ಯುವಕರನ್ನು ದುಷ್ಚಟಗಳಿಂದ ದೂರ ಮಾಡುವುದು ಪ್ರತಿಯೊಬ್ಬರ ಕರ್ತವ್ಯ
ಶೇಡಬಾಳ 02: ಇಂದಿನ ಯುವ ಪೀಳಿಗೆ ತಂಬಾಕು ಹಾಗೂ ತಂಬಾಕುಯುಕ್ತ ಪದಾರ್ಥಗಳ ಸೇವನೆಗಳಿಗೆ ದಾಸರಾಗುತ್ತಿದ್ದು, ಆ ಯುವಕರನ್ನು ದುಷ್ಚಟಗಳಿಂದ ದೂರ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಮಿರಜದ ಖ್ಯಾತ ವ್ಯಸನ ಮುಕ್ತಿ ಕೇಂದ್ರದ ವೈದ್ಯಾಧಿಕಾರಿ ಡಾ. ಚಂದ್ರಶೇಖರ ಹಳಿಂಗಳಿ ಹೇಳಿದರು.
ಅವರು ಮೇ 31 ರಂದು ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಮಿರಜ ನಿರ್ಮಲ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡಿ ಯುವಕರನ್ನು ತಂಬಾಕು ಹಾಗೂ ತಂಬಾಕುಯುಕ್ತ ಸೇವನೆಗಳಿಂದ ದೂರ ಮಾಡಬೇಕಾದರೆ 8 ಡಿ ಫಾರ್ಮುಲಾ ಅಳವಡಿಸುವಂತೆ ಕರೆ ನೀಡಿದರು.
ವ್ಯಕ್ತಿಗತವಾಗಿ ಮೊದಲು ಡಿಕ್ಲೇರ್ ಡೇಟ್ ವ್ಯಸನ್ ಬಿಡುವದಕ್ಕೆ ಒಂದು ದಿನಾಂಕವನ್ನು ನಿಗದಿ ಮಾಡುವದು, ವ್ಯಸನದಿಂದ ಸಂಪೂರ್ಣ ದೂರ್ ಉಳಿಯಲು ಓಷದೋಪಚಾರ, ಸಂಬಂಧಿಕರು ಹಾಗೂ ಗೆಳೆಯರ ಹತ್ತಿರ ನಾನು ತಂಬಾಕು ಸೇವನೆ ತ್ಯಜಿಸಿದ್ದೇನೆ ಎಂದು ಹೇಳುವದು, ಅವರಿಂದ ನಿಮಗೆ ಧೈರ್ಯ ಹಾಗೂ ಬಿಡುವದಕ್ಕೆ ಸಹಾಯ ವಾಗುವದು, ನಮ್ಮ ಧ್ಯಾನವನ್ನು ಇತರ್ ಕಡೆಗೆ ಮಗ್ನಗೊಳಿಸುವದು, ಇಚ್ಛೆ ಆದಾಗ ಏಲಕ್ಕಿ, ಲವಂಗ ಅಗಿಯುವುದು, ಅಂದರೆ ವ್ಯಸನ್ ಮಾಡುವ ಇಚ್ಛೆ ಆದರೆ ಗೆಳೆಯರ ಅಥವಾ ಹತ್ತಿರದ ಸಂಬಂಧಿಕರೊಂದಿಗೆ ಚರ್ಚಿಸಿ, ಇದರಿಂದ ಮನ:ಪರಿವರ್ತನೆಯ ಸಲಹೆ ಪಡೆದುಕೊಳ್ಳುವುದು ಈ ರೀತಿ ನಾವು ಕಠೋರ ನಿಯಮಗಳನ್ನು ಪಾಲಿಸಿದಾಗ ಮಾತ್ರ ವ್ಯಸನದಿಂದ ಮುಕ್ತರಾಗಲು ಸಾಧ್ಯವೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಂಗಲಿ -ಮಿರಜ ಕುಪವಾಡ ಮಹಾನಗರ ಪಾಲಿಕೆಯ ನ್ಯಾಷನಲ್ ಟೋಬ್ಯಾಕೋ ಪ್ರೋಗ್ರಾಂದ ನೊಡೆಲ್ ಅಧಿಕಾರಿ ಡಾ. ರವೀಂದ್ರ ತಾಟೆ, ಡಾ. ನಿಶಾ ಚಂದ್ರಶೇಖರ ಹಳಿಂಗಳಿ, ಡಾ. ಗೋವಿಂದ ಕುಲಕರ್ಣಿ ತಂಬಾಕು ವ್ಯಸನದಿಂದ ಆಗುವ ದುಷ್ಪರಿಣಾಮಗಳ ಕುರಿತು ಮಾತನಾಡಿದರು.
ಇದೇ ಸಮಯದಲ್ಲಿ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಕಿರು ಹಾಸ್ಯ ನಾಟಕ ಪ್ರದರ್ಶಿಸಿದರು. ಪಾತ್ರವರ್ಗಲ್ಲಿ ಶೇಜಲ್ ಬನಸೋಡೆ, ಸತ್ಯವ್ವ ಮಗದುಮ, ಮಾಯಾ ಕದಂ, ಮಾಧುರಿ ಪುಕಾಳೆ, ಇಮ್ರಾನ್ ಮುಲ್ಲಾ, ಸಚೀನ, ದೀಪಕ ಮಾನೆ ಅಭಿನಯಿಸಿದರು.
ಈ ಸಮಯದಲ್ಲಿ ಡಾ. ಚಂದ್ರಶೇಖರ ಹಳಿಂಗಳಿ, ಡಾ. ರವೀಂದ್ರ ತಾಟೆ, ಡಾ. ನಿಶಾ ಚಂದ್ರಶೇಖರ ಹಳಿಂಗಳಿ, ಡಾ. ಗೋವಿಂದ ಕುಲಕರ್ಣಿ, ಸಾಗರ ಜಾಧವ, ಶೇಜಲ್ ಬನಸೋಡೆ, ಸತ್ಯವ್ವ ಮಗದುಮ, ಮಾಯಾ ಕದಂ, ಮಾಧುರಿ ಪುಕಾಳೆ, ಇಮ್ರಾನ್ ಮುಲ್ಲಾ, ಸಚೀನ, ದೀಪಕ ಮಾನೆ ಸೇರಿದಂತೆ ಅನೇಕರು ಇದ್ದರು.
ಸಾಗರ ಜಾಧವ ಸ್ವಾಗತಿಸಿದರು. ವಿನಾಯಕ ಕವಡೆ ವಂದಿಸಿದರು. ಡಾ. ಮೋರೆ ಕಾರ್ಯಕ್ರಮ ನಿರೂಪಿಸಿದರು.