ಅಂತರರಾಷ್ಟ್ರೀಯ ಕ್ಷಯ ರೋಗ ದಿನ ಜಾಗೃತಿ ಜಾಥಾ
ಲೋಕದರ್ಶನ ವರದಿ
ಸಿರುಗುಪ್ಪ 26: ಕ್ಷಯ ರೋಗ ಗುಣಪಡಿಸುವ ಕಾಯಿಲೆ ಆಗಿದ್ದು ಆತಂಕ ಪಡಬೇಕಿಲ್ಲ ಎಂದು ತಹಶೀಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ ಹೇಳಿದರು ನಗರದ ಸರ್ಕಾರಿ ತಾಲ್ಲೂಕು ಆರೋಗ್ಯ ಇಲಾಖೆ ಕಾರ್ಯಾಲಯದ ಎದುರುಗಡೆ ಹಮ್ಮಿಕೊಂಡ ಕರ್ನಾಟಕ ಸರ್ಕಾರ ರಾಷ್ಟ್ರೀಯ ಆರೋಗ್ಯ ಅಭಿಯಾನ ತಾಲ್ಲೂಕು ಪಂಚಾಯತ್ ತಾಲ್ಲೂಕು ಆಡಳಿತ ನಗರಸಭೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಅಂತರರಾಷ್ಟ್ರೀಯ ಕ್ಷಯ ರೋಗ ದಿನದ ಪ್ರಯುಕ್ತ ಕ್ಷಯ ರೋಗದ ಜಾಗೃತಿ ಜಾಥಾಕ್ಕೆ ತಹಸೀಲ್ದಾರ್ ಚಾಲನೆ ನೀಡಿ ಮಾತನಾಡುತ್ತಾ ಕ್ಷಯ ಮುಕ್ತ ಭಾರತ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ ವೀರಣ್ಣ ಅವರು ಮಾತನಾಡಿ ಕ್ಷಯ ರೋಗದ ಲಕ್ಷಣ 2ವಾರಕ್ಕೂ ಹೆಚ್ಚು ಕೆಮ್ಮು, ಸಂಜೆ ವೇಳೆ ಜ್ವರ, ರಾತ್ರಿವೇಳೆ ಬೆವರುವುದು, ಕಫದಲ್ಲಿ ರಕ್ತ ಬೀಳುವುದು, ಎದೆ ನೋವು, ಹಸಿವು ವಾಗದಿರುವುದು, ತೂಕ ಇಳಿಕೆ ಕಂಡು ಬಂದಲ್ಲಿ ಆಸ್ಪತ್ರೆಗೆ ಭೇಟಿ ನೀಡ ಬೇಕು ಎಂದು ಹೇಳಿದರು. ಡಾ. ವಿದ್ಯಾಶ್ರೀ, ಡಾ. ಚನ್ನವೀರಯ್ಯ, ಸಾಕ್ಷರತಾ ಕಾರ್ಯಕರ್ತ ಅಬ್ದುಲ್ ನಬಿ ಸೇರಿ ಆರೋಗ್ಯ ಸಿಬ್ಬಂದಿ ವರ್ಗ ಆಶಾ ಕಾರ್ಯಕರ್ತೆಯರು ವಿದ್ಯಾರ್ಥಿಗಳು ಭಾಗವಹಿಸಿದ್ದರು.