ಧಾರವಾಡ - ಹುಬ್ಬಳ್ಳಿ

ಸಾಹಿತ್ಯದ ಗುಂಪು ಕಟ್ಟಿಕೊಂಡು ರಾಜಕೀಯ ಮಾಡುತ್ತಿರುವುದು ಬೇಸರದ ಸಂಗತಿ

ಸಾಹಿತ್ಯದ ಗುಂಪು ಕಟ್ಟಿಕೊಂಡು ರಾಜಕೀಯ ಮಾಡುತ್ತಿರುವುದು ಬೇಸರದ ಸಂಗತಿ

ನ್ಯಾಯವಾದಿ ಪ್ರಕಾಶ ಉಡಕೇರಿ ವಿಷಾದ  

ಧಾರವಾಡ 28: ಸಾಹಿತ್ಯ ಕ್ಷೇತ್ರಕ್ಕೆ ಯುವ ಪೀಳಿಗೆ ಹೆಚ್ಚು ಹೆಚ್ಚು ಬರಬೇಕು. ಈ ಯುವ ಬರಹಗಾರರಿಗೆ ಪ್ರೋತ್ಸಾಹಿಸುವ ಕಾರ್ಯವು ಸಹ ಆಗಬೇಕು. ಆದರೆ ಇಂದು ಸಾಹಿತ್ಯದ ಒಂದು ಗುಂಪನ್ನು ಕಟ್ಟಿಕೊಂಡು ಬೇರೆ ಬೇರೆ ಕೆಲಸಕ್ಕೆ  ಸೀಮಿತವಾಗಿ ರಾಜಕೀಯ ಮಾಡುತ್ತಿರುವುದು ಬೇಸರದ ಸಂಗತಿ. ರಾಜಕೀಯ ಬಿಟ್ಟು ಬರಹಗಾರರ ಸಂದೇಶಗಳು, ಚಿಂತನೆಗಳು ಸಮಾಜಕ್ಕೆ ತಲುಪಬೇಕು. ಅದಕ್ಕೆ ಪೂರಕವಾಗುವಂತೆ ನಾರಾಯಣ ಭಜಂತ್ರಿ ಅವರ ಈ ಕಾರ್ಯಕ್ರಮ ಇಂದಿನ ತುರ್ತು ಮತ್ತು ಅರ್ಥಪೂರ್ಣವಾಗಿದೆ ಎಂದು ನ್ಯಾಯವಾದಿ ಪ್ರಕಾಶ ಉಡಕೇರಿ ಹೇಳಿದರು.ಅವರು ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಟಾನ, ಧಾರವಾಡ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಇವರ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡ ಶಿಕ್ಷಕ ಸಾಹಿತಿ ನಾರಾಯಣ ಭಜಂತ್ರಿ ಅವರ ಸಾಹಿತ್ಯಾವಲೋಕನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಬರೆಯುವ ಮನಸ್ಸು ಮತ್ತು ಸಹಜತೆ ಇದ್ದರೆ ಸಾಕು ಅವನೊಬ್ಬ  ಉತ್ತಮ ಬರಹಗಾರನಾಗಲು ಸಾಧ್ಯ ಎನ್ನುವುದಕ್ಕೆ ಭಜಂತ್ರಿ ಗುರುಗಳು ಉದಾಹರಣೆ. ಇಂತಹ ಯುವ ಬರಗಾರರಿಗೆ ಹಿರಿಯ ಸಾಹಿತಿಗಳ ಪ್ರೋತ್ಸಾಹ, ಮಾರ್ಗದರ್ಶನ ಅವಶ್ಯವಿದೆ. ಅಂತಹ ಕಾರ್ಯವನ್ನು ಪ್ರತಿಷ್ಠಾನ ಮಾಡುತ್ತಿದೆ ಎಂದು ಹೇಳಿದರು.ನಾರಾಯಣ ಭಜಂತ್ರಿಯವರ ಸಂಘಟನೆ ಮತ್ತು ಬದುಕಿನ ಕುರಿತು ಸಾಹಿತಿಗಳಾದ ಶ್ರೀಧರ ಗಸ್ತಿ ಮಾತನಾಡುತ್ತ ಸಂಘಟನೆ ಕೇವಲ ಹೋರಾಟವಾಗಬಾರದು, ಮುಂದಿನ ಪೀಳಿಗೆಗೆ ಅನುಕೂಲವಾಗುವಂತಹ ವಾತಾವರಣವನ್ನು ಸೃಷ್ಟಿಸುವ ಕಾರ್ಯವನ್ನು ಸಂಘಟನೆಗಳು ಮಾಡಬೇಕಿದೆ ಎಂದರು.ಶಿಕ್ಷಕ ಸಾಹಿತಿ ನಾರಾಯಣ ಭಜಂತ್ರಿಯವರ ಕಾವ್ಯಗಳ ಕುರಿತು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಡಾ. ಪ್ರಭಾಕರ ಲಗಮಣ್ಣವರ ಮಾತನಾಡಿದರು. ಭಜಂತ್ರಿಯವರ ಬದುಕು ಬರಹದ ಕುರಿತು ಖ್ಯಾತ ಹಾಸ್ಯಕಲಾವಿದರಾದ ಮಲ್ಲಪ್ಪ ಹೊಂಗಲ ಮಾತನಾಡಿದರು.ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷರಾದ ಡಾ ಲಿಂಗರಾಜ ಅಂಗಡಿ ವಹಿಸಿ ಮಾತನಾಡಿದರು. ತಾಲೂಕ ಅಧ್ಯಕ್ಷರಾದ ಮಹಾಂತೇಶ ನರೇಗಲ್ಲ, ಸಾಹಿತಿ ನಾರಾಯಣ ಭಜಂತ್ರಿ ವೇದಿಕೆಯ ಮೇಲೆ ಉಪಸ್ಥಿತರಿದ್ದು ಮಾತನಾಡಿದರು.ಕಾರ್ಯಕ್ರಮದಲ್ಲಿ ಶಿಕ್ಷಕಿ ಭಾರತಿ ರಂಗಪ್ಪನವರ ಅವರಿಂದ ಭರತನಾಟ್ಯದ ನೃತ್ಯ ಕಾರ್ಯಕ್ರಮ ನಡೆಯಿತು. 

ನಂತರ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಶಹರ ಘಟಕ ಅಧ್ಯಕ್ಷರಾದ ರಮೇಶ ತಳವಾರ, ಮದಾರಮಡ್ಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಲಿಂಗರಾಜ ಅರ್ಕಸಾಲಿ, ಮನಗುಂಡಿಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಪ್ರಮೋದ ವಾದಿರಾಜ, ಧಾರವಾಡ ಜಿಲ್ಲಾ ಪ್ರೌಢಶಾಲಾ ನೌಕರರ ಪತ್ತಿನ ಸಹಕಾರಿ ಸಂಘ ಹುಬ್ಬಳ್ಳಿಯ ಅಧ್ಯಕ್ಷರಾದ ಆರ್ ವ್ಹಿ ಸಂಕಣ್ಣವರ, ನೇಕಾರನಗರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಆರ್ ಎ ಪುಲ್ಲಿ, ಪೆಂಡಾರಗಲ್ಲಿಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಎಸ್ ಎನ್ ಕೋಷ್ಟಿ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಕೋಶಾಧ್ಯಕ್ಷರಾದ ಆರ್‌.ಎಸ್‌.ರೂಗಿ, ಯಾದವಾಡದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಈಶ್ವರ ಉದಮೇಶಿ ವರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಕಸಾಪ ಗೌರವ ಕಾರ್ಯದರ್ಶಿಗಳು ಹಾಗೂ ಪಂ ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಕಾರ್ಯದರ್ಶಿಗಳಾದಮಾರ್ತಾಂಡಪ್ಪ ಕತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶಿ ಉಮಾದೇವಿ ಬಾಗಲಕೋಟ ಪ್ರಾರ್ಥಿಸಿದರು. ಕ.ಸಾ.ಪ.ತಾಲೂಕ ಅಧ್ಯಕ್ಷರಾದ ಮಹಾಂತೇಶ ನರೇಗಲ್ಲ ಸ್ವಾಗತಿಸಿದರು. ಪ್ರೇಮಾನಂದ ಶಿಂಧೆ ಕಾರ್ಯಕ್ರಮ ನಿರೂಪಿಸಿದರು.  ಕಾರ್ಯಕ್ರಮದಲ್ಲಿ ರೇವಣಸಿದ್ದಪ್ಪ ಸಿಂದಗಿ. ಎಸ್ ಎಚ್ ಬಡಿಗೇರ, ಎಸ್ ಎಮ್ ದಾನಪ್ಪಗೌಡರ, ಬಿ ಜಿ ಬಾರ್ಕಿ, ಶಾಂತವೀರ ಬೇಟಗೇರಿ, ವಾಯ್‌.ಸಿ ಮೇಲಿನಮನಿ, ನಾರಾಯಣ ಭಜಂತ್ರಿಯವರ ಕುಟುಂಬವರ್ಗದವರು ಹಾಜರಿದ್ದರು. 


ಸುದ್ದಿ ಓದಿ