ಇಂಡಿ

‘ಜನರಲ್ಲಿ ಆಧ್ಯಾತ್ಮಿಕತೆ ಕಡಿಮೆಯಾಗುತ್ತಿರುವುದು ವಿಷಾದನೀಯ’

‘ಜನರಲ್ಲಿ ಆಧ್ಯಾತ್ಮಿಕತೆ ಕಡಿಮೆಯಾಗುತ್ತಿರುವುದು ವಿಷಾದನೀಯ’

ಇಂಡಿ 07: ಇಂದಿನ ದಿನಮಾನಗಳಲ್ಲಿ ಜನರಲ್ಲಿ ಆಧ್ಯಾತ್ಮಿಕ ಪ್ರಭಾವ ಕಡಿಮೆಯಾಗುತ್ತಿರುವುದು ವಿಷಾದನೀಯ ಸಂಗತಿ. ಅದಕ್ಕಾಗಿ ಎಲ್ಲ ಶರಣ ಬಂಧುಗಳು ದಾನ ಧರ್ಮದಂಥ ಪರೋಪಕಾರಿ ಗುಣಗಳನ್ನು ಬೆಳೆಸಿಕೊಂಡು ಸತ್ಯ ಪ್ರಾಮಾಣಿಕತೆಯ ನೈತಿಕ ಮೌಲ್ಯಗಳನ್ನು ಅನುಷ್ಟಾನಕ್ಕೆ ತರಬೇಕೆಂದು ಪೂರ್ಣಾನಂದ ನಕ್ಕರಗುಂದಗಿ ಮಠದ ಶಿವಾನಂದ ಸ್ವಾಮಿಗಳು ಹೇಳಿದರು. 

ವರು ರವಿವಾರ ಪಟ್ಟಣದ ಕೆ.ಜಿ.ನಾಟೀಕಾರ ಶಿಕ್ಷಕರ ಸ್ವಹಗೃಹದಲ್ಲಿ ನಡೆದ ಲಿಂ. ನಿರ್ಮಲಾ ಗೋಡಕರ ಅವರ ದ್ವಿತೀಯ ಪುಣ್ಯಸ್ಮರಣೆ ಧರ್ಮ ಸಭೆಯಲ್ಲಿ ಶರಣರಿಗೆ ಹಿತೋಪದೇಶ ನೀಡಿದರು. 

ಸಭೆಯಲ್ಲಿ ತಾಲೂಕಾ ಶರಣ ಸಾಹಿತ್ಯ ಪರಿಷತ್ ಅದ್ಯಕ್ಷ ಆರ್‌.ವಿ. ಪಾಟೀಲ, ಎಸ್‌.ಆರ್‌. ಪಾಟೀಲ, ಕೆ.ಜಿ. ನಾಟೀಕಾರ, ಕೆ.ಜಿ. ಹತ್ತಳ್ಳಿ, ಡಾ. ಶಿವಾನಂದ ಮುಂಡೇವಾಡಿ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ