ಅಪಘಾತ ವಿಮಾ ಫಲಾನುಭವಿಗೆ ಪರಿಹಾರ ಚೆಕ್ ವಿತರಣೆ
ಕಾಗವಾಡ 10: ಪಟ್ಟಣದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸದಸ್ಯರಾದ ಬಾಬು ಅಬ್ಬಾಸ ಸೈಯದ ಅವರು ಇತ್ತಿಚಿಗೆ ನಿಧನರಾಗಿದ್ದು, ಬೆಳಗಾವಿ ಡಿಸಿಸಿ ಬ್ಯಾಂಕ್ ಮತ್ತು ಸಹಕಾರಿಯ ವತಿಯಿಂದ ಮಂಜೂರಾದ ರೂ.1 ಲಕ್ಷ ಅಪಘಾತ ವಿಮಾ ಮೊತ್ತದ ಚೆಕ್ಕನ್ನು ಮೃತರ ವಾರಸುದಾರರಿಗೆ ಸೋಮವಾರ ದಿ. 10 ರಂದು ಹಸ್ತಾಂತರಿಸಲಾಯಿತು.
ಸಂಘದ ಅಧ್ಯಕ್ಷ ಜ್ಯೋತಿಕುಮಾರ ಪಾಟೀಲ ಅವರು ಬಾಬು ಸೈಯ್ಯದ ಅವರ ಪತ್ನಿ ಶೈನಾಜ ಬಾಬು ಸೈಯದ ಅವರಿಗೆ 1 ಲಕ್ಷ ರೂ. ಪರಿಹಾರ ಚೆಕ್ನ್ನು ಸಹಕಾರಿಯ ಕಚೇರಿಯಲ್ಲಿ ಹಸ್ತಾಂತರಿಸಿದರು.
ಈ ಸಮಯದಲ್ಲಿ ಸಹಕಾರಿಯ ಉಪಾದ್ಯಕ್ಷ ಬಸವರಾಜ ಉಪ್ಪಾರ, ಮುಖಂಡರಾದ ಸ್ವಪ್ನಿಲ ಪಾಟೀಲ, ರಮೇಶ ಚೌಗುಲಾ, ಬ್ಯಾಂಕ್ ನೀರೀಕ್ಷಕ ಎಸ್.ಎಸ್. ಬುರುಡ, ನಿರ್ದೇಶಕರಾದ ಬಸಗೌಡಾ ಪಾಟೀಲ, ಸತ್ಯಗೌಡಾ ಪಾಟೀಲ, ಚನ್ನಗೌಡಾ ಪಾಟೀಲ, ಕುಮಾರ ಪೂಜಾರಿ, ಅನೀಲ ಮಾಳಿ, ಅನೀಲ ಬಜಂತ್ರಿ, ಗೌಸ್ ಸೈಯದ, ಕವಿತಾ ಮಗದುಮ್ಮ, ಮುಖ್ಯಕಾರ್ಯ ನಿರ್ವಾಹಕ ರಾಜೇಂದ್ರ ಪೂಜಾರಿ ಇದ್ದರು.