ರಾಣೆಬೆನ್ನೂರ

ಇಷ್ಟಲಿಂಗ್ ಮಹಾಪೂಜೆ, ಜನ ಜಗೃತಿ ಸಮಾರಂಭ: ಬಸವರಾಜಪ್ಪ ಪಟ್ಟಣಶೆಟ್ಟಿ

ಇಷ್ಟಲಿಂಗ್ ಮಹಾಪೂಜೆ, ಜನ ಜಗೃತಿ ಸಮಾರಂಭ: ಬಸವರಾಜಪ್ಪ ಪಟ್ಟಣಶೆಟ್ಟಿ

ರಾಣಿಬೆನ್ನೂರ:15 ಇಲ್ಲಿನ ಮೃತ್ಯುಂಜಯನಗರದ ಚನ್ನೇಶ್ವರ ಮಠದ ಜದ್ಗುರು ವಾಗೀಶ ಪಂಡಿತಾರಾಧ್ಯ ಸಮುದಾಯ ಭವನದಲ್ಲಿ ಗುರುಪೌರ್ಣಿಮೆ ಅಂಗವಾಗಿ ಇದೇ ಜುಲೈ 19 ರಿಂದ 21 ರವರೆಗೆ ಆಷಾಡ ಮಾಸದ ಇಷ್ಟಲಿಂಗ ಪೂಜಾ ಸೇವಾ ಸಮಿತಿಯಿಂದ ಪಂಚಪೀಠದ ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರ  ಆಷಾಡ ಮಾಸದ ಇಷ್ಟಲಿಂಗ್ ಮಹಾಪೂಜೆ ಮತ್ತು ಜನ ಜಗೃತಿ ಸಮಾರಂಭ ನಡೆಯುತ್ತದೆ ಎಂದು ಚನ್ನೇಶ್ವರಮಠದ ಉಪಾಧ್ಯಕ್ಷ ಬಸವರಾಜಪ್ಪ ಪಟ್ಟಣಶೆಟ್ಟಿ ಹೇಳಿದರು. 

ನಗರದ ಚೆನ್ನೇಶ್ವರಮಠದ ಸಮುದಾಯಭವನದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.19 ರಂದು ಸಂಜೆ 4 ಗಂಟೆಗೆ ಉಜ್ಜಯಿನಿ ಸಿದ್ದಲಿಂಗ ರಾಜದೇಶಿಕೇಂದ್ರ  ಶಿವಾಚಾರ್ಯ ಸ್ವಾಮೀಜಿ ಅವರ ಸ್ವಾಗತ ಕಾರ್ಯಕ್ರಮ, ಇಲ್ಲಿನ ಮೃತ್ಯುಂಜಯ ಮಠದಿಂದ ಮಹಿಳೆಯರ ಪೂರ್ಣಕುಂಭ ಹಾಗೂ ಸಕಲ ವಾಧ್ಯಗಳೊಂದಿಗೆ ಮೆರವಣಿಗೆ ಮೂಲಕ ಸ್ವಾಮೀಜಿ ಅವರನ್ನು ಸ್ವಾಗತಿಸಲಾಗುವುದು. ನಂತರ ಸಂಜೆ 6 ಗಂಟೆಗೆ ಧರ್ಮ ಸಭೆ ನಡೆಯಲಿದೆ. 

ಧರ್ಮ ಸಭೆಯ ಸಾನ್ನಿಧ್ಯವನ್ನು ಉಜ್ಜಯಿನಿ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು. ಹಿರೇಮಠ ಆವರಗೊಳ್ಳ ಪುರವರ್ಗಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಶನೈಶ್ಚರ ಮಂದಿರದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಕೊಡಿಯಾಲ ಹೊಸಪೇಟೆ ಬಾಲಯೋಗಿ ಜಗದೀಶ್ವರ ಸ್ವಾಮೀಜಿ, ದೊಡ್ಡಪೇಟೆ ವಿರಕ್ತಮಠದ ಗುರುಬಸವ ಸ್ವಾಮೀಜಿ ಸಮ್ಮುಖ ವಹಿಸುವರು ಎಂದರು. 

ತಾಲ್ಲೂಕು ವೀರಶೈವ ಜಂಗಮ ಪುರೋಹಿತ ಮತ್ತು ಅರ್ಚಕರ ಸಂಘದ ಸದಸ್ಯರು ವೇದ ಗೋಷ ಮಾಡುವರು. ಸ್ಥಳೀಯ ಕಲಾವಿದರು ಸಂಗೀತ ಸೇವೆ ಸಲ್ಲಿಸುವರು. ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ  ನಾಂದಿ ನುಡಿಯುವರು. 

ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ ಮುಖ್ಯ ಅತಿಥಿಗಳಾಗಿ ಆಗಮಿಸುವರು. ನಂತರ ಉಜ್ಜಯಿನಿ ಸಿದ್ದಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಅವರು ಆಶೀರ್ವಚನ ಮಾಡುವರು. ವರ್ತಕ ಹಾಲೇಶಪ್ಪ ಗೌಳಿ ಹಾಗೂ ಕುಟುಂಬದವರು ಹೂ ಮತ್ತು ಕ್ಷೀರಾಭಿಷೇಕ ಸೇವೆ ಸಲ್ಲಿಸುವರು. ವರ್ತಕ ಎಸ್‌ಆರ್‌ಕೆ ಬಸವರಾಜ ಹಾಗೂ ಕುಟುಂಬದವರು ಪ್ರಸಾದ ಸೇವೆ ನಡೆಸಿಕೊಡುವರು ಎಂದರು. 

ಜು.20 ರಂದು ಬೆಳಿಗ್ಗೆ 8 ಗಂಟೆಗೆ ಉಜ್ಜಯಿನಿ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರ ಇಷ್ಟಲಿಂಗ ಮಹಾಪೂಜೆ ನಡೆಯುತ್ತದೆ. ಸಂಜೆ 6 ಗಂಟೆಗೆ ಧರ್ಮ ಸಭೆ ನಡೆಯಲಿದೆ. ಉಜ್ಜಯಿನಿ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸುವರು. ಹೊನ್ನಾಳಿ ಹಿರೇಕಲ್ಮಠದ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ವಹಿಸುವರು. ದಿಂಡದಹಳ್ಳಿ ಮಠದ ಪಶುಪತಿ ಶಿವಾನಂದ ಸ್ವಾಮೀಜಿ, ಕೋಣಂದೂರು ಅಭಿನವ ಸಿದ್ದವೀರ ಸ್ವಾಮೀಜಿ, ನೆಗಳೂರು ಗುರುಶಾಂತೇಶ್ವರ ಸ್ವಾಮೀಜಿ, ಲಿಂಗದಹಳ್ಳಿ ವೀರಭದ್ರ ಸ್ವಾಮೀಜಿ, ಮಣಕೂರ ಮಲ್ಲಿಕಾರ್ಜುನ ಸ್ವಾಮೀಜಿ ಉಪಸ್ಥಿರಿರುವರು ಎಂದರು. 

ಉಪಸಭಾಪತಿ ರುದ್ರ​‍್ಪ ಲಮಾಣಿ, ಶಾಸಕ ಪ್ರಕಾಶ ಕೋಳಿವಾಡ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಸಂತೋಷಕುಮಾರ ಪಾಟೀಲ ಹಾಗೂ ಕುಟುಂಬದವರು ಪ್ರಸಾದ ಸೇವೆ ನಡೆಸಿಕೊಡುವರು. ವಾಗೀಶ ಮಳೇಮಠ ಹಾಗೂ ಬೆಂಗಳೂರಿನ ಸುಜ್ಞಾನ ಮೂರ್ತಿ ಹಿರೇಮಠ ಅವರು ಹೂವಿನ ಸೇವೆ ಮಾಡಲಿದ್ದಾರೆ ಎಂದು ತಿಳಿಸಿದರು. 

ಜು.21 ರಂದು ಗುರುಪೌರ್ಣಿಮೆ ಹಾಗೂ ಜನಜಾಗೃತಿ ಧರ್ಮ ಸಮಾರಂಭ ಬೆಳಿಗ್ಗೆ 8 ಉಜ್ಜಯಿನಿ ಸಿದ್ದಲಿಂಗ ಸ್ವಾಮೀಜಿ ಅವರ ಇಷ್ಟಲಿಂಗ ಮಹಾಪೂಜೆ ನಡೆಯುತ್ತದೆ. ನಂತರ 11 ಗಂಟೆಗೆ ಧರ್ಮ ಸಭೆ ನಡೆಯಲಿದೆ. ಉಜ್ಜಿಯಿನಿ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹೊನ್ನಾಳಿ ಹಿರೇಕಲ್ಮಠದ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ವಹಿಸುವರು. ವಾಗೀಶ ಪಂಡಿತಾರಾಧ್ಯ ಧಾರ್ಮಿಕ ಪಾಠ ಶಾಲೆ ಸಾಧಕರು ಮತ್ತು ವಟುಗಳಿಂದ ವೇದ ಘೋಷ ಮಾಡುವರು ಎಂದರು.  

ವಿಶೇಷ ಆಹ್ವಾನಿತರಾಗಿ ಹಾವೇರಿ  ಗದಗ ಕ್ಷೇತ್ರದ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕ ಅರುಣಕುಮಾರ ಪೂಜಾರ, ಸುನಂದಮ್ಮ ತಿಳುವಳ್ಳಿ, ನಗರಸಭೆ ಸದಸ್ಯೆ ಸುಮಂಗಲಾ ಪಾಟೀಲ ಅವರು ಆಗಮಿಸುವರು. ಆನಂದಸ್ವಾಮಿ ಹಿರೇಮಠ ಅವರು ಹೂವಿನ ಸೇವೆ ಸಲ್ಲಿಸುವರು. ಶಕುಂತಲಾ ವೀರಣ್ಣ ಅಂಗಡಿ ಹಾಗೂ ಕುಟುಂಬದವರು ಮತ್ತು ಅಶೋಕ ಶಂಕ್ರ​‍್ಪ ಅರಳೇಶ್ವರ ಕುಟುಂಬದವರು ಪ್ರಸಾದ ಸೇವೆ ನಡೆಸಿಕೊಡಲಿದ್ದಾರೆ ಎಂದರು. 

ಶಿವಯೋಗಿ ಹಿರೇಮಠ ಮಾತನಾಡಿ, ಮೂರು ದಿನಗಳ ಕಾಲ ನಡೆಯುವ ಈ ಆಷಾಡ ಮಾಸದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.   

ಸ್ವಾಗತ ಸಮಿತಿ ಅಧ್ಯಕ್ಷ ಫಕ್ಕೀರೇಶ ಭಸ್ಮಾಂಗಿಮಠ,  ಮುತ್ತಣ್ಣ ಸುರಳೀಕೇರಿಮಠ, ಮುತ್ತು ಪಾಟೀಲ, ರಾಜು ತಿಳವಳ್ಳಿ, ಎಸ್‌.ಸಿ. ಷಡಾಕ್ಷರಿಮಠ, ಗಾಯತ್ರಮ್ಮ ಕುರುವತ್ತಿ, ಸೋಮಯ್ಯ ಹಿರೇಮಠ, ಹಾಲಸಿದ್ಧಶಾಸ್ತ್ರಿ ಇದ್ದರು. 


ಸುದ್ದಿ ಓದಿ