ಧಾರವಾಡ - ಹುಬ್ಬಳ್ಳಿ

ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ ಕಾರ್ಯಕ್ರಮ : ಜಯಶ್ರೀ ವರೂರ

ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ ಕಾರ್ಯಕ್ರಮ : ಜಯಶ್ರೀ ವರೂರ

ಧಾರವಾಡ 21: ಪ್ರತಿಯೊಬ್ಬರೂ ಸಾಕ್ಷರತೆಯ ಮಹತ್ವ ಅರಿತು ಓದಲು ಬರೆಯಲು ಬಾರದ ಅನಕ್ಷರಸ್ಥರನ್ನು ವಿದ್ಯಾವಂತರಾಗುವುದಕ್ಕೆ ಪ್ರೇರಣೆ ನೀಡಿ, ಅಕ್ಷರಾಭ್ಯಾಸ ಮಾಡಿಸಬೇಕು ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ವರೂರ ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಜಿಲ್ಲಾ ಲೋಕ ಶಿಕ್ಷಣ ಸಮಿತಿಯ ವತಿಯಿಂದ ಧಾರವಾಡ ತಾಲ್ಲೂಕಿನ ನರೇಂದ್ರ ಗ್ರಾಮದ, ಸರಕಾರಿ ಪ್ರೌಢಶಾಲೆ, ನರೇಂದ್ರ ಶಾಲೆಯಲ್ಲ್ಲಿ ಇಂದು ಏರಿ​‍್ಡಸಲಾದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ” ಕಾರ್ಯಕ್ರಮದಲ್ಲಿ ಅವರು ಸಾಕ್ಷರತಾ ಮುಖ್ಯ ಅಥಿತಿಯಾಗಿ ಮಾತನಾಡಿದರು. ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವುದು ಪುಣ್ಯದ ಕೆಲಸ. ಅನಕ್ಷರತೆಯ ಕತ್ತಲೆಯಲ್ಲಿರುವ ಮುಗ್ದ ಜನರನ್ನು ಸಾಕ್ಷರತೆಯ ಮೂಲಕ ಬೆಳಕಿಗೆ ತರುವಂತ ಕೆಲಸವನ್ನು ಮಾಡಬೇಕು. ಇಂತಹ ಕೆಲಸವನ್ನು ಮಾಡುವಾಗ ಯಾವುದೇ ಪ್ರತಿಫಲಾಪೇಕ್ಷೆ ಮಾಡದೆ ದೇಶ ಸೇವೆ ಎಂದು ತಿಳಿಯಬೇಕು. ಗ್ರಾಮ ಪಂಚಾಯತ ಅಧ್ಯಕ್ಷರಾದ ನಾಗೇಶ ಹಟ್ಟಿಹೋಳಿ ಅವರು ಉದ್ಘಾಟಿಸಿ ಮಾತನಾಡುತ್ತಾ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯು ಓದಲು ಹಾಗೂ ಬರೆಯಲು ತಿಳಿದಿರಬೇಕು ಎನ್ನುವುದೇ ವಿಶ್ವ ಸಾಕ್ಷರತಾ ದಿನದ ಆಶಯ ಎಂದರು. 

ಸಾಕ್ಷರತಾ ನೋಡಲ್ ಅಧಿಕಾರಿ ಎಸ್‌.ವಿ.ಸಂತಿ ಮಾತನಾಡುತ್ತ ಇಂದು ಶಿಕ್ಷಣ ಕ್ಷೇತ್ರ ಮಾತೃ ಇಲಾಖೆಯಾದ ಶಾಲಾ ಶಿಕ್ಷಣ ಇಲಾಖೆಯ ಮುಖ್ಯ ಶಿಕ್ಷಕರು, ಸಿಆರ್‌ಪಿಗಳು, ಬಿಆರ್‌ಸಿಸಿ, ಬಿಇಒ, ಜಿಲ್ಲಾಡಳಿತ ಮತ್ತು ಉಪ ನಿರ್ದೇಶಕರು ಆಡಳಿತ ಮುಂತಾದವರು ಇತರ ಸಹಭಾಗಿ ಇಲಾಖೆಗಳ ಸಹಕಾರದೊಂದಿಗೆ ಸಾಕ್ಷರತಾ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿ ಆಯ್ದಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮ ಮತ್ತು ಜನವಸತಿ ಪ್ರದೇಶಗಳಲ್ಲಿ ಅನಕ್ಷರಸ್ಥರ ಸಮೀಕ್ಷೆ, ಬೋಧಕರ ನೇಮಕ, ಹತ್ತಿರದ ಶಾಲಾ ಕಟ್ಟಡದಲ್ಲಿಯೇ ಸೂಕ್ತ ಅವಧಿಯಲ್ಲಿ ಕಲಿಕಾ ಕೇಂದ್ರವನ್ನು ಸ್ಥಾಪಿಸಿ ತರಗತಿಗಳನ್ನು ನಡೆಸಿ ಪರಿಕ್ಷೆ ಮಾಡಿ, ಫಲಿತಾಂಶ ಘೋಷಿಸಿ ಮೂಲಕ ಸಂಪೂರ್ಣ ಸಾಕ್ಷರರನ್ನಾಗಿ ಮಾಡೊಣ ಎಂದರು. 

ಜಾನಪದ ಗಾಯಕರಾದ ಬಸವರಾಜ ಬಳಿಗೇರ,ಜೆ.ಎಮ್‌.ಗಾಮನಗಟ್ಟಿ ಉತ್ತಮವಾಗಿ ಜಾಗೃತಿ ಹಾಡನ್ನು ಹೇಳಿದರು. ಉತ್ತಮ ಹಾಡು ಹೇಳಿದ ಇವರಿಗೆ ಹಾಗೂ ಉತ್ತಮ ಸಾಕ್ಷರತಾ ಬೋಧಕರಾದ ಪೂರ್ಣಿಮಾಘಂಟಿ ಇವರಿಗೆ ಸನ್ಮಾನಿಸಲಾಯಿತು. ಎಸ್‌.ಡಿ.ಎಮ್‌.ಸಿ ಅಧ್ಯಕ್ಷರಾದ ಬಸವರಾಜ ಹುಂಬೇರಿ, ಮುಖ್ಯಾಧ್ಯಾಪಕ ರಾದಜಗದೀಶ ಬಳೆಗಾರ, ಬಿಆರ.ಪಿರಾಘವೇಂದ್ರ ಬಡಿಗೇರ ಹಾಗೂ ಸಿಆರಪಿ ಮದನಕುಮಾರ ಪರಕಾಳಿ ಮಾತನಾಡಿದರು. 

ಕ್ಷೇತ್ರ ಸಮನ್ವಯಾಧಿಕಾರಿಗಳು ಕುಮಾರಕೆ.ಎಫ್, ಬಿಆರಪಿ ಅರುಣಕುಮಾರ ನವಲೂರ, ಮತ್ತು ಶಾಲೆಯಎಲ್ಲ ಸಹಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಪ್ರಾರಂಭದಲ್ಲಿ ವಿದ್ಯಾ ಜೋಶಿ ಸ್ವಾಗತಿಸಿದರು. ಎಂ.ವಾಯ್‌.ಬಡಿಗೇರ ನಿರೂಪಿಸಿದರು, ಕೊನೆಯಲ್ಲಿ ಬಿ.ಆರ್‌.ಕೊಪ್ಪದ ವಂದಿಸಿದರು.ಗ್ರಾಮ ಪಂಚಾಯತ ಅಧ್ಯಕ್ಷರಾದ ನಾಗೇಶ ಹಟ್ಟಿಹೋಳಿ ಅವರು ಉದ್ಘಾಟಿಸಿ ಮಾತನಾಡುತ್ತಾ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯುಓದಲು ಹಾಗೂ ಬರೆಯಲು ತಿಳಿದಿರಬೇಕು ಎನ್ನುವುದೇ ವಿಶ್ವ ಸಾಕ್ಷರತಾ ದಿನದಆಶಯಎಂದರು. 

ಪ್ರತಿಯೊಬ್ಬರೂ ಸಾಕ್ಷರತೆಯ ಮಹತ್ವ ಅರಿತು ಓದಲು ಬರೆಯಲು ಬಾರದ ಅನಕ್ಷರಸ್ಥರನ್ನು ವಿದ್ಯಾವಂತರಾಗುವುದಕ್ಕೆ ಪ್ರೇರಣೆ ನೀಡಿ, ಅಕ್ಷರಾಭ್ಯಾಸ ಮಾಡಿಸಬೇಕು ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ಜಯಶ್ರೀ ವರೂರ ಹೇಳಿದರು. ಜಾನಪದ ಗಾಯಕರಾದ ಬಸವರಾಜ ಬಳಿಗೇರ, ಜೆ.ಎಮ್‌.ಗಾಮನಗಟ್ಟಿ ಉತ್ತಮವಾಗಿ ಜಾಗೃತಿ ಹಾಡನ್ನು ಹೇಳಿದರು. ಉತ್ತಮ ಹಾಡು ಹೇಳಿದ ಇವರಿಗೆ ಹಾಗೂ ಉತ್ತಮ ಸಾಕ್ಷರತಾ ಬೋಧಕರಾದ ಪೂರ್ಣಿಮಾಘಂಟಿ ಇವರಿಗೆ ಸನ್ಮಾನಿಸಲಾಯಿತು. 


ಸುದ್ದಿ ಓದಿ