ಮನರಂಜನೆ

ವಿವಾದವಾಗಲೆಂದೇ ‘ಕಸ್ತೂರಿ ನಿವಾಸ’ ನಿರ್ಮಾಪಕರು ಸುಮ್ಮನಿದ್ದಾರೆಯೇ?

ವಿವಾದವಾಗಲೆಂದೇ ‘ಕಸ್ತೂರಿ ನಿವಾಸ’ ನಿರ್ಮಾಪಕರು ಸುಮ್ಮನಿದ್ದಾರೆಯೇ?

ವಿವಾದವಾಗಲೆಂದೇ ‘ಕಸ್ತೂರಿ ನಿವಾಸ’ ನಿರ್ಮಾಪಕರು ಸುಮ್ಮನಿದ್ದಾರೆಯೇ?

-ಎಸ್‍. ಆಶಾ ಕಶ್ಯಪ್

 

ಬೆಂಂಗಳೂರು, ಆ 28: ಕೆಲವು ಚಿತ್ರಗಳೇ ಹಾಗೆ... ಅವಕ್ಕೆ ಅವೇ ಸಾಟಿ.  ಜೀವನ ಚೈತ್ರ, ಕಸ್ತೂರಿ ನಿವಾಸ, ಸನಾದಿ ಅಪ್ಪಣ್ಣ. . ಹೀಗೆ ಸಾಲು ಸಾಲು ಚಿತ್ರಗಳಿವೆ.  ಇಂತಹ ಚಿತ್ರಗಳನ್ನು ಮತ್ತೆ ನಿರ್ಮಿಸಲು ಸಾಧ್ಯವಿಲ್ಲ.  ಹಾಗೆಯೇ ಅವುಗಳ ಶೀರ್ಷಿಕೆಯನ್ನು ಮರುಬಳಕೆ ಮಾಡುವಾಗಲೂ  ಎಚ್ಚರಿಕೆ ವಹಿಸುವ ಅಗತ್ಯವಿರುತ್ತದೆ.

    

ಈ ಪೀಠಿಕೆ ಏಕೆಂದರೆ, ರವೀಶ್ ಹಾಗೂ ರೂಬಿನ್ ರಾಜ್ ಹೆಸರಿನ  ನಿರ್ಮಾಪಕರುಗಳು ತಮ್ಮ ಚಿತ್ರಕ್ಕೆ ‘ಕಸ್ತೂರಿ ನಿವಾಸ’ ಹೆಸರಿಟ್ಟು, ರಚಿತಾ ರಾಮ್‍ ಅವರನ್ನು ನಾಯಕಿಯಾಗಿಸಿ ಸಿನಿಮಾ     ಮಾಡಲು ಹೊರಟಿದ್ದಾರೆ.  ನಿರ್ದೇಶನದ ಹೊಣೆಯನ್ನು     ದಿನೇಶ್ ಬಾಬು ವಹಿಸಿಕೊಂಡಿದ್ದಾರೆ.

    

ಆದರೆ ‘ಕಸ್ತೂರಿ ನಿವಾಸ’ ಟೈಟಲ್ ಅನಾವರಣಗೊಂಡು, ಕೆಲವರಿಂದ  ಅಸಮಾಧಾನ ವ್ಯಕ್ತಪಡಿಸಿದಾಗ, ಟೈಟಲ್ ಬದಲಿಸುವಂತೆ ಸ್ವತಃ ದಿನೇಶ್ ಬಾಬು ನಿರ್ಮಾಪಕರಲ್ಲಿ ಮನವಿ   ಮಾಡಿದರಂತೆ. ನಿವಾಸ ತೆಗೆದು ‘ಕಸ್ತೂರಿ’ ಇಟ್ಟುಕೊಳ್ಳಿ ಸಾಕು ಎಂದರಂತೆ.

    

ಆದಾಗ್ಯೂ, ಶೀರ್ಷಿಕೆ ಬದಲಿಸಲು ನಿರ್ಮಾಪಕರು ಮನಸ್ಸು ಮಾಡಲಿಲ್ಲವೆಂದರೆ, ಬಹುಶಃ ವಿವಾದವಾಗಲಿ ಎಂದೇ ಸುಮ್ಮನಿದ್ದಾರೆಯೇ?  ಅಥವಾ ಫಿಲ್ಮ್ ಛೇಂಬರ್ ಅನುಮತಿ ಕೊಟ್ಟ ಮೇಲೆ ಯಾರು     ಬೇಸರಿಸಿದರೆ ನಮಗೇನಾಗಬೇಕು ಎಂದು ನಿರ್ಲಕ್ಷ್ಯ ತೋರಿದರೇ ಗೊತ್ತಿಲ್ಲ.  ಕನ್ನಡಿಗರ ಭಾವನೆಗೆ ಈಗಾಗಲೇ ಹತ್ತಿರವಾಗಿರುವ ಶೀರ್ಷಿಕೆಯೊಂದನ್ನು  ಚಿತ್ರಕ್ಕಿಟ್ಟು, ಅದರೊಂದಿಗೆ ಆಟವಾಡುವ ಬದಲು ಹೆಸರು ಬದಲಿಸುತ್ತಾರೋ ಅಥವಾ ಕಾನೂನು ಸಮರಕ್ಕೆ  ಮುಂದಾಗುವರೋ ಕಾದು ನೋಡೋಣ.

     

ಸುದ್ದಿ ಓದಿ