ಪರ್ವತಿ ಗ್ರಾ.ಪಂ. ಅವ್ಯವಹಾರ: ಸಿಬ್ಬಂದಿ ವಜಾಕ್ಕೆ ಆಗ್ರಹ
ಗುಳೇದಗುಡ್ಡ,ಆ.1: ತಾಲೂಕಿನ ಪರ್ವತಿ ಗ್ರಾಮ ಪಂಚಾಯತಿಯಲ್ಲಿ ಅವ್ಯವಹಾರ ನಡೆಯುತ್ತಿದ್ದು, ಅವ್ಯವಹಾರ ನಡೆಯದಂತೆ ಕ್ರಮಕೈಗೆಳ್ಳಬೇಕು ಹಾಗೂ ಭಾಗಿಯಾದ ಸಿಬ್ಬಂದಿಯನ್ನು ವಜಾಮಾಡಬೇಕೆಂದು ಪರ್ವತಿ ಗ್ರಾಮದ ಹಿರಿಯರು ಹಾಗೂ ಯುವಕರು ಗುಳೇದಗುಡ್ಡ ತಾಪಂ ಸಿಬ್ಬಂದಿ ಬಡಿಗೇರ ಅವರಿಗೆ ಮನವಿ ಸಲ್ಲಿಸಿದರು.
ಶನಿವಾರ ಮನವಿ ಸಲ್ಲಿಸಿ ಮನವಿಯಲ್ಲಿ, ನರೇಗಾ ಯೋಜನೆಯ ಎನ್.ಎಮ್.ಆರ್.ಹಾಜರಾತಿಯಲ್ಲಿ ಗೈರಾಗಿದ್ದರೂ ಅವರಿಗೆ ಹಣವನ್ನು ಪಾವತಿಸಲಾಗಿದೆ. ಅಲ್ಲದೆ ಹಿಂದೆ ವಾಟರ್ಮ್ಯಾನ್ ಎಂದು ಕೆಲಸ ಮಾಡಿದವರನ್ನು ಬಿಟ್ಟು ಗ್ರಾಮ ಪಂಚಾಯತಿಯ ಆಡಳಿತ ಮಂಡಳಿಯ ಸಂಬಂಧಿಗೆ ಕೆಲಸ ಕೊಡುವ ಆಲೋಚನೆ ಮಾಡುತ್ತಿದ್ದಾರೆ. ತಾತ್ಕಾಲಿಕ ಕಸಸಂಗ್ರಹ ವಿಲೆವಾರಿ ವಾಹನಕ್ಕೆ ಚಾಲಕನನ್ನು ನಿಯಮನುಸಾರ ನೇಮಕಾತಿ ಮಾಡಬೇಕು. ಅಲ್ಲಿನ ಕೆಲವು ಸಿಬ್ಬಂದಿಗಳು ಕಚೇರಿ ಸಮಯದಲ್ಲಿಯೇ ಮದ್ಯಪಾನ ಮಾಡಿ ಬರುತ್ತಾರೆ. ಇದಕ್ಕೆಲ್ಲಾ ಕಡಿವಾಣ ಹಾಕಬೇಕೆಂದು ಮನವಿ ನೀಡಿದರು.
ಈ ಸಂದರ್ಬದಲ್ಲಿ ಪರ್ವತಿ ಗ್ರಾಮದ ಪರಶುರಾಮ ಜೋಗಿನ, ರಾಮಚಂದ್ರ್ಪ ಪೂಜಾರಿ, ಗೋಲಯ್ಯ ಹಿರೇಮಠ, ಬಸವರಾಜ ಕಬ್ಬರಗಿ, ಬಸವರಾಜ ಗುನಾರಿ, ನಾಗೇಶ ನರಸಪ್ಪನವರ, ಗೋವಿಂದಪ್ಪ ಗಾಜಿ, ಭೀಮಣ್ಣ ಜಟ್ಟಿ, ಪರಶುರಾಮ ಸೂಳಿಬಾವಿ, ಧರಿಯಪ್ಪ ತೂಗುಣಸಿ, ಕೃಷ್ನ ಸಡ್ಲಿ, ರಮೇಶ ಗಾಜಿ, ಪರುತಪ್ಪ ಗುಣಾರಿ ಮುಂತಾದವರಿದ್ದರು.