ಹೂವಿನ ಹಡಗಲಿ

ಕ್ರೀಡೆಯಿಂದ ಬೌದ್ಧಿಕ ವಿಕಾಸ

ಕ್ರೀಡೆಯಿಂದ ಬೌದ್ಧಿಕ ವಿಕಾಸ

ಹೂವಿನ ಹಡಗಲಿ 07: ಕ್ರೀಡೆಗಳಿಂದ  ಮಾನಸಿಕ ದೈಹಿಕ ಬೆಳವಣಿಗೆ ಬೌದ್ಧಿಕ ವಿಕಾಸವಾಗುತ್ತದೆ ಎಂದು ಸರ್ವೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೋಡಿಹಳ್ಳಿ ಮುದುಕಪ್ಪ ಹೇಳಿದರು.ಪಟ್ಟಣದ ಜಿ ಪಿ ಜಿ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರೌ​‍್ರಢಶಾಲಾ ಕಬಡ್ಡಿ ಆಟದಲ್ಲಿ ವಿಜೇತ ತಂಡಕ್ಕೆ ಟ್ರೋಫಿ ವಿತರಿಸಿ ಅವರು ಮಾತನಾಡಿದರು.ಗ್ರಾಮೀಣ ಆಟಗಳಾದ ಖೋ ಖೋ ಕಬಡ್ಡಿ ಇನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಬೆಳೆಯಬೇಕು. ಯುವಕರು ದೇಶೀಯ ಆಟಗಳತ್ತ ಆಸಕ್ತಿ ಬೆಳೆಸಿಕೊಳ್ಳಿರಿ ಎಂದರು.ಉಪ ಪ್ರಾಂಶುಪಾಲ ಪಿ ಪ್ರಕಾಶ್ ಕ್ರೀಡೆಗಳನ್ನು ಸಂಘಟಿಸುವಲ್ಲಿ ದೈಹಿಕ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಹೇಳಿದರು. ಪೋಲೀಸ್ ಇಲಾಖೆಯ ಅಧಿಕಾರಿಗಳಾದ ಬಿ ಎಸ್ ವಾಸು ಪ್ರಥಮ ಸ್ಥಾನ ಪಡೆದ ಎಂ ಎಂ ಜಿ ಪ್ರೌಢಶಾಲೆ ಸೋವೇನಹಳ್ಳಿಹಾಗೂ ದ್ವಿತೀಯ ಸ್ಥಾನ ಗಳಿಸಿದ ಜಿ ಪಿ ಜಿ ಪ ಪೂ ಕಾಲೇಜು ವಿದ್ಯಾರ್ಥಿಗಳಿಗೆ ಟ್ರೋಫಿ ವಿತರಿಸಿದರು.ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಫಿ ಖವಾಸ್ಗೌರವಾಧ್ಯಕ್ಷ ಶಿವಾನಂದಪ್ಪಪಿ ಎನ್ ಪಾಟೀಲ್, ನಾಗರಾಜ್, ಸ್ವಾಮಿನಾಥ ರಾಮಸ್ವಾಮಿ ಕೃಷ್ಣಪ್ಪ, ರಶೀದಾ ಬೇಗಂನಿವೃತ್ತ ಮುಖ್ಯ ಗುರುಗಳಾದ ಸಿ ಡಿ ಲಿಂಗಶೆಟ್ಟರ್, ಜ್ಞಾನಗಂಗಾ ಪ್ರೌಢಶಾಲೆಯ ವಿಶ್ವನಾಥ್, ಇಕ್ಬಾಲ್ ಅಹಮದ್ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ