ಜಮಖಂಡಿ

ಓದಿ ರುಚಿ ಪಡೆದುಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ

ಓದಿ ರುಚಿ ಪಡೆದುಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ

ಲೋಕದರ್ಶನ ವರದಿ,

ಜಮಖಂಡಿ  22: ಒಂದು ಯೋಚನೆ ಹುಟ್ಟಿದಾಕ್ಷಣ ಅಲ್ಲಿ ಆಲೋಚನೆ ನಡೆಯುತ್ತದೆ. ಕವಿಯ ಆಲೋಚನೆಯೇ ಕಾವ್ಯದ ಜನಕ, ರವಿ ಕಾಣದ್ದನ್ನು ಕವಿ ಕಾಣಬಲ್ಲ, ಕವಿ ತನ್ನ ಮನದಾಳದ ಭಾವನೆಗಳನ್ನು ಅಕ್ಷರ ರೂಪದಲ್ಲಿ ಸೃಷ್ಠಿಸಿ ಕನ್ನಡ ಸಾರಸ್ವತಕ್ಕೆ ನೀಡುವುದು, ಅದನ್ನು ಓದಿ ರುಚಿ ಪಡೆದುಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆಂದು ಜಾನಪದ ಸಾಹಿತಿ ಡಾ. ಸಿದ್ದು ದಿವಾಣ ಕರೆ ನೀಡಿದರು.

ನಗರದ ಸಿದಾರ್ಥ ಶಿಕ್ಷಣ ಕಾಲೇಜು ಮತ್ತು ಪರಿಮಳ ಪ್ರಕಾಶನ ಸಹಯೋಗದಲ್ಲಿ ನಡೆದ ಪ್ರವೀಣವಾಣಿ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.

 ಎಲ್ಲಿ ಯಾವುದು ಮತ್ತು ಹೇಗೆ ಎಂಬುದನ್ನು ಕವಿ ಅರಿತುಕೊಂಡಿರಬೇಕು. ಕವಿ ಮತ್ತು ಸಾಹಿತಿಗಳ ಬದುಕು -ಬರಹ ಎರಡು ಒಂದೇ ಆಗಿರಬೇಕು.ಇಂದಿನ ಟಿವಿ, ಮೋಬೈಲ್ ಯುಗದಲ್ಲಿ ಓದುವ ಅಭಿರುಚಿ ಕಳೆದುಕೊಳ್ಳುವಂತಾಗಿದೆ. ಸಾಹಿತಿಗಳು ತಮ್ಮ ಆಲೋಚನೆಗಳನ್ನು ಸಮರ್ಪಣೆ ಮಾಡಿಕೊಂಡರೆ ಮಾತ್ರ ಸಕಾರಾತ್ಮಕ ವಿಚಾರ ಹೊರಹೊಮ್ಮಲು ಸಾಧ್ಯ. ಪ್ರಸಾದ, ಪ್ರಸಾರ ಮತ್ತು ಪ್ರಚಾರ ಇವುಗಳಿಲ್ಲದೆ ನಾವುಗಳು ಬದುಕಲು ಸಾಧ್ಯವಿಲ್ಲ, ಪಾಶ್ಚಿಮಾತ್ಯರ ಸಂಸ್ಕ್ರತಿ ಬಿಟ್ಟು ದೇಶಿಯ ಸಂಸ್ಕ್ರತಿಗೆ ನಾವು ಬೆನ್ನು ಹತ್ತಬೇಕಾಗಿದೆ.ಆಗ ಮಾತ್ರ ನಮ್ಮ ಭಾರತೀಯ ಸಂಸ್ಕೃತಿ ಉಳಿಯುತ್ತದೆ. ಇಂದು ಬಲ್ಲವರು ಎಲ್ಲರನ್ನು ಕರೆದ್ಯೂಯ್ಯಬೇಕಾಗಿದೆ. ಸಾಹಿತ್ಯಿಕ ವಾಗಿಯಾದರೂ ನಾವೆಲ್ಲರೂ ಕನ್ನಡವನ್ನು ಉಳಿಸಿ-ಬೆಳೆಸಬೇಕಾಗಿದೆ.ವ್ಯಕ್ತಿಗಿಂತ ತತ್ವಮುಖ್ಯ ಎಂಬುದನ್ನು ನಾವೆಲ್ಲರೂ ಅರಿತುಕೊಂಡು ಜೀವನ ಸಾಗಿಸಬೇಕು ಎಂದು ಹೇಳಿದರು. 

ಅತಿಥಿಗಳಾಗಿದ್ದ ಡಾ.ಸಂಗಮೇಶ ಮಟ್ಟೋಳ್ಳಿ ಮಾತನಾಡಿ, ವ್ಯಕ್ತಿಗೆ ಗೌರವ ಇರದಿದ್ದರೆ ದೋಷಗಳು ಹೆಚ್ಚಾಗಿ ಕಾಣುತ್ತವೆ. ವಿಶಾಲ ಹೃದಯವಂತಿಕೆ ಕೊರತೆ ಇಂದು ಎದ್ದು ಕಾಣುತ್ತಿದೆ. ಓದಿನ ಅರಿವು ಪ್ರತಿಯೊಬ್ಬರಲ್ಲೂ ಮೂಡಬೇಕಾಗಿದೆ. ಹಳೆ ಕಾವ್ಯವನ್ನು ಹೆಚ್ಚೆಚ್ಚು ಓದುವುದರಿಂದ ಅಧ್ಯಯನಶೀಲರಾಗಲು ಸಾಧ್ಯ. ಹೆಚ್ಚು ಓದುವುದರಿಂದ ಚಿಂತ ನಾಭರಿತವಾಗಲು ಸಾಧ್ಯ. ಅಧ್ಯಯನ-ಅಭಿರುಚಿ ಪ್ರತಿಯೊಬ್ಬರಲ್ಲಿ ಮೂಡಬೇಕು. ಕವಿಗಳು ಮನುಷ್ಯನ ಮನಶಾಸ್ತ್ರಜ್ಷರು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಡಾ.ಬಸವರಾಜ ಉಗ್ರಾಣ, ಹಿರಿಯ ಸಾಹಿತಿ ಬಸವರಾಜ ಯಡಹಳ್ಳಿ, ಸಂತೋಷ ತಳಕೇರಿ, ದತ್ತಾತ್ರೇಯ ಭೋಸಲೆ ಹಾಗೂ ಅಧ್ಯಕ್ಷತೆ ವಹಿಸಿದ್ದ  ಕಾಲೇಜಿನ ಪ್ರಾಚಾರ್ಯ ಡಾ.ರಮೇಶ ಕುಂಬಾರ ಮಾತನಾಡಿದರು. ಡಾ. ತಾತಾಸಾಹೇಬ ಬಾಂಗಿ, ಎಂ.ಬಿ.ಇಂಡಿ, ಗುರುನಾಥ ಸುತಾರ, ಬಿ.ಎನ್.ಅಸ್ಕಿ, ಗಣೇಶ ಗಲಗಲಿ,ಪಾಂಡುರಂಗರಾವ ಕುಲಕರ್ಣಿ ಶಾರದಾ ಮುಳ್ಳೂರ, ಮಂಗಲಾ ಕುಲಕರ್ಣಿ ಅನೇಕರಿದ್ದರು. ಲಕ್ಷ್ಮೀ ಪೂಜಾರಿ ಪ್ರಾರ್ಥಿಸಿದರು. ಸುಮನ ವಸ್ತ್ರದ ಸ್ವಾಗತಿಸಿದರು.ಕೃತಿಕರ್ತ ಪ್ರೋ.ಪ್ರವೀಣ ಕುಲಕಣರ್ಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸುಮಂಗಲಾ ಯಾದವಾಡ ನಿರೂಪಿಸಿದರು. ಭಾರತಿ ವಂದಿಸಿದರು. 


ಸುದ್ದಿ ಓದಿ