ಜಮಖಂಡಿ

ವಿದ್ಯಾರ್ಥಿಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸುವುದು ಅಗತ್ಯ

ವಿದ್ಯಾರ್ಥಿಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸುವುದು ಅಗತ್ಯ

ಜಮಖಂಡಿ 13:  ವಿದ್ಯಾರ್ಥಿಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ  ಸುಧಾರಿಸುವುದು ಅಗತ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಮನೋಭಾವ ತುಂಬುವ ಮೂಲಕ ಪರೀಕ್ಷೆಗಳಲ್ಲಿ ಭಯ ಪಡುವುದನ್ನು ಹೋಗಲಾಡಿಸಿಕೊಳ್ಳಬೇಕೆಂದು ಸಾಕ್ಷರತೆ ಇಲಾಖೆಯ ಉಪನಿರ್ದೇಶಕ ಕೆ,ಡಿ,ಬಡಿಗೇರ ಹೇಳಿದರು. 

ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ರಾಯಲ್ ಪ್ಯಾಲೇಸ್ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ನಡೆದ ಥಿಂಕ್ ಬಿಗ್ ಅಟ್ 100 ಪಸೆಂರ್ಟ್ ಅಚೀಮೇಂಟ್ ಎನ್ನುವ ಒಂದು ದಿನದ ವಿಶೇಷ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. 

ಕೇವಲ ಕಠಿಣ ವಿಷಯಗಳಿಗೆ ಒತ್ತು ನೀಡದೆ ಎಲ್ಲಾ ವಿಷಯಗಳಿಗೆ ಒತ್ತು ನೀಡುವ  ಮೂಲಕ ವಿದ್ಯಾರ್ಥಿಗಳನ್ನು ಸಮಗ್ರವಾಗಿ ಪರೀಕ್ಷೆಗೆ ಸಿದ್ಧಪಡಿಸಬೇಕು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಕಾಳಜಿ ಮಾಡುವ ಮೂಲಕ ಒಟ್ಟಾರೆ ಫಲಿತಾಂಶವನ್ನು ಉತ್ತಮಪಡಿಸಲು ಶಿಕ್ಷಕ ಸಮೂಹ ಪ್ರಯತ್ನಿಸಬೇಕು ಎಂದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಎ,ಕೆ, ಬಸಣ್ಣವರ  ಮಾತನಾಡಿ, ಎಸ್,ಎಸ್,ಎಲ್, ಸಿ ಫಲಿತಾಂಶ ವೃದ್ಧಿಗಾಗಿ ಇಲಾಖೆಯು ಫಲಿತಾಂಶ ವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಪರಸ್ಪರ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮ, ಅಮ್ಮಂದಿರ ಸಭೆ, ವಿಶೇಷ ತರಗತಿಗಳು, ರಸಪ್ರಶ್ನೆ, ಧ್ಯಾನ, ಮಕ್ಕಳ ಮನೆ ಭೇಟಿ, ಸೆಲ್ಫಿ ವಿತ್ ಮಾನಿಂರ್ಗ್ ಸ್ಟಡಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಸಂಜೀವಿನಿ ಹೀಗೆ ಹಲವಾರು ಕಾರ್ಯಕ್ರಮಗಳ ಕುರಿತು ಮಕ್ಕಳಿಗೆ ತಿಳಿಸುವ ಸಂಕಲ್ಪ ಹಮ್ಮಿಕೊಂಡಿದೆ ಎಂದರು. ರಾಯಲ್ ಪ್ಯಾಲೇಸ್ ಪದವಿ ಪೂರ್ವ ಕಾಲೇಜಿನ ಆಡಳಿತ ಅಧಿಕಾರಿ ಬಸವರಾಜ  ನ್ಯಾಮಗೌಡ ಮಾತನಾಡಿ ಇದೇ ಸಂದರ್ಭದಲ್ಲಿ ವಿಜಯಕುಮಾರ ವಂದಾಲ, ರಾಯಲ್ ಪ್ಯಾಲೇಸ್ ಕಾಲೇಜಿನ ಪ್ರಾಚಾರ್ಯ ರೀತಾ ಜೈನರ, ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿ ಶ್ರೀಶೈಲ ಬುರ್ಲಿ, ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಗಣಿತ ಮತ್ತು ಇಂಗ್ಲಿಷ ಬೋಧಿಸುವ ವಿಷಯ ಶಿಕ್ಷಕರು ಉಪಸ್ಥಿತರಿದ್ದರು, ರಮೇಶ್ ಅವಟಿ  ನಿರೂಪಿಸಿದರು, ವೈ, ಭಜಂತ್ರಿ ವಂದಿಸಿದರು. 


ಸುದ್ದಿ ಓದಿ