ಅಥಣಿ

ಅಮ್ಮಾಜೇಶ್ವರಿ, ಬಸವೇಶ್ವರ ಏತ ನೀರಾವರಿ ಯೋಜನೆ ಶೀಘ್ರ ಪೂರ್ಣಗೊಳಿಸಿ: ಸರಕಾರದ ವಿಳಂಬ ಧೋರಣೆ ಖಂಡಿಸಿ ರೈತ ಸಂಘ ಹಸಿರು ಸೇನೆಯಿಂದ ರಸ್ತೆ ತಡೆ ಪ್ರತಿಭಟನೆ

ಅಮ್ಮಾಜೇಶ್ವರಿ, ಬಸವೇಶ್ವರ ಏತ ನೀರಾವರಿ ಯೋಜನೆ ಶೀಘ್ರ ಪೂರ್ಣಗೊಳಿಸಿ: ಸರಕಾರದ ವಿಳಂಬ ಧೋರಣೆ ಖಂಡಿಸಿ ರೈತ ಸಂಘ ಹಸಿರು ಸೇನೆಯಿಂದ ರಸ್ತೆ ತಡೆ ಪ್ರತಿಭಟನೆ

ಲೋಕದರ್ಶನ ವರದಿ 


ಅಥಣಿ 31: ಅಥಣಿ ಮತಕ್ಷೇತ್ರದ ಅಮ್ಮಾಜೇಶ್ವರಿ ಹಾಗೂ ಕಾಗವಾಡ ಮತಕ್ಷೇತ್ರದ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಅಥಣಿ ಹಾಗೂ ಕಾಗವಾಡ ತಾಲೂಕುಗಳ ರೈತ ಸಂಘ ಹಾಗೂ ಹಸೀರು ಸೇನೆ ಕಾರ್ಯಕರ್ತರು ಸ್ಥಳೀಯ ಶಿವಯೋಗಿ ವೃತ್ತದಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.  

    ಪ್ರತಿಭಟನೆ ನಡೆಸುತ್ತಿರುವ ರೈತರು ವೇದಿಕೆಯಿಂದಲೇ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹಾಗೂ ಅಥಣಿ ಶಾಸಕ ಮಹೇಶ ಕುಮಠಳ್ಳಿ ಇವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಬರಗಾಲ ಪೀಡಿತ ಅಥಣಿ ಮತಕ್ಷೇತ್ರದ ತೆಲಸಂಗ ಭಾಗಕ್ಕೆ ನೀರಾವರಿ ಒದಗಿಸುವ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ವಿಳಂಬವಾಗುತ್ತಿರುವ ಕಾರಣ ಕೇಳಿದಾಗ ಶಾಸಕ ಮಹೇಶ ಕುಮಠಳ್ಳಿ ಇವರು ಕರಿ ಮಸೂತಿ ಏತ ನೀರಾವರಿ ಯೋಜನೆಯಡಿ ತೆಲಸಂಗ ಭಾಗದ ಗ್ರಾಮಗಳಾದ ತೆಲಸಂಗ, ಕಕಮರಿ, ಹಾಲಳ್ಳಿ, ಕನ್ನಾಳ ಸೇರಿದಂತೆ ಏಳು ಗ್ರಾಮಗಳಿಗೆ ನೀರಾವರಿ ಒದಗಿಸುವ ಈ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ನಾನೇ ​‍್ರ​‍್ರಥಮ ಬಾರಿಗೆ ಹೋರಾಟ ಪ್ರಾರಂಭಿಸಿರುವುದು ಅಷ್ಟೇ ಅಲ್ಲ ಈ ಯೋಜನೆಗೆ ಅಮ್ಮಾಜೇಶ್ವರಿ ನೀರಾವರಿ ಯೋಜನೆ ಎಂದು ಹೆಸರು ಕೂಡ ಇಟ್ಟಿದ್ದು ನಾನೆ ಎಂದ ಅವರು ಸದ್ಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವಿಧಾನ ಪರಿಷತ್ ಚುನಾವಣೆ ನಂತರ ರೈತ ಸಂಘಟನೆಗಳ ಸಭೆ ಕರೆದು ಈ ಯೋಜನೆಯ ಪ್ರಗತಿ ಕುರಿತಾಗಿ ಮಾಹಿತಿ ನೀಡುವೆ ಎಂದು ಹೇಳಿದರು.  

      ನಂತರ ರೈತ ಮುಖಂಡರು ಕಾಗವಾಡ ಶಾಸಕ ಶ್ರೀಮಂತ ಪಾಟೀಲರನ್ನು ಸಂಪರ್ಕಿಸಿದಾಗ ನಾನು ಶಾಸಕನಾದ ದಿನಂದಿಂದಲೇ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಅನುಷ್ಠಾನಕ್ಕಾಗಿ ಸತತ ಪ್ರಯತ್ನಿಸುತ್ತಿರುವೆ ಈ ಬಗಗೆ ನನ್ನ ಹತ್ತಿರ ದಾಖಲೆಗಳು ಕೂಡ ಇವೆ ಎಂದರು.  ನನ್ನ ಮತಕ್ಷೇತ್ರದ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ ಇದಕ್ಕಾಗಿ ಅಗತ್ಯ ಅನುದಾನ ಬಿಡುಗಡೆಗೊಳಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರನ್ನು ಸಾಕಷ್ಟು ಬಾರಿ ಆಗ್ರಹಿಸಿರುವೆ ಎಂದ ಅವರು ಮುಂದಿನ ನಾಲ್ಕೈದು ತಿಂಗಳೊಳಗಾಗಿಯೇ ಈ ಯೋಜನೆ ಪೂರ್ಣಗೊಳಿಸುವೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದರು.  

ಈ ಸಂಬಂಧದಲ್ಲಿ ವಿಧಾನ ಪರಿಷತ್ ಚುನಾವಣೆ ನಂತರ ಜೂನ್ 20 ರಂದು ಖಿಳೇಗಾಂವ ಬಸವೇಶ್ವರ ದೇವಸ್ಥಾನದಲ್ಲಿ ರೈತ ಸಂಘದ ಸದಸ್ಯರೊಂದಿಗೆ ಸಭೆ ಸೇರಿ ಚರ್ಚಿಸೊಣ ಹಾಗೂ ಯೋಜನೆಯ ಪ್ರಗತಿ ಕುರಿತು ಮಾಹಿತಿ ನೀಡುವೆ ಎಂದಾಗ ರೈತರು ಶಾಸಕರ ಮಾತಿಗೆ ಸಂತೋಷದಿಂದ ಒಪ್ಪಿಗೆ ಸೂಚಿಸಿದರು.  

    ಇದಕ್ಕೂ ಮೊದಲು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಂಬಗಿಯ ಸುರೇಶ ಮಹಾರಾಜರು, ರೈತ ಸಂಘದ ಮುಖಂಡರಾದ ಶಶಿಕಾಂತ ಪಡಸಲಗಿ, ಪ್ರಕಾಶ ಪೂಜಾರಿ, ದೀಪಕ್ ಬುರ್ಲಿ, ಅಣ್ಣಪ್ಪಾ ಹಳ್ಳೂರ, ಗುರ​‍್ಪ ಮಗದುಮ್, ಎಮ್‌.ಸಿ.ತಾಂಬೋಳಿ, ಸಂಪತ್ತಕುಮಾರ ಶೆಟ್ಟಿ ಸೇರಿದಂತೆ ಅನೇಕರು ಮಾತನಾಡಿ, ಕಾಗವಾಡ ಕ್ಷೇತ್ರದ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಹಾಗೂ ಅಮ್ಮಾಜೇಶ್ವರಿ ಯೋಜನೆಗೆ ಅಗತ್ಯ ಅನುದಾನ ಬಿಡುಗಡೆಗೊಳಿಸಿ ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.  

     ಈ ಸಂದರ್ಭದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ