ಅಂತರರಾಜ್ಯ ಕ್ರೀಡಾಕೂಟ, ಮೌಂಟ್ ಕಾರ್ಮೆಲ್ ಶಾಲೆಗೆ ಪ್ರಥಮ ಸ್ಥಾನ
ಹೂವಿನಹಡಗಲಿ 07: ಕಲಬುರಗಿಯಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ಗೋವಾ ಪ್ರಾಂತ್ಯದ ಮೌಂಟ್ ಕಾರ್ಮೆಲ್ ಶಾಲೆಗಳ ಕ್ರೀಡಾಕೂಟದಲ್ಲಿ ಹಡಗಲಿ ಮೌಂಟ್ ಕಾರ್ಮೆಲ್ ಶಾಲೆಯ ಬಾಲಕಿಯರು ಖೋ ಖೋ ಪಂದ್ಯದಲ್ಲಿ ಜಯಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. 6 ರಿಂದ 7ನೇ ತರಗತಿಯ ವಿಭಾಗದ ತಾಜ್ ಕಲ್ಮಾ, ಅಲ್ಪೋನ್ಸಾ ಕೆ. ವೈಷ್ಣವಿ ಕೆ. ಅಮೂಲ್ಯ ಕೆ. ಪಿಲೋಮಿನಾ ಕೆ. ಉಮ್ಮಿರುಹಿದಾ, ಐ ಸುಷ್ಮಿತಾ, ತೇಜಸ್ವಿನಿ ಬಿ. ದೀಕ್ಷಾ ಸೊಪ್ಪಿನ, ಮೆಹರ್ ತಾಜ್, ಮೇಘನಾ ಡಿ ಬಿ ಎಂ. ಕೆ.ಸಾವಿತ್ರಿ, ತಂಡ ಉತ್ತಮ ಸಾಧನೆ ಮಾಡಿದೆ. ಅಕ್ಟೋಬರ್ 30 ರಂದು ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳ ಅಂತರರಾಜ್ಯಮಟ್ಟದ ಮೊದಲನೇ ಕ್ರೀಡಾಕೂಟ ಕಲಬುರಗಿ ಜಿಲ್ಲೆಯ ಕಡಗಂಚಿ ಮೌಂಟ್ ಕಾರ್ಮೆಲ್ ಶಾಲೆಯ ಕ್ರೀಡಾಂಗಣದಲ್ಲಿ ನಡೆಯಿತು.
ಹಡಗಲಿ ಶಾಲೆಯ ಸುಮಾರು 51 ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಥ್ರೋಬಾಲ್ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಮತ್ತು ಬಾಲಕರ ಖೋ ಖೋ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಮಲ್ಲಿಗೆ ನಾಡಿಗೆ ಕೀರ್ತಿ ತಂದಿದ್ದಾರೆ. ಅಂತರರಾಜ್ಯ ಕ್ರೀಡಾ ಕೂಟದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶಾಲೆಯ ಪ್ರಾಂಶುಪಾಲರಾದ ಫಾದರ್ ವಿಕ್ಟರ್ ವಿಜಯ್ ಫೈಸ್. ಸಂಚಾಲಕರಾದ ಫಾದರ್ ಸಂದೀಪ್ ಕುಮಾರ್. ಫಾದರ್ ಅನೀಲ್ ಪ್ರಶಾಂತ್ ಕಾರ್ಮೆಲ್ ಸೇವಾ ಸದನದ ಮಠಾಧಿಪತಿಗಳಾದ ಫಾದರ್ ಡೆನ್ಜಿಲ್ ವೇಗಸ್ ಸೇರಿದಂತೆ ದೈಹಿಕ ಶಿಕ್ಷಕರಾದ ಮಂಜುನಾಥ ಸಿ. ವಿದ್ಯಾ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗಳು ಪಾಲಕ ಪೋಷಕರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿ ಅಭಿನಂದಿಸಿದ್ದಾರೆ.