“ನಮ್ಮೂರ ವಿಶೇಷತೆ” ಶೀರ್ಷಿಕೆಯ ಬರಹ ಸ್ಪರ್ಧೆಗೆ ಆಹ್ವಾನ
ಧಾರವಾಡ 28: ಹಲವಾರು ಹೋರಾಟ, ತ್ಯಾಗ, ಬಲಿದಾನಗಳ ಹಿನ್ನಲೆಯಲ್ಲಿ ನಮ್ಮ ನಾಡಿಗೆ “ಕರ್ನಾಟಕ”ವೆಂದು ಮರುನಾಮಕರಣಗೊಂಡು ಬರೋಬ್ಬರಿ ಐವತ್ತು ವರ್ಷಗಳು ತುಂಬಿದ ಈ ಶುಭ-ಸಂದರ್ಭದಲ್ಲಿ ಬರಹ ಸ್ಪರ್ಧೆಯನ್ನು ಧಾರವಾಡದ ಗಣಕರಂಗ ಸಂಸ್ಥೆಯು ಕನ್ನಡದಲ್ಲಿ ಆಯೋಜಿಸಿದೆ. “ನಮ್ಮೂರ ವಿಶೇಷತೆ” ಎಂಬ ಶೀರ್ಷಿಕೆಯ ಸ್ಪರ್ಧೆಗೆ ಬರಹವು ನಿಮ್ಮ ಊರಿನ ಐತಿಹಾಸಿಕ, ಪ್ರೇಕ್ಷಣೀಯ, ಚಳುವಳಿ, ಸಾಧಕರು, ಅನಾಮಿಕರು, ಆಹಾರ, ಜೀವನಶೈಲಿ ಮುಂತಾದ ವಿಶಿಷ್ಟ ವಿಷಯಗಳನ್ನು ಹೊಂದಿರಬೇಕು. ಚುರುಕಾದ, ನವಿರಾದ, ಹೊಸ ರೂಪಕ, ಸ್ಥಳಿಯ ಪಡೆನುಡಿಗಳ ಸಮೃದ್ಧ ಭಾಷಾ ಬಳಕೆಯ ವಾಸ್ತವ, ವೈಜ್ಞಾನಿಕತೆಯೊಂದಿಗೆ ಸೃಜನಾತ್ಮಕ ನೆಲೆಯ ಆಕರ್ಷಕ ನವೀನ ಶೈಲಿಯ ನಿರೂಪಣೆಯ ಬರಹವಾಗಿರಬೇಕು.
ಸ್ಪರ್ಧೆಗೆ ಬರುವ ಆಯ್ದ ಬರಹಗಳನ್ನು ಸಂಪಾದಿಸಿ ಪುಸ್ತಕರೂಪದಲ್ಲಿ ಗಣಕರಂಗ ಪ್ರಕಾಶನದಿಂದ ಪ್ರಕಟಿಸಲಾಗುವುದು. ಭಾಗವಹಿಸಲು ಯಾವುದೇ ವಯೋಮಿತಿಯ ನಿರ್ಭಂಧವಿಲ್ಲ. ಪ್ರಥಮ ಬಹುಮಾನ ಐದು ಸಾವಿರ, ದ್ವಿತಿಯ ಬಹುಮಾನ ಮೂರು ಸಾವಿರ, ತೃತೀಯ ಬಹುಮಾನ ಎರಡು ಸಾವಿರ ಜೊತೆಗೆ ಪುಸ್ತಕ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಗುತ್ತದೆ.
ನಿಮ್ಮ ಬರಹವನ್ನು ಕಳಿಸಲು ಕೊನೆಯ ದಿನಾಂಕ : 20-10-2024. ಬರಹದ ಗಾತ್ರ, ಮಿತಿ ಮತ್ತು ಆವೃತ್ತಿ, ಕಳಿಸಬೇಕಾದ ಇಮೇಲ್ ಐಡಿ ಮತ್ತಿತರ ನಿಯಮಗಳ ಸಂಪೂರ್ಣ ಮಾಹಿತಿಗೆ 9845109480 (ಸಿದ್ಧರಾಮ), 9720685599 (ಗಣಪತಿ) ಮತ್ತು 8217645076 (ರವಿ) ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಲಾಗಿದೆ.