ಕಾಗವಾಡ

ಉಪಚಾರದಿಂದ ವ್ಯಸನಗಳಿಂದ ಮುಕ್ತರಾಗಲು ಸಾಧ್ಯ: ಹಳಿಂಗಳಿ

ಉಪಚಾರದಿಂದ ವ್ಯಸನಗಳಿಂದ ಮುಕ್ತರಾಗಲು ಸಾಧ್ಯ: ಹಳಿಂಗಳಿ

ಕಾಗವಾಡ 12: ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಹಾಗೂ ಸಂಶೋಧನಾ ಕೇಂದ್ರ, ಒಳತಂಗಡಿ ಇವರ ಸಹಯೋಗದಲ್ಲಿ ಜಮಖಂಡಿ ತಾಲೂಕಿನ ತೇರದಾಳ ಗ್ರಾಮದಲ್ಲಿ ವ್ಯಸನಮುಕ್ತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು 

ಮಿರಜದ ಖ್ಯಾತ ಮನೊವೈದ್ಯ ಡಾ. ಚಂದ್ರಶೇಖರ ಹಳಿಂಗಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತ  

ಸಮಾಜದಲ್ಲಿ ಹೆಚ್ಚುತ್ತಿರುವ ವ್ಯಸನ ಮತ್ತು ಅವುಗಳ ದುಷ್ಪರಿಣಾಮಗಳ ಬಗ್ಗೆ ಮತ್ತು ಅವುಗಳಿಂದಾಗುವ ಮಾನಸಿಕ, ಸಾಮಾಜಿಕ, ಆರ್ಥಿಕ ಹಾಗೂ ಶಾರೀರಿಕ ಹಾನಿ ಎಷ್ಟು ಮಾರಣಾಂತಿಕವಾಗಿರುತ್ತದೆ ಎಂಬುದರ ಬಗ್ಗೆ ಮಾರ್ಗದರ್ಶನ ಮಾಡಿದರು.  

ಹಲವಾರು ವ್ಯಸನಗಳು ಹೇಗೆ ಮನುಷ್ಯನಿಗೆ ಅಂಟಿಕೊಳ್ಳುತ್ತವೆ ಎಂಬ ಬಗ್ಗೆ ಕುಲಕುಂಷವಾಗಿ ತಿಳಿಸಿದರು. ಇಂತಹ ವ್ಯಸನಗಳಿಂದ ಮುಕ್ತರಾಗಲು ಯಾವ ಪ್ರಕಾರದ ಉಪಚಾರ ಪಡೆದುಕೊಳ್ಳಬೇಕು ಎಂದು ತಿಳಿಸಿಕೊಟ್ಟರು.  

ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಹಾಗೂ ಸಂಶೋಧನಾ ಕೇಂದ್ರದ ಅಧಿಕಾರಿಗಳಾದ ಬಿ. ಬಾಳಕೃಷ್ಣ, ಸಂಘದ ಸಿಬ್ಬಂದಿಗಳಾದ ಡಾ. ಶೀತಲ ಕಾಗೆ, ಡಾ. ನೀಲಿಮಾ ಕಾಗೆ, ನಿರ್ಮಲ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಒಟ್ಟು 70 ಲಾಭಾರ್ಥಿಗಳು, ಶಿಬಿರದ ಲಾಭ ಪಡೆದುಕೊಂಡರು. 


ಸುದ್ದಿ ಓದಿ