ರೋಗಿಗಳ ಆರೈಕೆ ಹೀಗೆ ಹಲವು ವಿಧದ ಸೇವೆಯನ್ನು ನಿಸ್ವಾರ್ಥ ಭಾವದಿಂದ ಮಾಡಿದೆ,ಮಾಡುತ್ತಿದೆ. ಎಂದು  ಹೇಳಿ ಇದೆ ವ್ಯಕ್ತಿ  ಮತ್ತು ಸಮಾಜವನ್ನು ಜೋಡಿಸುವ ಕಾರ್ಯ ಎಂದರು.ವಿಭಾಗ ಸಂಘಚಾಲಕ ಎಮ್.ಡಿ.ಚುನಮರಿ, ಜಿಲ್ಲಾ ಸಂಘಚಾಲಕ ಎಮ್,ವಾಯ್, ಹಾರೂಗೇರಿ, ಕೆ,ಎಲ್.ಇ  ನಿದರ್ೆಶಕ ಜಯಾನಂದ ಮುನ್ನವಳ್ಳಿ ,ಪ್ರಾಂತ ಪ್ರಚಾರಕ ನರೇಂದ್ರಜಿ, ಹಿಂದೂ ಜಾಗರಣ ವೇದಿಕೆ, ವಿಶ್ವಹಿಂದೂ ಪರಿಷತ್ ಭಜರಂಗದಳದ ಪ್ರಮುಖರು ಉಪಸ್ಥಿತರಿದ್ದರು. ವಿಕಾಸ ನಾಯಿಕ ನಿರೂಪಿಸಿದರು 

ಸುದ್ದಿ ಓದಿ