ರಾಣೆಬೆನ್ನೂರ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ರಾಣಿಬೆನ್ನೂರ 14:  ಸ್ಥಳೀಯ ಕೆಎಲ್‌ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.  

ಈ ವೇಳೆ ತಾಲೂಕಿನ ಮುದೇನೂರ ಗ್ರಾಮ ನೈಸರ್ಗಿಕ ಕೃಷಿಕ ಮಹಿಳೆ ಸುನಿತಾ ಗಂಗನಗೌಡ್ರ  ಮಾತನಾಡಿ, ಸಾವಯವ ಕೃಷಿ ಪದ್ಧತಿಯನ್ನು ಬಳಸಿಕೊಂಡು ಕೃಷಿಯಲ್ಲಿ ಪ್ರಕ್ರೃತಿ ಅಂಶಗಳನ್ನು ಉಳಿಸುವುದು ಮತ್ತು ಬೆಳೆಸುವುದು ಇಂದಿನ ಅಗತ್ತವಾಗಿದೆ. ಅತ್ಯಂತ ಕಡಿಮೆ ಬಂಡವಾಳವನ್ನು ಹೂಡಿಕೆ ಮಾಡಿ ಲಾಭವನ್ನು ಗಳಿಸಬೇಕಿದೆ ಜೊತೆಗೆ ನೆಲ, ಜಲ, ಗಾಳಿ, ಬೆಳಕು ಇವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಹ್ರೆಣೆಯಾಗಿದೆ ಎಂದರು. 

ಇದೇ ಸಂದರ್ಭದಲ್ಲಿ ನೈಸರ್ಗಿಕ ಕೃಷಿಕ ಮಹಿಳೆ ಸುನಿತಾ ಗಂಗನಗೌಡ್ರ  ಮತ್ತು ಮಹಿಳಾ ಉಪನ್ಯಾಸಕರನ್ನು ಶಿಕ್ಷಣ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಪ್ರಾಚಾರ್ಯ ಪ್ರೊ. ನಾರಾಯಣ ನಾಯಕ ಎ. ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಸಾಯಿಲತಾ ಮಡಿವಾಳರ,  ಪ್ರೊ.ಎಮ್‌.ಎನ್ ಸೂರಣಿಗಿ, ಪ್ರೊ.ನಾಗರಾಜ ಗವಿಯಪ್ಪನವರ, ಪ್ರೊ.ಶ್ರೀಕಾಂತ ಕುಂಚೂರ, ಪ್ರೊ. ಮಂಜಪ್ಪ ಸಿ ಎಸ್, ವೀರಣ್ಣ ಸಿ.ಕೆ ಮತ್ತಿತರರು ಇದ್ದರು. 


ಸುದ್ದಿ ಓದಿ