ರಾಣೆಬೆನ್ನೂರ

ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆ

ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆ

ರಾಣೇಬೆನ್ನೂರು೧೬: ನಗರದ  ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂದು ಬೆಳಗ್ಗೆ  ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಸಂವಿಧಾನದ ಪ್ರಸ್ತಾವನೆ ( ಪೀಠಿಕೆ )ಯನ್ನು  ಓದುವ ಕಾರ್ಯಕ್ರಮಕ್ಕೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶಿವಕುಮಾರ ಬಿ ಅವರು ಚಾಲನೆ ನೀಡಿದರು. ಡಾ.ಬಿ.ಮಹೇಶ್ವರಪ್ಪನವರು ಭಾರತದ ಸಂವಿಧಾನವನ್ನು ಭೋದಿಸಿದರು. ಡೀನ್ ಅಕ್ಯಾಡೆಮಿಕ್  ಡಾ.ಎಸ್.ಎಫ್. ಕೊಡದ್ , ವಿಭಾಗದ ಮುಖ್ಯಸ್ಥರು ,  ಮಹಾವಿದ್ಯಾಲಯದ ಸಿಬ್ಬಂದಿ ವರ್ಗ, 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸುದ್ದಿ ಓದಿ