ರಾಣೆಬೆನ್ನೂರ

ಪ್ರತಿಯೊಬ್ಬ ರೈತರ ಎಫ್.ಐ.ಡಿ ಮಾಡಿಸಿಕೊಳ್ಳುವುದು ಕಡ್ಡಾಯ

ಪ್ರತಿಯೊಬ್ಬ ರೈತರ ಎಫ್.ಐ.ಡಿ ಮಾಡಿಸಿಕೊಳ್ಳುವುದು ಕಡ್ಡಾಯ

ರಾಣೇಬೆನ್ನೂರು03: ಎಫ್.ಐ.ಡಿ ಅಂದರೆ Farmer Identification Document  ರೈತನ ಗುರುತಿನ ಚೀಟಿ ಪ್ರತಿಯೊಬ್ಬ ರೈತರು ಎಫ್.ಐ.ಡಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಎಂದು ಕೃಷಿ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಈ ಕುರಿತು ಶುಕ್ರವಾರ ಸಂಜೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು ಬೆಳೆ ಪರಿಹಾರ, ಬೆಳೆವಿಮೆ, ಬೆಳೆ ಸಾಲ, ಬೆಂಬಲ ಬೆಲೆ ಮತ್ತು ಇತರೆ ಸಕರ್ಾರದ ಸೌಲಭ್ಯ ಪಡೆಯಲು ಎಫ್.ಐ.ಡಿ ಕಡ್ಡಾಯವಾಗಿರುತ್ತದೆ.ಈಗಾಗಲೇ ಎಫ್.ಐ.ಡಿ ಮಾಡಿಸಿಕೊಂಡಲ್ಲಿ ಆ ಎಫ್.ಐ.ಡಿಗೆ ನಿಮಗೆ ಸಂಬಂಧಸಿದಂತೆ ಎಲ್ಲಾ ಹೊಲಗಳ ಸರ್ವೇ ನಂಬರ್ಗಳು ಜೋಡಣೆಯಾಗಿದೆಯೇ? ಎಂಬುದನ್ನು ಕೂಡಲೇ ಖಾತರಿಪಡಿಸಿಕೊಳ್ಳುವುದು ಹಾಗೂ ತಮ್ಮ ಎಫ್.ಐ.ಡಿಗೆ ತಮ್ಮ ಬ್ಯಾಂಕ್ ಖಾತೆ ಜೋಡಣೆಯಾಗಿರುವ ಪರಿಶೀಲಿಸಿಕೊಳ್ಳುವುದು. ಇನ್ನೂ ಎಫ್.ಐ.ಡಿಯಾಗದ ಜಂಟಿ ಖಾತೆ ಇದ್ದಲ್ಲಿ ಖಾತೆಯಲ್ಲಿನ ಎಲ್ಲಾ ಖಾತೆದಾರರು ಕಡ್ಡಾಯವಾಗಿ ಆಧಾರ ಕಾರ್ಡ, ಬ್ಯಾಂಕ್ ಪಾಸ್ ಪುಸ್ತಕ, ಸಂಬಂಧಿಸಿದ ಉತಾರದ ದಾಖಲಾತಿಗಳೊಂದಿಗೆ ತಮ್ಮ ಹತ್ತಿರದ ಗ್ರಾಂ ಓನ್ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರ, ರೈತ ಸಂಪರ್ಕ ಕೇಂದ್ರ ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಹಾಗೂ ಪಶು ಸಂಗೋಪನಾ ಇಲಾಖೆಗಳನ್ನು ಕೂಡಲೇ ಸಂಪರ್ಕಿಸಿ ಎಫ್.ಐ.ಡಿ ನೋಂದಣಿ ಮಾಡಿಸಿಕೊಳ್ಳಲು ಈ ಮೂಲಕ ರೈತ ಬಾಂಧವರಿಗೆ ರಾಣೇಬೆನ್ನೂರು ಕೃಷಿ ಸಹಾಯಕ ನಿರ್ದೇಶಕ ಹಿತೇಂದ್ರ  ಗೌಡಪ್ಪಳವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಸುದ್ದಿ ಓದಿ