ಕಡ್ಡಾಯವಾಗಿ ಮತಗಟ್ಟೆಗೆ ಹೋಗಿ ಮತ ಚಲಾಯಿಸಬೇಕು
ರಾಣಿಬೆನ್ನೂರ 12: ನರೇಗಾ ಕೂಲಿ ಕಾರ್ಮಿಕರು ಮೇ ಏಳ ರಂದು ಎಲ್ಲರೂ ಕಡ್ಡಾಯವಾಗಿ ಮತಗಟ್ಟೆಗೆ ಹೋಗಿ ಮತ ಚಲಾಯಿಸಬೇಕು ಇದು ಸಂವಿಧಾನ ನೀಡಿರುವ ನಿಮ್ಮ ಹಕ್ಕಾಗಿದೆ ಎಂದು ತಾಪಂ ಇಓ ಸುಮಲತಾ ಎಸ್.ಪಿ. ಹೇಳಿದರು
ತಾಲೂಕಿನ ಸುಣಕಲ್ಲಬಿದರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೇಗಾ ಯೋಜನೆ ಅಡಿ ನಡೆಯುತ್ತಿರುವ ದೊಡ್ಡಕೆರೆ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದ ಅವರು, ಯಾವುದೇ ಆಶಾ ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಉತ್ತಮ ಅಭ್ಯರ್ಥಿಗೆ ಮತ ನೀಡಲು ಮುಂದಾಗಬೇಕು ಎಂದು ತಿಳಿಸಿದರು
ತಾಪಂ ಸಹಾಯಕ ನಿರ್ದೇಶಕರಾದ ಪರಶುರಾಮ ಪೂಜಾರ ಮಾತನಾಡಿ, ಮತದಾನ ನಮ್ಮ ಹಕ್ಕು ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಿ ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಪ್ರಜಾಪ್ರಭುತ್ವವನ್ನು ಯಶಸ್ವಿಗೊಳಿಸಲು ನಿಮ್ಮ ಸಹಕಾರ ಅಗತ್ಯವಿದೆ ಎಂದು ಕೂಲಿ ಕಾರ್ಮಿಕರಿಗೆ ಕರೆ ನೀಡಿದರು
ಈ ಸಂದರ್ಭದಲ್ಲಿ ತಾಂತ್ರಿಕ ಸಂಯೋಜಕ ರವಿಕುಮಾರ್ ಯಾಳಗಿ, ತಾಂತ್ರಿಕ ಸಹಾಯಕ ಕಿಶೋರ, ಹೊನ್ನಪ್ಪ ಅಜ್ಜರ ಮತ್ತು ಸುಮಾರು 92 ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು