ರಾಣೆಬೆನ್ನೂರ

ಯುವಪೀಳಿಗೆಗೆ ಕಲೆಯ ಪರಿಚಯ ಮಾಡಿಸುವುದು ಅವಶ್ಯಕ: ಕುಂದಾಪುರ

ಯುವಪೀಳಿಗೆಗೆ ಕಲೆಯ ಪರಿಚಯ ಮಾಡಿಸುವುದು ಅವಶ್ಯಕ: ಕುಂದಾಪುರ

ರಾಣಿಬೆನ್ನೂರ25:  ಉತ್ತರ ಕನ್ನಡ ಜಿಲ್ಲೆಯಲ್ಲಿನ ಕಲೆಯ ಪ್ರಾಕಾರಗಳು ಈ ಭಾಗದಲ್ಲಿ ಪ್ರಸ್ತುತ ಪಡಿಸುವ ಮೂಲಕ ಯುವಪೀಳಿಗೆಗೆ ಕಲೆಯ ಪರಿಚಯ ಮಾಡಿಸುವುದು ಅವಶ್ಯಕತೆ ಇದೆ ಎಂದು ಕರಾವಳಿ ಬಳಗದ ಅಧ್ಯಕ್ಷ ರತ್ನಾಕರ ಕುಂದಾಪುರ ಹೇಳಿದರು.

     ನಗರದ ಕರ್ನಾಟಕ ಸಂಘದಲ್ಲಿ ಶನಿವಾರ ಸಂಜೆ ನಡೆದ 87ನೇಯ ವರ್ಷದ ನಾಡಹಬ್ಬ ಕಾರ್ಯಕ್ರಮದ ಏಳನೆಯ ದಿನದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿ ಮಾತನಾಡಿದರು.

  ಅಜರ್ುನ ಮತ್ತು ಹನುಮಂತ ಇಬ್ಬರ ನಡುವೆ ನಡೆಯುವ ಸ್ಪರ್ಧೆಯೇ ಶರಸೇತು ಬಂಧನ ಇದರ ಕೊನೆಯಲ್ಲಿ ರಾಮನ ನಿರ್ದೇಶನದಂತೆ ಅರ್ಜುನನ ರಥದಲ್ಲಿ ಕಪಿಕೇತನಾಗಿ ಹನುಮಂತ ಬರುತ್ತಾನೆ. ಆಗ ಅರ್ಜುನ ಹನುಮಂತರ ಸ್ನೇಹ ಬಂಧವಾಗುತ್ತದೆ ಎಂದರು 

     ಕಾಕಿ ಜನಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಕಾಕಿ  ಮಾತನಾಡಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಕನರ್ಾಟಕ ಸಂಘದ ಕಾರ್ಯಕ್ರಮಗಳು ಕಾರ್ಯಕರ್ತರ ಉತ್ಸಾಹವೇ ನನಗೆ ಪ್ರೇರಣೆ ಎಂದರು. 

  ಹೊಸಾಕುಳಿ ಸಾಣ್ಮನೆಯ ಮಹಾಗಣಪತಿ ಯಕ್ಷ ಕಲಾ ವೃಂದದವರಿಂದ ಪ್ರಸ್ತುತಪಡಿಸಲ್ಪಟ್ಟ ಪೌರಾಣಿಕ ಯಕ್ಷಗಾನ ಶರಸೇತು ಬಂಧನ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.

       ಸತ್ಯನಾರಾಯಣ ಹೊಳೆಬಾಗಿಲ ಅಧ್ಯಕ್ಷತೆ ವಹಿಸಿದ್ದರು.  ಶ್ರೀನಿಧಿ ಶಿರಹಟ್ಟಿ ನಾಡಗೀತೆ ಹಾಡಿದರು, ಅಭಿನಂದನ ಜೋಶಿ ಸ್ವಾಗತಿಸಿ, ಪರಿಚಯಿಸಿದರು, ಸತ್ಯನಾರಾಯಣ ವಿಶ್ವರೂಪ ವಂದಿಸಿದರು, ಲಕ್ಷ್ಮೀ ಅಡಿಕೆ ಕಾರ್ಯಕ್ರಮ ನಿರ್ವಹಿಸಿದರು.


ಸುದ್ದಿ ಓದಿ