ರಾಣೆಬೆನ್ನೂರ

ಕಾರ್ಯಕರ್ತರ ಆತ್ಮವಲೋಕನ ಸಭೆ

ಕಾರ್ಯಕರ್ತರ ಆತ್ಮವಲೋಕನ ಸಭೆ

ರಾಣಿಬೆನ್ನೂರ:19 ಚುನಾವಣೆಯಲ್ಲಿ ಸೋಲು ಮತ್ತು ಗೆಲುವು ಸಹಜ ಪ್ರಕ್ರಿಯೆ. ಯಾರೂ ಸೋಲು ಎಂದು ಭಾವಿಸಬೇಡಿ, ಯಾರನ್ನು ದೂರ ಬೇಡಿ ಮತ್ತು ದ್ವೇಷ ಮಾಡಬೇಡಿ ಮತಗಳ ಅಂತರವನ್ನು ಗಮನಿಸಿದರೆ ಗೆಲುವು ನಮ್ಮದೇ ಆಗಿದೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು. 

ಮಂಗಳವಾರ ಇಲ್ಲಿನ  ವಿನಾಯಕ ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಲೋಕಸಭಾ ಚುನಾವಣೆಯ ಆತ್ಮಾವಲೋಕನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ 137 ವರ್ಷಗಳ ಭವ್ಯ  ಇತಿಹಾಸ ಇದೆ. ಇದು ಬಹುದೊಡ್ಡ ಆಲದಮರ ಇದ್ದಂತೆ. ಮತದಾರರು ಈಗಾಗಲೇ ಉತ್ತರದಲ್ಲಿ ಬಿಜೆಪಿಗೆ ಸರಿಯಾದ ರೀತಿಯಲ್ಲಿ ಉತ್ತರ ನೀಡಿದ್ದಾರೆ. ಇತಿಹಾಸದ ಕಾಂಗ್ರೆಸ್ ದೇಶಗಳಲ್ಲಿ ತನ್ನ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಸಂಶಯ ಬೇಡ ಎಂದರು. 

ನಡೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು ಅತ್ಯಂತ ಪ್ರಾಮಾಣಿಕವಾಗಿ ತಮ್ಮ ಕೆಲಸವನ್ನು ನಿರ್ವಹಿಸಿದ್ದಾರೆ ಇದರಲ್ಲಿ ಸಂಶಯವಿಲ್ಲ. ನಗರ ಪ್ರದೇಶದಲ್ಲಿ ಮೋದಿಗೆ ಯುವಕರ ಮತಗಳು ತಿರುಗಿವೆಯೇ ಹೊರತು ಕಾಂಗ್ರೆಸ್ ಕಾರ್ಯಕರ್ತರು  ಮತ್ತು ಮುಖಂಡರಿಂದಲ್ಲ. ಭವಿಷ್ಯದ ದಿನಗಳಲ್ಲಿ ಮತ್ತಷ್ಟು ಪಕ್ಷವನ್ನು ಬಲಪಡಿಸಲು ಮುಖಂಡರ ಮಾರ್ಗದರ್ಶನದಲ್ಲಿ ಮುಂದಾಗುವುದಾಗಿ  ಭರವಸೆ ನೀಡಿದರು. 

ಪರಾಜಿತ ಅಭ್ಯರ್ಥಿ ಆನಂದಸ್ವಾಮಿ ಗಡ್ಡ ದ್ದೇವರಮಠ ಮಾತನಾಡಿ, ಜಿಲ್ಲೆಯಲ್ಲಿ, ಇರುವ ಯಾವುದೇ  ಮುಖಂಡರ ಮತ್ತು ಕಾರ್ಯಕರ್ತರ ಸಂಪರ್ಕವಿಲ್ಲದ ನನಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೆಂಬ ಏಕೈಕ ಕಾರಣಕ್ಕಾಗಿ ಒಪ್ಪಿಕೊಂಡು ಪ್ರಥಮ ಬಾರಿಗೆ ಅಧಿಕ ಮತಗಳನ್ನು ನೀಡಿರುವುದು ತಮಗೆ ಸಂತೋಷವಾಗಿದೆ ಎಂದರು. 

ಕಾಂಗ್ರೆಸ್ ಪಕ್ಷ ಬಡವರ, ದೀನದಲಿತರ, ಹಿಂದುಳಿದವರ ಜನಸಾಮಾನ್ಯರ ಪಕ್ಷ ಇದರಲ್ಲಿ ಯಾವುದೇ ತಾರತಮ್ಮೆವಿಲ್ಲಾ, ಇಲ್ಲಿನ ಮತದಾರರು, ಪ್ರಥಮ ಅವಧಿಯಲ್ಲಿಯೇ, ಗುರುತಿಸುವಂತೆ ಮಾಡಿದ್ದಾರೆ. ಸೋಲು ಸಹಜ ಮುಂದಿನ ದಿನಮಾನಗಳಲ್ಲಿ ಜಾಗ್ರತರಾಗಿ ಉತ್ತಮ ಫಲಿತಾಂಶವನ್ನು ಪಡೆಯುವುದರ ಮೂಲಕ ನಂಬಿದ ಮತದಾರರ ಸೇವೆ ಮಾಡಲು ಮುಂದಾಗೋಣ ಎಂದು ವಿನಮ್ರ ಮನವಿ ಮಾಡಿದರು. 

ಗಡ್ಡದ್ದೇವರಮಠ ಅವರ ಗೆಲುವು ನಿಶ್ಚಿತವಾಗಿತ್ತು. ಎಲ್ಲ ರೀತಿಯ ಪ್ರಯತ್ನ ಮಾಡಲಾಗಿದೆ. ಕೆಲವು ಕಡೆ ಏನೊ ಕಾರಣದಿಂದ ಸೋಲು ಅನುಭವಿಸಬೇಕಾಯಿತು. ಪ್ರತಿ ಹಂತದಲ್ಲಿಯೂ ಪಕ್ಷದಲ್ಲಿದ್ದ ಹಳೆಯ ಮುಖಂಡರನ್ನು ಬರಮಾಡಿಕೊಂಡು ಅವರಿಗೆ ಆಯಾ ಪ್ರದೇಶ ಮತ್ತು ಅವರ ಕ್ಷೇತ್ರದಲ್ಲಿ ಜವಾಬ್ದಾರಿ ನೀಡಬೇಕು. ಅದಕ್ಕಾಗಿ ಇಂದಿನಿಂದಲೇ ಶಾಸಕರು ಮತ್ತು ಮುಖಂಡರು ಮೇಲಿಂದ ಮೇಲೆ ಸಭೆಯನ್ನು ಆಯೋಜಿಸಿ ಸಾಧಕ ಬಾದಕ ಕುರಿತು ಚಿಂತಿಸಿ, ಪಕ್ಷ ಬೆಳೆಸುವ ಕಾರ್ಯದಲ್ಲಿ ಮುಂದಾಗಬೇಕು ಎಂದು ತಮ್ಮಗಳ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. 

ಗ್ರಾಮೀಣ ಅಧ್ಯಕ್ಷ ಮಂಜನಗೌಡ ಪಾಟೀಲ, ನಗರ ಅಧ್ಯಕ್ಷ ಶೇರುಖಾನ್ ಕಾಬೂಲಿ, ಯುವ ಅಧ್ಯಕ್ಷ ಬಿರೇಶ್, ರವೀಂದ್ರಗೌಡ ಪಾಟೀಲ್, ಆನಂದಪ್ಪ ದೀಪಾವಳಿ, ಎಸ್‌.ಹೆಚ್‌. ಪಾಟೀಲ್, ಪುಟ್ಟಪ್ಪ ಮರಿಯಮ್ಮನವರ, ರುಕ್ಮಿಣಿಬಾಯಿ ಸಾಹುಕಾರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಮುಖಂಡರು ಮಾತನಾಡಿದರು. 

ಜಿಪಂ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ಚನ್ನಮಲ್ಲಯ್ಯ, ವೆಂಕಟೇಶ ಬಣಕಾರ, ನೀಲಕಂಠಪ್ಪ ಕುಸಗೂರ, ಕೃಷ್ಣಪ್ಪ ಕಂಬಳಿ, ಸಿದ್ದಪ್ಪ ಅಂಬಲಿ, ರಾಜಣ್ಣ ಮೋಟಗಿ, ಬಿ.ಬಿ. ನಂದ್ಯಾಲ, ಮಹೇಶ್ ಅಡಿವೆಪ್ಪನವರ್, ಜಯಶ್ರೀ ಪಿಶೆ, ರಾಮಣ್ಣ ನಾಯಕ, ಸಣ್ಣತಮ್ಮಪ್ಪ ಬಾರ್ಕಿ, ಬಸನಗೌಡ ಮರದ, ಗೀರೀಶ್ ಹೆಗ್ಗಪ್ಪನವರ್, ಚಂದ್ರ​‍್ಪ ಬೇಡರ್, ವಿ.ಎಂ. ಜೊಗಾರ, ಇರ್ಫಾನ್ ದಿಡಗೂರ್, ಮಹೇಶ್ ಕೆಂಚರೆಡ್ಡಿ ಇದ್ದರು. 


ಸುದ್ದಿ ಓದಿ